Home » ಲೈವ್ ನ್ಯೂಸ್ » ಗೃಹಲಕ್ಷ್ಮೀ ಹಣ’ ಇನ್ಮುಂದೆ ಮೂರು ತಿಂಗಳಿಗೊಮ್ಮೆ ಬರಲಿದೆ :ಲಕ್ಷ್ಮೀ ಹೆಬ್ಬಾಳಕರ್

ಗೃಹಲಕ್ಷ್ಮೀ ಹಣ’  ಇನ್ಮುಂದೆ ಮೂರು ತಿಂಗಳಿಗೊಮ್ಮೆ ಬರಲಿದೆ :ಲಕ್ಷ್ಮೀ ಹೆಬ್ಬಾಳಕರ್

Facebook
X
WhatsApp
Telegram

ಬೆಳಗಾವಿ.11.ಡಿಸೆಂಬರ್‌.25: ಎಂದು ಮಹಿಳೆಯರು ಹಾಗೂ ವಿಪಕ್ಷಗಳು ಆಕ್ರೋಶ ಹೊರ ಹಾಕಿದ್ದು, ಸದನದಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2000 ಹಣ ನೀಡುವ ವಿಚಾರದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಗೊಂದಲಗಳಿಗೆ ಕಾರಣವಾಗಿದೆ. ಇದೀಗ ಮಹಿಳೆಯವರಿಗೆ ಪ್ರತಿ ತಿಂಗಳು ಹಣ ಜಮಾ ಆಗುತ್ತಿಲ್ಲ ಎಂದು ಚರ್ಚೆ ನಡೆದಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ಶಾಸಕ ಮಹೇಶ್ ಟೆಂಗಿನಕಾಯಿ ಅವರು 5 ತಿಂಗಳ ಗೃಹ ಲಕ್ಷ್ಮಿ ಹಣ ಬಂದಿಲ್ಲ. ಫೆಬ್ರವರಿ.. ಮಾರ್ಚ್.. ಸೆಪ್ಟೆಂಬರ್. ಅಕ್ಟೋಬರ್.. ನವಂಬರ್ ತಿಂಗಳ ಗೃಹ ಲಕ್ಷ್ಮಿ ಹಣ ಯಾವಾಗ ಬರುತ್ತೆ ಎಂದು ಗಮನ ಸೆಳೆಯುವ ಸೂಚನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರು, ವಿಕಲಚೇತನರ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿಧಾನ ಸಭೆಗೆ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರದಿಂದ ಆಗಸ್ಟ್-2025 ವರೆಗಿನ ಗೃಹಲಕ್ಷ್ಮಿ ಕಂತುಗಳನ್ನು ಫಲಾನುಭವಿಗಳ ಖಾತೆ ಜಮೆ ಮಾಡಲಾಗಿದೆ. ಯೋಜನೆ ಆರಂಭವಾದಗಿನಿಂದ ಯೋಜನೆಯಡಿ 1.24 ಕೋಟಿ ಮಹಿಳೆಯರಿಗೆ ರೂ.54,000 ಕೋಟಿ ಗೃಹಲಕ್ಷ್ಮಿ ಹಣ ಸಂದಾಯವಾಗಿದೆ. ಒಟ್ಟು 23 ಕಂತುಗಳಲ್ಲಿ ನೊಂದಣಿಯಾದ ಪ್ರತಿ ಕುಟುಂಬದ ಯಜಮಾನಿಗೆ ತಲಾ ರೂ.46,000 ಲಭಿಸಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ವಿಶ್ವದಲ್ಲಿಯೇ ವಿನೂತನ ಎನಿಸಿ ಗುರುತರ ಹೆಜ್ಜೆ ಇಟ್ಟಿದೆ. ಬೇರೆ ರಾಜ್ಯಗಳು ಕೂಡ ಗೃಹಲಕ್ಷ್ಮಿ ಯೋಜನೆ ಮಾದರಿಯಿಂದ ಪ್ರೇರಣೆ ಪಡೆದು ಯೋಜನೆ ರೂಪಿಸುತ್ತಿವೆ. ಸರ್ಕಾರ ಸ್ಪಷ್ಟತೆ ಹಾಗೂ ಬದ್ದತೆಯೊಂದಿಗೆ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಫಲಾನುಭವಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಇಲಾಖೆಯಲ್ಲಿ ಸಕಾಲದಲ್ಲಿ ಕಡತವನ್ನು ಹಣಕಾಸು ಇಲಾಖೆ ಕಳುಹಿಸಿಕೊಡಲಾಗುತ್ತಿದೆ.

ಈ ಹಿಂದೆ ಇಲಾಖೆಯಿಂದಲೇ ಫಲಾನುಭವಿಗಳ ಖಾತೆ ರೂ.2000 ಹಣ ಜಮೆ ಮಾಡಲಾಗುತ್ತಿತ್ತು. ಸದ್ಯ ತಾಲ್ಲೂಕು ಪಂಚಾಯಿತಿಗಳಿಂದ ಫಲಾನುಭವಿಗಳ ಖಾತೆ ಹಣ ಜಮೆ ಮಾಡಲು ಬದಲಾವಣೆ ಮಾಡಿದ್ದರಿಂದ ಕೆಲ ತಿಂಗಳ ಕಂತು ಪಾವತಿಯಾಗುವಲ್ಲಿ ವಿಳಂಬವಾಗಿದೆ. ಕೂಡಲೇ ಆಗಸ್ಟ್ ನಂತರ ಕಂತುಗಳ ಪಾವತಿಗೂ ಕ್ರಮ ವಹಿಸುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಆರಂಭದಲ್ಲಿ ಯೋಜನೆಯನ್ನು ನಿಲ್ಲಿಸಲು ಹೇಳಿದವರು ನೀವು, ಯೋಜನೆ ಕುರಿತು ಹಾದಿ ಬೀದಿಯಲ್ಲಿ ಟೀಕೆ ಮಾಡುತ್ತಿದ್ದ ಬಿಜೆಪಿಯವರಿಗೆ ಈಗ ಏಕಾಏಕಿ ಕಾಳಜಿ, ಪ್ರೀತಿ ಬಂತಾ ಎಂದು ಪ್ರಶ್ನಿಸಿದ ಸಚಿವರು, ನಮ್ಮದೇ ಯೋಜನೆ ಕಾಪಿ ಮಾಡಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಜಾರಿಗೊಳಿಸಿದ ಲಾಡ್ಲಿ ಬೆಹೆನ್ ಯೋಜನೆ ಕಥೆ ಏನಾಗಿದೆ ಎಂದು ಎಲ್ಲರಿಗೂ ಗೊತ್ತು. ಬೇರೆ ರಾಜ್ಯದ ಬಗ್ಗೆ ಮಾತಾನಾಡಬಾರದು ಎಂದು‌ ಸುಮ್ಮನಿದ್ದೆ. ನಾವು ಒಂದೇ ಒಂದು ಅಪಾದನೆ ಬರದಂತೆ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology