ಬೆಂಗಳೂರು.10.ಆಗಸ್ಟ್.25:- ರಾಜ್ಯ ಸರ್ಕಾರ ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡಗುಡೆಯಾಗಿದ್ದು, ಇದೀಗ ಜುಲೈ ಹಾಗೂ ಆಗಸ್ಟ್ ತಿಂಗಳ 4,000 ರೂ. ಒಟ್ಟಿಗೆ ಜಮೆ ಆಗಲಿದೆ.
2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಯೋಜನೆಯ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಹಣ ವರ್ಗಾವಣೆ ಆಗುತ್ತಿದೆ.
ಗೃಹಲಕ್ಷ್ಮಿ ಯೋಜನೆಯಡಿ ಜೂನ್ ತಿಂಗಳ ಭತ್ಯೆಯನ್ನು ಆಯಾ ತಾಲೂಕು ಪಂಚಾಯಿತಿ ಮುಖೇನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನಗದು ನೇರ ವರ್ಗಾವಣೆಯಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳ ಪ್ರಕಾರ ಯೋಜನೆಯಡಿ 1.23 ಕೋಟಿ ಅರ್ಹ ಫಲಾನುಭವಿಗಳಿದ್ದಾರೆ. ಹಂತ ಹಂತವಾಗಿ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಲಿದ್ದು, ಶುಕ್ರವಾರ ಸಂಜೆ ವೇಳೆಗೆ 40 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ ಎನ್ನಲಾಗಿದೆ.