03/08/2025 7:17 PM

Translate Language

Home » ಲೈವ್ ನ್ಯೂಸ್ » ಜನಸಂಖ್ಯಾ ಸ್ಪೋಟದಿಂದ ದೇಶಕ್ಕೆ ಆಘಾತಕಾರಿ ಸಮಸ್ಯೆ: ಡಾ.ದಂಡಪ್ಪ ಬಿರಾದಾರ ಕಳವಳ

ಜನಸಂಖ್ಯಾ ಸ್ಪೋಟದಿಂದ ದೇಶಕ್ಕೆ ಆಘಾತಕಾರಿ ಸಮಸ್ಯೆ: ಡಾ.ದಂಡಪ್ಪ ಬಿರಾದಾರ ಕಳವಳ

Facebook
X
WhatsApp
Telegram

ರಾಯಚೂರು.03.ಆಗಸ್ಟ್.25: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಉಡಮಗಲ್ ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ನಡೆಯಿತು.


ಉಡಮಗಲ್ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿಯಾಗಿರುವ ಕನ್ನಡ ಕಲಾ ಶಿಕ್ಷಕರಾದ ಡಾ.ದಂಡಪ್ಪ ಬಿರಾದಾರ್ ಅವರು ಸಸಿಗೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶದ ಜನಸಂಖ್ಯೆಯು ಇದೀಗ 145 ಕೋಟಿಗೆ ತಲುಪುತ್ತಿದೆ. ಈ ಜನಸಂಖ್ಯಾ ಸ್ಪೋಟವನ್ನು ನಿಯಂತ್ರಣ ಮಾಡದಿದ್ದಲ್ಲಿ ಬಹಳಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.


ನವ ದಂಪತಿಯು ಮತ್ತು ವಿದ್ಯಾರ್ಥಿ ಯುವಜನರು ಈ ಬಗ್ಗೆ ಅರಿಯಬೇಕು. ನಾವಿಬ್ಬರು ನಮಗಿಬ್ಬರು, ಚಿಕ್ಕ ಸಂಸಾರ ಚೊಕ್ಕ ಸಂಸಾರ, ಹೆಣ್ಣ್ಣಿರಲಿ ಗಂಡಿರಲಿ ಎರಡೇ ಮಕ್ಕಳಿರಲಿ, ಚಿಕ್ಕ ಕುಟುಂಬ ಚೊಕ್ಕ ಕುಟುಂಬ, ಅತಿಯಾದ ಸಂತಾನ ಜೀವನಕ್ಕೆ ಭಾರ; ಮಿತ ಸಂತಾನ ಹೂವಿನ ಹಾರ ಎನ್ನುವಂತಹ ತತ್ವಗಳನ್ನು ಅರಿತು ನಡೆದಲ್ಲಿ ಜನಸಂಖ್ಯೆಯ ನಿಯಂತ್ರಣ ಸಾಧ್ಯವಿದೆ ಎಂದು ಅವರು ತಿಳಿಸಿದರು.


ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಗುರುಗಳಾದ ವೀರೇಶ್ ಅಂಗಡಿ ಮಾತನಾಡಿ, ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾದಂತೆ ಹೊಂದಾಣಿಕೆ ಸಮಸ್ಯೆ ಎದುರಾಗುತ್ತದೆ. ನನಗೆ ಕಮ್ಮಿ, ನಿನಗೆ ಹೆಚ್ಚು ಎನ್ನುವಂತಹ ತರತಮ ಭಾವನೆಗಳು ಉದ್ಭವಿಸುತ್ತವೆ. ಆಸ್ತಿ, ಹಣ, ಗಳಿಕೆಯಂತಹ ಸಮಸ್ಯೆಗಳು ಎದುರಾಗುತ್ತವೆ. ಇದನ್ನು ಪ್ರತಿಯೊಬ್ಬರು ಅರಿತು ಜನಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕು ಎಂದರು.


ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ್ ಅವರು ಮಾತನಾಡಿ, ಜನಸಂಖ್ಯಾ ಸ್ಪೋಟದ ಪರಿಣಾಮಗಳು, ದೇಶಕ್ಕೆ ಆಗುತ್ತಿರುವ ಅನಾಹುತ ಮತ್ತು ಬೆಳೆಯುತ್ತಿರುವ ಸಮಸ್ಯೆಗಳು. ಜನಸಂಖ್ಯೆ ನಿಯಂತ್ರಣದಿoದ ದೇಶಕ್ಕೆ ಆಗುತ್ತಿರುವ ಲಾಭಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಮಿಕವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪಾಂಡುರoಗ ದೇಸಾಯಿ, ನಫೀಸ್ ಅಂಜುಮ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ನುಡಿಮುತ್ತು ಸ್ಪರ್ಧೆ: ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ಶಾಲೆಯ ವಿದ್ಯಾರ್ಥಿಗಳಿಗೆ ಜನಸಂಖ್ಯೆ ನಿಯಂತ್ರಣದ ನುಡಿಮುತ್ತುಗಳ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ವಿದ್ಯಾರ್ಥಿಗಳು ನುಡಿಮುತ್ತುಗಳನ್ನು ಆಕರ್ಷಕವಾಗಿ, ಅಚ್ಚುಕಟ್ಟಾಗಿ, ಸ್ಪಷ್ಟವಾಗಿ ಹೇಳಿ ಅಧಿಕಾರಿಗಳ ಮೆಚ್ಚುಗೆ ಗಳಿಸಿದರು.
ವಿದ್ಯಾರ್ಥಿನಿಯರಾದ ಗೀತಾ, ಶೋಭಾ, ಸಿಂಧು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಭಾವನಾ ಸ್ವಾಗತಿಸಿದಳು. ಪೂರ್ಣಿಮಾ ವಂದಿಸಿದಳು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!