ಬೆಂಗಳೂರು.10.ಜನವರಿ.26: ಒನ್ ಸ್ಟಾಪ್ ಸೆಂಟರ್ಗಳು: ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, ಕುಟುಂಬ, ಸಮುದಾಯ ಮತ್ತು ಕೆಲಸದ ಸ್ಥಳದಲ್ಲಿ ಹಿಂಸೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಬೆಂಬಲ ನೀಡಿ. ದೈಹಿಕ, ಲೈಂಗಿಕ, ಭಾವನಾತ್ಮಕ, ಮಾನಸಿಕ ಮತ್ತು ಆರ್ಥಿಕ ಕಿರುಕುಳವನ್ನು ಎದುರಿಸುತ್ತಿರುವ ಮಹಿಳೆಯರು. ರಾಜ್ಯ ಸರಕಾರಿ ಇಲಾಖೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ “ಸಖಿ” ಒನ್ ಸ್ಟಾಪ್ ಸೆಂಟರ್ನಲ್ಲಿ ಕಾರ್ಯ ನಿರ್ವಹಿಸಲು ಹೊರ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಭರ್ತಿ ಮಾಡಲಾಗುವ ಹುದ್ದೆಗಳು:
ಘಟಕ ಆಡಳಿತಾಧಿಕಾರಿಗಳು – 03 ಹುದ್ದೆ,
ಆಪ್ತ ಸಮಾಲೋಚಕರು – 03 ಹುದ್ದೆ,
ಸಮಾಜ ಸೇವಾ ಕಾರ್ಯಕರ್ತರು / ಕೇಸ್ ವರ್ಕರ್ – 07 ಹುದ್ದೆ,
ಕಾನೂನು ಸಲಹೆಗಾರರು / ವಕೀಲರು (ಪ್ಯಾರಾ ಲೀಗಲ್) – 03 ಹುದ್ದೆ,
ವಿವಿಧೋದ್ದೇಶ ಸ್ವಚ್ಛತಗಾರರು / ಸೆಕ್ಯೂರಿಟಿ (ರಾತ್ರಿ ಕಾವಲು) – 08 ಹುದ್ದೆ.
ವಿದ್ಯಾರ್ಹತೆ ಮತ್ತು ಅನುಭವ:
ಘಟಕ ಆಡಳಿತಾಧಿಕಾರಿ ಹುದ್ದೆಗೆ ಎಂ.ಎಸ್.ಡಬ್ಲ್ಯೂ., ಸ್ನಾತಕೋತ್ತರ ಕಾನೂನು ಪದವಿ, ಎಂ.ಎಸ್.ಸಿ. ಹೋಮ್ ಸೈನ್ಸ್ (ಹ್ಯೂಮನ್ ಡೆವಲಪ್ಮೆಂಟ್ & ಫ್ಯಾಮಿಲಿ ರಿಲೇಷನ್), ಎಂ.ಎಸ್.ಸಿ. ಸೈಕಾಲಜಿ ಅಥವಾ ಸೈಕಿಯಾಟ್ರಿ ಪದವಿ ಹೊಂದಿರಬೇಕು. ಸರ್ಕಾರಿ ಅಥವಾ ಸ್ವಯಂಸೇವಾ ಸಂಸ್ಥೆಗಳಲ್ಲಿ ಕನಿಷ್ಠ 05 ವರ್ಷಗಳ ಸಮಾಲೋಚನಾ ಅನುಭವ ಅಗತ್ಯ. ಕಂಪ್ಯೂಟರ್ ಬಳಕೆ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರವೀಣತೆ ಕಡ್ಡಾಯ. ಈ ಹುದ್ದೆ 24/7 ರೆಸಿಡೆನ್ಶಿಯಲ್ ಸ್ಟಾಫ್ ಆಗಿರುತ್ತದೆ.
ಆಪ್ತ ಸಮಾಲೋಚಕ ಹುದ್ದೆಗೆ ಸಂಬಂಧಿಸಿದ ಸ್ನಾತಕೋತ್ತರ ಪದವಿಯೊಂದಿಗೆ ಕನಿಷ್ಠ 03 ವರ್ಷಗಳ ಸಮಾಲೋಚನಾ ಅನುಭವ ಹೊಂದಿರಬೇಕು.
ಸಮಾಜ ಸೇವಾ ಕಾರ್ಯಕರ್ತ / ಕೇಸ್ ವರ್ಕರ್ ಹುದ್ದೆಗೆ ಬಿ.ಎಸ್.ಡಬ್ಲ್ಯೂ ಅಥವಾ ಬಿ.ಎ (ಸೋಶಿಯಾಲಜಿ / ಮಹಿಳಾ ಅಧ್ಯಯನ) ಪದವಿಯೊಂದಿಗೆ ಕನಿಷ್ಠ 02 ವರ್ಷಗಳ ಸಮಾಜಕಾರ್ಯ ಅನುಭವ ಅಗತ್ಯ.
ಕಾನೂನು ಸಲಹೆಗಾರರು / ಪ್ಯಾರಾ ಲೀಗಲ್ ಹುದ್ದೆಗೆ ಕಾನೂನು ಪದವಿ ಮತ್ತು ಕನಿಷ್ಠ 02 ವರ್ಷಗಳ ಅನುಭವ ಇರಬೇಕು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಅಗತ್ಯ.
ವಿವಿಧೋದ್ದೇಶ ಸ್ವಚ್ಛತಗಾರರು / ಸೆಕ್ಯೂರಿಟಿ ಹುದ್ದೆಗೆ ಕನಿಷ್ಠ 7ನೇ ತರಗತಿ ವಿದ್ಯಾರ್ಹತೆ ಹಾಗೂ ಸಂಬಂಧಿತ ಅನುಭವ ಇರಬೇಕು.
ವಯೋಮಿತಿ: 18 ರಿಂದ 45 ವರ್ಷ. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಆಸಕ್ತ ಅರ್ಹ ಮಹಿಳಾ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರಗಳಿರುವ ರೆಸ್ಯೂಮ್ ಮತ್ತು ಅಗತ್ಯ ದಾಖಲೆಗಳೊಂದಿಗೆ….
ಉಪ ನಿರ್ದೇಶಕರವರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ. ಎಂ.ಹೆಚ್. ಮರಿಗೌಡ ರಸ್ತೆ, ಬೆಂಗಳೂರು – 560029
ಕೊನೆಯ ದಿನಾಂಕ: ಜನವರಿ 30ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-29578688 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಗುತ್ತಿಗೆ ಆಧಾರಮೇಲೆ ವಿವಿಧ ಹುದ್ದೆಗೆಳಿಗೆ ಅರ್ಜಿ ಆಹ್ವಾನ.?