ಚಿತ್ರದುರ್ಗ.12.ಎಪ್ರಿಲ್.25:-ಚಿತ್ರದುರ್ಗ ನಗರದಲ್ಲಿ ಭೀಮ ಹೆಜ್ಜೆ ರಥಯಾತ್ರೆಗೆ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಡಾ ಬಿ.ಆರ್ ಅಂಬೇಡ್ಕರ್ ಅವರು ಕರ್ನಾಟಕಕ್ಕೆ ಬಂದು 100 ವರ್ಷ ಪೂರೈಸಿದ ಹಿನ್ನೆಲೆ ಭೀಮ ಹೆಜ್ಜೆ ರಥಯಾತ್ರೆಗೆ ಚಾಲನೆ ನೀಡಿದ್ದ, ಬೆಂಗಳೂರಿನಿಂದ ಭೀಮ ಹೆಜ್ಜೆ ರಥಯಾತ್ರೆ ಆಗಮಿಸಿ ಶುಕ್ರವಾರವೆ ಚಿತ್ರದುರ್ಗದಲ್ಲಿ ತಂಗಿತ್ತು.
ಇಂದು ನಗರದ ಮದಕರಿ ವೃತ್ತದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮದಕರಿ ನಾಯಕರ ಪ್ರಥಿಮೆಗೆ ಮಾಲಾರ್ಪಣೆ ಮಾಡಲಾಯಿತು. ಇನ್ನೂ ಎಂ ಎಲ್ ಸಿ ಕೆ.ಎಸ್ ನವೀನ್ ಅವರು ಆಗಮಿಸಿ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅಂಬೇಡ್ಕರ್ ಪ್ರಥಿಮೆಗೆ ಮಾಲಾರ್ಪಣೆ ಮಾಡಿದರು.
ಇದೇ ವೇಳೆ ಅಂಬೇಡ್ಕರ್ ಅವರ ಪರ ಘೋಷಣೆಗಳನ್ನ ಕೂಗಿ ಕೇಂದ್ರ ಬಿಜೆಪಿ ಪಕ್ಷದ ಪರ ಘೋಷಣೆಗಳನ್ನ ಕೂಗಿದರು. ಈ ರಥಯಾತ್ರೆ ಭರಮಸಾಗರ ಮುಖಾಂತರವಾಗಿ ದಾವಣಗೆರೆ ತಲುಪಲಿದ್ದು ನಂತರ ದಾವಣಗೆರೆ ಮುಖಾಂತರವಾಗಿ ಬೆಳಗಾವಿ ತಲುಪಲಿದೆ. ಇನ್ನೂ ಈ ಸಂದರ್ಭದಲ್ಲಿ ಮಾಜಿ ಸಂಸದ ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಏ ಮುರುಳಿ, ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.