ಬೀದರ.16.ಜನವರಿ.25:- ಬೀದರ ಜಿಲ್ಲೆಯ ಕಂದಾಯ ಇಲಾಖೆಯ ಸ್ಥಳೀಯ ವೃಂದದ ( HK) (19) ಮತ್ತು ಸ್ಥಳಿಯೇತರ ವೃಂದದ ( Non HK) (05) ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ 1:3ರ ಅನುಪಾತದ ದಾಖಲೆ ಪರಿಶೀಲನೆಗಾಗಿ ಪಟ್ಟಿಯನ್ನು ಪ್ರಕಟಿಸಲಾಗಿದೆ.
ದಾಖಲೆಗಳ ಪರಿಶೀಲನೆ ಕಾರ್ಯ ಮುಗಿದಿರುವುದರಿಂದ 1:1 ರ ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಪಟ್ಟಿಯನ್ನು ಬೀದರ ಜಿಲ್ಲೆಯ ವೆಬ್ಸೈಟ್ (https://bidar.nic.in) ನಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಸದರಿ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಆಕ್ಷೇಪಣೆಗಳಿದ್ದಲ್ಲಿ 2025ನೇ ಜನವರಿ.23 ರೊಳಗಾಗಿ ಈ ಕಛೇರಿಯಲ್ಲಿ ಸ್ವೀಕೃತವಾಗುವಂತೆ ಆಕ್ಷೇಪಣೆಗಳು ಸಲ್ಲಿಸಬಹುದಾಗಿದೆ.
ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಸದರಿ ಆಯ್ಕೆಯ ಪಟ್ಟಿಯು ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಪಟ್ಟಿಯಾಗಿದ್ದು ಯಾವುದೇ ಕಾರಣಕ್ಕೂ ಸದರಿ ಆಯ್ಕೆ ಪಟ್ಟಿಗಳು ಅಂತಿಮ ಆದೇಶವೆಂದು ಭಾವಿಸತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿಗಳು ಹಾಗೂ ಗ್ರಾಮಲೆಕ್ಕಿಗರ ನೇರ ನೇಮಕಾತಿ ಆಯ್ಕೆ ಪ್ರಾಧಿಕಾರದ ಅಧ್ಯಕ್ಷರಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.