|

ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು.19.ಸೆಪ್ಟೆಂಬರ್.25:- ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸ್ಟಾಫ್‌ನರ್ಸ್‌ ಹುದ್ದೆಗೆ ಅರ್ಜಿ ಆಹ್ವಾನ
ಶ್ರೀ ಜಯದೇವ ಹೃದಯಾಲಯ (SJICR) ಬೆಂಗಳೂರಿನಲ್ಲಿ 15 ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ನರ್ಸಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. 

ಕೊನೆ ದಿನಾಂಕ ಸೆಪ್ಟೆಂಬರ್ 30.

ವೇತನ ರೂ. 22000/-. ಅಧಿಸೂಚನೆ ಮತ್ತು ಅರ್ಜಿ ನಮೂನೆಯನ್ನು SJICR ವೆಬ್‌ಸೈಟ್‌ನಿಂದ ಪಡೆಯಬಹುದು. ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರಿಗೆ ಮಾಹಿತಿ ಇಲ್ಲಿದೆ.

ಸಂಸ್ಥೆಯ ಹೆಸರು – ಶ್ರೀ ಜಯದೇವ ಇನ್ಸ್ಟಿಟ್ಯೂಟ್‌ ಆಫ್‌ ಕಾರ್ಡಿಯೋ ವಸ್ಕುಲರ್‌ ಸೈನ್ಸ್‌ ಅಂಡ್‌ ರಿಸರ್ಚ್‌

ಹುದ್ದೆಯ ಹೆಸರು – ಸ್ಟಾಫ್‌ ನರ್ಸ್‌

ಹುದ್ದೆಗಳ ಸಂಖ್ಯೆ – 15

ಉದ್ಯೋಗ ಸ್ಥಳ – ಬೆಂಗಳೂರು

ವೇತನ – 22000/ ಮಾಸಿಕ

ವಿದ್ಯಾರ್ಹತೆ – ಡಿಪ್ಲೋಮೋ ಇನ್‌ ನರ್ಸಿಂಗ್‌

ವಯೋಮಿತಿ – ಗರಿಷ್ಠ 35 ವರ್ಷಗಳು (ಎಸ್‌ಸಿ, ಎಸ್‌ಟಿ ಮತ್ತಿತರ ಸಮುದಾಯಗಳಿಗೆ 3-5 ವರ್ಷ ಸಡಿಲಿಕೆ ಇದೆ)

ಅರ್ಜಿ ಶುಲ್ಕ – ಸಾಮಾನ್ಯ ಅಭ್ಯರ್ಥಿಗಳಿಗೆ 2000 ರೂ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 1000 ರೂ.

ಆಯ್ಕೆ ವಿಧಾನ – ಮೆರಿಟ್‌ ಲಿಸ್ಟ್‌

ಅರ್ಜಿಯನ್ನು ನೇರವಾಗಿ ಈ ವಿಳಾಸಕ್ಕೆ ರಿಜಿಸ್ಟರ್‌ ಪೋಸ್ಟ್‌ ಮೂಲಕ ಕಳುಹಿಸಿ

ನಿರ್ದೇಶಕರು, ಆಡಳಿತ ಕಚೇರಿ, ಮೊದಲನೇ ಮಹಡಿ, SJIC&R ಮುಖ್ಯ ಕಚೇರಿ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್‌, ಬೆಂಗಳೂರು 560069

ಅಧಿಕೃತ ವೆಬ್‌ ಸೈಟ್‌ ವಿಳಾಸ – https://jayadevacardiology.com

Similar Posts

Leave a Reply

Your email address will not be published. Required fields are marked *