11/08/2025 4:16 AM

Translate Language

Home » ಲೈವ್ ನ್ಯೂಸ್ » ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Facebook
X
WhatsApp
Telegram

ಕೊಪ್ಪಳ.22.ಜೂನ್.25:-ಅಂತರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಗಿಣಿಗೇರಾ ಗ್ರಾಮ ಪಂಚಾಯತಿ ಹಾಗೂ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಗಿಣಿಗೇರಾ ಗ್ರಾಮದ ಅಮೃತ ಸರೋವರ ದಡದಲ್ಲಿ ಶನಿವಾರ ಯೋಗಭ್ಯಾಸ ಮತ್ತು ಪ್ರಾಣಾಯಮ ಅಭ್ಯಾಸಗಳನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮದ ಕುರಿತು ಗಿಣಿಗೇರಿ ಕೆರೆ ಸಮಿತಿ ಅಧ್ಯಕ್ಷರಾದ ಸುಬ್ಭಣ್ಣಚಾರ ಮಾತನಾಡಿ, ಪ್ರಸ್ತುತ ದಿನದಲ್ಲಿ ಆಹಾರ ಪದ್ಧತಿ ಬಹು ಮುಖ್ಯವಾದದು. ಆಹಾರ ಪದ್ಧತಿಯನ್ನು ನಾವು ಬದಲಾವಣೆ ಮಾಡಿಕೊಳ್ಳುವದು ಸೂಕ್ತ. ಬದಲಾವಣೆ ಮಾಡಿಕೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುವದು ಖಂಡಿತವೆಂದರು. ಆಧುನಿಕ ಜಗತ್ತಿನಲ್ಲಿರುವ ನಾವುಗಳು ಪ್ರತಿನಿತ್ಯ ಬದುಕಿನಲ್ಲಿ ಒತ್ತಡ ಜೀವನ ಸಾಗಿಸುತ್ತಿದ್ದೆವೆಂದರು. ಪ್ರತಿ ದಿನ ನಾವುಗಳು ಆರೋಗ್ಯದಿಂದ ಇರಬೇಕಾದ ದಿನದ 24 ಗಂಟೆಗಳಲ್ಲಿ 1 ಗಂಟೆಯಾದರು ಯೋಗ ಮತ್ತು ಪ್ರಾಣಾಯಮವನ್ನು ರೂಢಿಸಿಕೊಳ್ಳಬೇಕು.

ಹಿಂದಿನ ಕಾಲದಲ್ಲಿ ಋಷಿಮುನಿಗಳು ಯೋಗ ಮತ್ತು ಪ್ರಾಣಾಯಮದಿಂದ ಆರೋಗ್ಯವನ್ನು ಗೆಲ್ಲುವದಕ್ಕೆ ಸಾಧ್ಯ ಎಂಬುದನ್ನು ಮನಗಂಡು ಸಾಧನೆಗೈದು ಇತರರಿಗೆ ಮಾದರಿಯಾಗಿದ್ದಾರೆ.

ಗ್ರಾಮದ ಕೆರೆಗಳು ಜೀವಂತ ಆಗರಗಳು ಎನ್ನುವ ಪದಕ್ಕೆ ಗ್ರಾಮೀಣಾಭಿವೃದ್ದಿ ಆಯುಕ್ತಾಲಯವು ಅಮೃತ ಸರೋವರ ದಡದಲ್ಲಿ ಯೋಗ ಮತ್ತು ಪ್ರಾಣಾಯಮ ಶಿಬಿರಗಳನ್ನು ಆಯೋಜಿಸಲು ನಿರ್ದೇಶನ ನೀಡಿರುವದು ಕೆರೆಯ ಮಹತ್ವಕ್ಕೆ ಆದ್ಯತೆ ನೀಡಿದೆ ಎಂದರು.


ಯೋಗ ಮತ್ತು ಪ್ರಾಣಾಯಮಕ್ಕೆ ಯಾವುದೇ ರೀತಿಯ ವಯಸ್ಸಿನ ಇತಿ ಮಿತಿ ಇರುವದಿಲ್ಲ. ಆದರೆ ಕ್ರಮಬದ್ದವಾಗಿ ಯೋಗಭ್ಯಾಸ ರೂಢಿಸಿಕೊಳ್ಳಬೇಕೆಂದರು.


ಕಾಮನೂರು ಆಯುಷ್ ಆಸ್ಪತ್ರೆಯ ಯೋಗ ವಿಭಾಗದ ಡಾ. ಕಳಕೇಶ್ ಮಾತನಾಡಿ, ಯೋಗದಿಂದ ಅನೇಕ ಮಹತ್ ಸಾಧನೆಗಳನ್ನು ಮಾಡಬಹುದಾಗಿದೆ. ಮನಸ್ಸು ಮತ್ತು ದೇಹ ಆರೋಗ್ಯ ಇರಬೇಕಾದಲ್ಲಿ ನಾವುಗಳು ಕ್ರಮಬದ್ದವಾಗಿ ಯೋಗಭ್ಯಾಸ ರೂಢಿಸಿಕೊಂಡು ನಮ್ಮ ಮನೆಯಲ್ಲಿರುವ ಸದಸ್ಯರಿಗೆ, ಸುತ್ತ-ಮುತ್ತಲಿನವರಿಗೆ ಅದರ ಮಹತ್ವ ಬಗ್ಗೆ ತಿಳಿ ಹೇಳಬೇಕೆಂದರು.
ಕಾರ್ಯಕ್ರಮದಲ್ಲಿ ಯೋಗ ಅಭ್ಯಾಸ ಮತ್ತು ಪ್ರಾಣಾಯಮ ಭಂಗಿಗಳನ್ನು ಡಾ. ಕಳಕೇಶ್, ದೈಹಿಕ ಶಿಕ್ಷಕ ಬಸನಗೌಡ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ಪಿಡಿಒ ಮಂಜುಳಾದೇವಿ ನಿರ್ವಹಿಸಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಣುಕಾ ಫಕೀರಪ್ಪ ವಡ್ಡರ, ಗ್ರಾ.ಪಂ ಸದಸ್ಯರಾದ ಕರಿಯಪ್ಪ ಮೇಟಿ, ರಂಜಿತಾ ಚವ್ಹಾಣ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುಳಾದೇವಿ ಹೂಗಾರ, ಮುಖಂಡರಾದ ಕೊಟ್ರಬಸಯ್ಯ, ಯಮನೂರಪ್ಪ ಚವ್ಹಾಣ್, ನೀಲಪ್ಪ ಮೂರಮನಿ, ಗುರಪ್ಪ ಗುಡೇಕಾರ, ಶಂಕರ ಲಮಾಣಿ, ಹನಮೇಶ್ ನಾಯಕ, ಕೆರೆ ಅಭಿವೃದ್ದಿ ಸದಸ್ಯರಾದ ಅನಿಲ್ ಜಾನಾ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸದಾನಂದ, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮಂಜುನಾಥ, ಗ್ರಾಮ ಪಂಚಾಯತಿ ಸಿಬ್ಬಂದಿಗಳಾದ ಈಶ್ವರಯ್ಯ ಪೋಲಿಸ್ ಪಾಟೀಲ, ರಾಜಾ, ರಾಜಾಭಕ್ಷಿ, ಆಶಾ ಕಾರ್ಯಕರ್ತರು, ಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD