05 ಡಿಸೆಂಬರ್ 24 ಸೆಂಟೋಸಾದಲ್ಲಿ ನಡೆದ FIDE ವಿಶ್ವ ಚೆಸ್ ಚಾಂಪಿಯನ್‌ಶಿಪ್ 2024 ರ ಎಂಟನೇ ಸುತ್ತಿನಲ್ಲಿ ಭಾರತದ ಡಿ ಗುಕೇಶ್ ಮತ್ತು ಚೀನಾದ ಡಿಂಗ್ ಲಿರೆನ್ ಇಂದು ಡ್ರಾ ಮಾಡಿಕೊಂಡರು. ಇದು ಉಭಯ ಆಟಗಾರರ ನಡುವೆ ಸತತ ಐದನೇ ಡ್ರಾ ಆಗಿದ್ದು, ಅಂಕಗಳಲ್ಲಿ ಸಮಬಲ ಸಾಧಿಸಿದೆ. ಉಭಯ ಆಟಗಾರರು ತಲಾ ಒಂದು ಪಂದ್ಯ ಗೆದ್ದು 6 ಡ್ರಾ ಮಾಡಿಕೊಂಡು ತಲಾ ನಾಲ್ಕು ಅಂಕಗಳೊಂದಿಗೆ ಸಮಬಲ ಸಾಧಿಸಿದರು. ಚಾಂಪಿಯನ್‌ಶಿಪ್‌ನ ಉಳಿದ ಆರು ಪಂದ್ಯಗಳಲ್ಲಿ ಪ್ರಶಸ್ತಿಯನ್ನು ಪಡೆಯಲು ಪ್ರತಿಯೊಬ್ಬರಿಗೂ 3.5 ಹೆಚ್ಚಿನ ಅಂಕಗಳ ಅಗತ್ಯವಿದೆ.
