ಬೀದರ.07.ಆಗಸ್ಟ್.25:- ಬಂಜಾರ ಲಂಬಾಣಿ ಸಮಾಜಕ್ಕೆ ಈ ಹಿಂದೆ ಬಿಜೆಪಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಮಾಡಿ ಎಂದು ಕೇಂದ್ರಕ್ಕೆ ಶ್ರೀಫಾರಸ್ಸು ಮಾಡಿ ಒತ್ತಾಯಿಸಿತ್ತು ಅದರಂತೆ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ ದಾಸ ವರದಿಯಂತೆ ಶೇ೬% ರಷ್ಟು ಒಳಮೀಸಲಾತಿ ಕಲ್ಪಿಸಬೇಕೆಂದು ಬೀದರ ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ ಬಸವರಾಜ ಪವಾರ ವಕೀಲರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಆಯೋಗದ ವರದಿಯಂತೆ ಲಂಬಾಣಿ ,ಭೋವಿ, ಕೋರವ ಮತ್ತು ಕೊರಚ ಸಮುದಾಯಗಳಿಗೆ ನ್ಯಾಯಯುತವಾಗಿರುವಂತೆ ಶೇ೬% ರಷ್ಟಿ ಮೀಸಲಾತಿ ನೀಡಬೇಕು.೧೫೦ ಕೋಟಿ ರೂ.ವೆಚ್ಚದಲ್ಲಿ ಏಕ ಸದಸ್ಯ ಆಯೋಗವು ೧೦೧ ಪರಿಶಿಷ್ಟ ಜಾತಿಗಳ ಅಧ್ಯಾಯನ ನಡೆಸಿ ಒಳ ಮೀಸಲಾತಿ ದೊರಕುವಂತೆ ಆಯೋಗವು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ.
ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಈ ೪ ಸಮುದಾಯಗಳಿಗೆ ಶೇ ೧೫ರಿಂದ ಶೇ೧೭ ರಷ್ಟು ಒಳ ಮೀಸಲಾತಿ ನೀಡಬೇಕೆಂದು ಶೀಪಾರಸ್ಸು ಮಾಡಿತು ಆದರೆ ಈಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಆದ್ಯತೆ ನೀಡುವಂತೆ ಕಾಣುತ್ತಿಲ್ಲ. ಎತನ ಮಧ್ಯೆ ಪರಿಶಿಷ್ಟ ಜಾತಿಗಳಾದ ಎಡ ಮತ್ತು ಬಲ ಗಳಿಗೆ ಸಮಾನ ಮೀಸಲಾತಿ ನೀಡಿ ಈ ೪ ಸಮುದಾಯಗಳಿಗೆ ಅನ್ಯಾಯ ಮಾಡುವ ಹುನ್ನಾರ ಮತ್ತು ಕೆಲ ಕಾಂಗ್ರೇಸ್ ಸರ್ಕಾರವು ಸಚಿವರ ರಹಸ್ಯ ಸಭೆಗಳು ನಡೆದಿವೆ ಎಂದು ತಿಳಿದು ಬಂದಿದೆ.
ಹೀಗಾದಲ್ಲಿ ಬಂಜಾರ ,ಭೋವಿ, ಕೋರವ ಮತ್ತು ಕೊರಚ ಪರಿಶಿಷ್ಟ ಜಾತಿಗಳಿಗೆ ತೀವ್ರ ಅನ್ಯಾಯವಾಗಬಹುದಾಗಿದೆ.
ಈ ೪ ಸಮುದಾಯಗಳು ಅತ್ಯಂತ ಬಡತನ ರೇಖೆಗಿಂತಾಗಿದ್ದು ಆರ್ಥಿಕವಾಗಿ ಸಾಮಾಜಿಕವಾಗಿ ,ಶೈಕ್ಷಣಿಕವಾಗಿ ಹಿಂದುಳಿದಿರುತ್ತವೆ. ಬದುಕಲು ಬಲು ಕಷ್ಟ ಪಡುತ್ತಿರುವ ಈ ಸಮುದಾಯಗಳಿಗೆ ಸರ್ವಾಂಗೀಣ ಪ್ರಗತಿಗಾಗಿ ಶೇ೬%ರಷ್ಟು ಮೀಸಲಾತಿಯನ್ನು ಕೊಡಬೇಕೆಂದು ಬಸವರಾಜ ಪವಾರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.