ಚಿಂಚೋಳಿ.30.ಏಪ್ರಿಲ.25:- ಇಂದು ಬೀದರ ಲೋಕಸಭಾ ಕ್ಷೇತ್ರದ ಚಿಂಚೋಳಿ ಪಟ್ಟಣದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ನಿಮಿತ್ಯ ಹಮ್ಮಿಕೊಂಡಿದ್ದ “ಮಹಾನಾಯಕನ ಮಹಾಯಾನ” ಕಾರ್ಯಕ್ರಮದಲ್ಲಿ ಮಾನ್ಯ ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ಸಾಗರ್ ಖಂಡ್ರೆ ರವರು ಭಾಗವಹಿಸಿ, ಪೂಜ್ಯ ಭಂತೆ ಜ್ಞಾನ ಸಾಗರ ಅವರ ದಿವ್ಯ ಸಾನಿಧ್ಯದಲ್ಲಿ ಜ್ಯೋತಿ ಬೆಳಗಿಸಿ, ಬಹಿರಂಗ ಸಭೆಯನ್ನ ಉದ್ದೇಶಿಸಿ ಮಾತನಾಡಿದರು ,
ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಶ್ರೀ ಸುಭಾಷ ರಾಠೋಡ ರವರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
