02/08/2025 12:07 PM

Translate Language

Home » ಬೀದರ » ಜಾನುವಾರು ಗಣತಿ ಕಾರ್ಯ ಯಶಸ್ವಿಗೊಳಿಸಲು
ಎಲ್ಲರೂ ಸಹಕರಿಸಿ-ಸಿಇಓ ಡಾ.ಗಿರೀಶ ಬದೋಲೆ

ಜಾನುವಾರು ಗಣತಿ ಕಾರ್ಯ ಯಶಸ್ವಿಗೊಳಿಸಲು
ಎಲ್ಲರೂ ಸಹಕರಿಸಿ-ಸಿಇಓ ಡಾ.ಗಿರೀಶ ಬದೋಲೆ

Facebook
X
WhatsApp
Telegram


ಬೀದರ,06 ಡಿಸೆಂಬರ್24 :- ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬರುವ ಗ್ರಾಮ ಪಂಚಾಯತ ಪಿ.ಡಿ.ಓ. ಗಳಿಗೆ ಜಾನುವಾರು ಗಣತಿ ಸಮಯದಲ್ಲಿ ಎಣಿಕೆದಾರರು ಹಾಗೂ ಮೇಲ್ವಿಚಾರಕರು ಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲಿ ಪಂಚಾಯತ ವಾಟರ್ ಮ್ಯಾನ್ ಹಾಗೂ ಇತರೆ ಸಿಬ್ಬಂದಿಗಳು ಗಣತಿದಾರರಿಗೆ ಸಹಕಾರದೊಂದಿಗೆ ಜಿಲ್ಲೆಯ ಗ್ರಾಮಸ್ಥರು, ಸಾರ್ವಜನಿಕರು ಹಾಗೂ ರೈತಬಾಂಧವರಲ್ಲಿರುವ ಜಾನುವಾರುಗಳ ಸಂಪೂರ್ಣ ಮಾಹಿತಿಯನ್ನು ನೀಡಿ ಜಾನುವಾರು ಗಣತಿ ಕಾರ್ಯ ಯಶ್ವಸಿಗೊಳಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಸೂಚಿಸಿದರು.


ಅವರು ಇಂದು ಡಿ.6 ರಿಂದ ಮಾರ್ಚ.31 ರವರೆಗೆ ರಾಷ್ಟಾçದ್ಯಂತ, ರಾಜ್ಯಾದ್ಯಂತ, ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ 21ನೇ ಜಾನುವಾರು ಗಣತಿ ಕಾರ್ಯಕ್ರಮಕ್ಕೆ ತಮ್ಮ ನಿವಾಸದಲ್ಲಿ ಚಾಲನೆ ನೀಡಿ ಮಾತನಾಡಿದರು.


ಬೀದರ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ನಡೆದ ಜಾನುವಾರು ಗಣತಿ ಪ್ರಕಾರ ಔರಾದ (ಬಿ), ಭಾಲ್ಕಿ, ಬೀದರ, ಬಸವಕಲ್ಯಾಣ, ಹುಮನಾಬಾದ, ಚಿಟಗುಪ್ಪ, ಹುಲಸೂರ ಹಾಗೂ ಕಮಲನಗರ ನಡೆದ ಜಾನುವಾರು ಗಣತಿ ಪ್ರಕಾರ ದನಗಳು (173634), ಎಮ್ಮೆ (125510), ಕುರಿ (85948), ಮೇಕೆ (182854), ಹಂದಿ (20838) ಒಟ್ಟು (588784) ಹಾಗೂ ಕುಕ್ಕುಟ (734095) ಇರುತ್ತವೆಂದರು. ಅದೇ ರೀತಿ ಈ ಜಾನುವಾರು ಗಣತಿ ನಡೆಯುತ್ತಿದೆಂದರು.


ಈ ಸಂದರ್ಭದಲ್ಲಿ ಉಪನಿರ್ದೇಶಕರಾದ ಡಾ. ನರಸಪ್ಪಾ ಎ.ಡಿ, ಡಾ. ಗೌತಮ ಅರಳಿ, ಡಾ. ಉದಯಕುಮಾರ ಡಾ. ವಿಕ್ರಂ ಚಾಕೊತೆ ಡಾ. ಜಗದೀಶ ಬಿರಾದಾರ ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!