16/06/2025 6:24 AM

Translate Language

Home » ಲೈವ್ ನ್ಯೂಸ್ » ಗ್ರಾಮ ಆಡಳಿತ ಅಧಿಕಾರಿ ಅಂತಿಮ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ ಜನವರಿ.27 2025.!

ಗ್ರಾಮ ಆಡಳಿತ ಅಧಿಕಾರಿ ಅಂತಿಮ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ ಜನವರಿ.27 2025.!

Facebook
X
WhatsApp
Telegram


ಡಿ.23 :- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ನಡ್ಡಿರುವ ಸಿಇಟಿ ಪರೀಕ್ಷೆ ಮೆರಿಟ್ ಮತ್ತು ಅಂತಿಮ ಆಯ್ಕೆ ಪಟ್ಟಿ ಜನೆವರಿ 27 ಕೆ ಪ್ರಕಟಿಸಲಾಗುತ್ತಿದೆ.

ಬೀದರ ಜಿಲ್ಲೆಯ ಕಂದಾಯ ಇಲಾಖೆಯಲ್ಲಿನ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ರಂತೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರವರು ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ ರವರಿಗೆ ಹಸ್ತಾಂತರಿಸಿರುತ್ತಾರೆ. ಸದರಿ ಅಂತಿಮ ಅಂಕ ಪಟ್ಟಿ ಮತ್ತು ಅಭ್ಯರ್ಥಿಗಳ ವಿವರಗಳನ್ನು ನೀಡಿರುತ್ತಾರೆ.

ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ಗಳಿಕೆ ಮಾಡಿರುವ ಅಂಕಗಳ ಅನುಸಾರ ಬೀದರ ಜಿಲ್ಲೆಗೆ ಅಧಿಸೂಚನೆಯಲ್ಲಿ ನಿಗಧಿಯಾಗಿರುವ ಹುದ್ದೆಗಳ ಎದುರಾಗಿ 1:3 ಅನುಪಾತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬೀದರ ಜಿಲ್ಲೆಯ ವೇಬಸೈಟ್  (https://bidar.nic.in) ನಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೇ ವಿವರ: 02-01-2025 ರಿಂದ 10-01-2025 ರವರೆಗೆ 1:3 ಅನುಪಾತದಲ್ಲಿನ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸುವುದು ಮತ್ತು ವಿಕಲ ಚೇತನ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸುವುದು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಿಸುವುದು.

ಹಾಗೂ ತಾತ್ಕಾಲಿಕ 1;1 ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ ದಿನಾಂಕ: 15-01-2025 ರವರೆಗೆ ಪ್ರಕಟಿಸುವುದು. ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳನ್ನು ದಿನಾಂಕ: 16-01-2025 ರಿಂದ 23-01-2025 ರವರೆಗೆ ಆಹ್ವಾನಿಸುವುದು. ಹಾಗೂ ಅಂತಿಮ ಆಯ್ಕೆ ಪಟ್ಟಿ ಮತ್ತು ಹೆಚ್ಚುವರಿ ಆಯ್ಕೆ ಪಟ್ಟಿ ದಿನಾಂಕ: 27-01-2025 ರಂದು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Source : www.prajaprabhat.com

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!