05/08/2025 7:08 AM

Translate Language

Home » ಲೈವ್ ನ್ಯೂಸ್ » ಗಣೇಶ ಉತ್ಸವವನ್ನು ಪರಿಸರ ಸ್ನೇಹಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಗಣೇಶ ಉತ್ಸವವನ್ನು ಪರಿಸರ ಸ್ನೇಹಿ ಮತ್ತು ಸೌಹಾರ್ದತೆಯಿಂದ ಆಚರಿಸೋಣ- ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

Facebook
X
WhatsApp
Telegram

ಬೀದರ.11.ಜುಲೈ.25:- ಜಿಲ್ಲೆಯಲ್ಲಿ ಮುಂಬರುವ ಗಣೇಶ ಉತ್ಸವವನ್ನು ಪರಿಸರ ಸ್ನೇಹಿ ಮತ್ತು ಸೌಹಾರ್ದತೆಯಿಂದ ಆಚಾರಿಸೋಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.


ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗಣೇಶ ಉತ್ಸವ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲೆಯಲ್ಲಿ ಪಿ.ಓ.ಪಿ ಹಾಗೂ ರಾಸಾಯನಿಕ ಗುಣಗಳ್ಳುಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಸಂಗ್ರಹ, ಮಾರಾಟ ನಿಷೇಧಿಸಿ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಬಳಕೆ ಮಾಡಬೇಕು. ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿ ಇವುಗಳ ನೀರು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು ಎಂದರು.


ಗಣೇಶ ವಿಗ್ರಹಗಳ ಪ್ರತಿಷ್ಠಾಪಣೆ ಹಾಗೂ ವಿಸರ್ಜನೆ ದಿನದಂದು ನಡೆಯುವ ಮೆರವಣಿಗೆಯಲ್ಲಿ ಕಡಿಮೆ ಶಬ್ದ ಇರುವ ಡಿಜೆ ಮಾತ್ರ ಬಳಸಬೇಕು ಮತ್ತು ಸಮಯ ಪಾಲನೆ ಮಾಡಬೇಕು ಎಂದರು. ಒಂದು ವೇಳೆ ಹೆಚ್ಚಿನ ಶಬ್ದ ಹೊಂದಿರುವ ಡಿಜೆ ಕಂಡುಬAದರೆ ಅದನ್ನು ತಕ್ಷಣ ಜಪ್ತಿ ಮಾಡಬೇಕು ಮತ್ತು ಸಾರ್ವಜನಿಕರಿಗೆ ತೊಂದರೆಯಾಗದAತೆ ಸೌಹಾರ್ದತೆಯಿಂದ ಗಣೇಶ ಉತ್ಸವ ಆಚರಿಸಬೇಕು ಎಂದರು.
ಗಣೇಶ ಮಂಡಳಿ ಕಾರ್ಯಾಧ್ಯಕ್ಷರಾದ ಬಾಬು ವಾಲಿ ಮಾತನಾಡಿ, ಮಣ್ಣಿನ ಗಣೇಶ ವಿಗ್ರಹಗಳು ಸಾರ್ವಜನಿಕರು ಬಳಸುವಂತೆ ಜನರಲ್ಲಿ ಮತ್ತು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.


ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ಡಿ.ವಾಯ್.ಎಸ್.ಪಿ. ಶಿವನಗೌಡ ಪಾಟೀಲ, ಪರಿಸರಾಧಿಕಾರಿ ಮೃತ್ಯುಂಜಯ, ಮುಖಂಡರುಗಳಾದ ಶಶಿ ಹೊಸಳ್ಳಿ, ರಮೇಶ ಚಿಟ್ಟಾ, ಗಣೇಶ ಭೊಸಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD