ಬೀದರ.20.ಜುಲೈ.25:- ಭಾಲ್ಕಿ ತಾಲ್ಲೂಕಿನ ಬಹು ಗ್ರ್ರಾಮ ಕುಡಿಯುವ ನೀರು ಯೋಜನೆಗಳಾದ 1) Multi Village water supply scheme to Alwai & Other 2 Habitaions in Bhalki taluka of Bidar Dist, 2) MULTI VILLAGE WATER SUPPLY SCHEME FOR MEHKAR & OTHER 4 HABITATIONS IN BHALKI TALUK OF BIDAR DISTRICT, 3) Multi village water supply Scheme to Wanjarkhed & other 5 habitations in Bhalki taluka of Bidar Dist ಕಾಮಗಾರಿಯನ್ನು ಪರಿವೀಕ್ಷಣೆ ಕೈಗೊಂಡು ಸದರಿ ಯೋಜನೆಯಡಿ ಕೈಗೊಳ್ಳಲಾಗುವ WTP, Jackwell, Sump, MBR, Rising main, Distribution & Water Source, ಗಳನ್ನು ಪರಿಶೀಲಿಸಿ ಸದರಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾ.ಕು.ನೀ ಮತ್ತು ನೈ. ಉಪ-ವಿಭಾಗ ಭಾಲ್ಕಿ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಸೂಚಿಸಿದರು.

ಅವರು ಶನಿವಾರ ಭಾಲ್ಕಿ ತಾಲ್ಲೂಕಿನ ಅಳವಾಯಿ, ಮೇಹಕರ, ಅಟರರ್ಗಾ, ಹಾಗೂ ಸಾಯಿಗಾಂವ ತಾಂಡಾ ಗ್ರಾಮಗಳ ಜಲ ಜೀವನ ಮೀಷನ್ ಕಾಮಗಾರಿಗಳ ಪರಿವೀಕ್ಷಣೆ ಮಾಡಿ ಮಾತನಾಡಿದರು.
ಅಟರರ್ಗಾ ಗ್ರಾಮ ಪಂಚಾಯತಿಯ ಅಟರರ್ಗಾ ಗ್ರಾಮ ಹಾಗೂ ಸಾಯಗಾಂವ ಗ್ರಾಮ ಪಂಚಾಯತಿಯ ಸಾಯಗಾಂವ ತಾಂಡಾ ಗ್ರಾಮದ ಜಲ ಜೀವನ ಮೀಷನ ಯೋಜನೆಯ ಎಕ ಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳನ್ನು ಪರಿಶೀಲಿಸಲಾಗಿದ್ದು ಸದರಿ ಗ್ರಾಮಗಳ ಕಾಮಗಾರಿಗಳು ಇಗಾಗಲೇ ಹರ್ ಘರ್ ಜಲ್ ಗ್ರಾಮವೆಂದು ಘೋಷಿಸಿ ಗ್ರಾಮ ಪಂಚಾಯ ತಿಗಳಿಗೆ ಹಸ್ತಾಂತರಿಸಲಾಗಿದೆ. ಸದರಿ ಯೋಜನೆಯ ಕಾಮಗಾರಿಗಳ ಕಾರ್ಯಚರಣೆ ಮತ್ತು ನಿರ್ವಹಣೆಯು ಗ್ರಾಮ ಪಂಚಾಯತಿ ಯಿಂದ ನಿರ್ವಹಿಸಿ ಗ್ರಾಮದ ಪ್ರತಿಯೊಬ್ಬ ನಾಗರಿಕರಿಗೆ ಶುಧ್ದ ಕುಡಿಯುವ ನೀರು ಪೂರೈಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ ಅಟರರ್ಗಾ ಹಾಗೂ ಸಾಯಗಾಂವ ಅವರಿಗೆ ತಿಳಿಸಿದರು.

ಭಾಲ್ಕಿ ತಾಲೂಕಿನ ಅಳವಾಯಿ ಗ್ರಾಮ ಪಂಚಾಯತಿಯ ಅಳವಾಯಿ ಗ್ರಾಮ ಹಾಗೂ ಮೇಹಕರ ಗ್ರಾಮ ಪಂಚಾಯತಿಯ ಮೇಹಕರ ಗ್ರಾಮಗಳ ಜಲ ಜೀವನ ಮೀಷನ ಯೋಜನೆಯ ಕಾಮಗಾರಿಗಳು ಪರಿಶೀಲಿಸಲಾಗಿದ್ದು ಸದರಿ ಕಾಮಗಾರಿಗಳು ಪ್ರಗತಿಯಲ್ಲಿರುವುದರಿಂದ, ಗುಣಮಟ್ಟದಿಂದ ಕೈಗೊಳ್ಳಲು ಹಾಗೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾ.ಕು.ನೀ&ನೈ. ಉಪ-ವಿಭಾಗ ಭಾಲ್ಕಿ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಭಾಲ್ಕಿ ತಾಲ್ಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ, ಭಾಲ್ಕಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಮಾಣಿಕರಾವ ಕೇರೂರೆ, ಬೀದರ ಜಿಲ್ಲಾ ಪಂಚಾಯತ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪತ್ರು ಜೇ. ಶಾಖಾಧಿಕಾರಿಗಳು ಗ್ರಾ.ಕು.ನೀ ಮತ್ತು ನೈಉವಿ ಭಾಲ್ಕಿ ಹಾಗೂ ಭಾಲ್ಕಿ ತಾಲ್ಲೂಕಿನ ಅಳವಾಯಿ, ಅಟರರ್ಗಾ, ಮೇಹಕರ ಮತ್ತು ಸಾಯಿಗಾಂವ ಗ್ರಾಮಗಳ ಗ್ರಾಮ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.