Home » ಲೈವ್ ನ್ಯೂಸ್ » ಗಂಗಾವತಿ: ವಿಶೇಷ ಶಾಲೆಗಳ ಪ್ರವೇಶ ಪ್ರಾರಂಭ

ಗಂಗಾವತಿ: ವಿಶೇಷ ಶಾಲೆಗಳ ಪ್ರವೇಶ ಪ್ರಾರಂಭ

Facebook
X
WhatsApp
Telegram

ಕೊಪ್ಪಳ.13.ಜೂನ್.26: 2026-27ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಶೇಷ ಶಾಲೆಗಳ ಪ್ರವೇಶ ಪ್ರಾರಂಭವಾಗಿದೆ ಎಂದು ಕೊಪ್ಪಳ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳಾದ ವೆಂಕಟೇಶ ದೇಶಪಾಂಡೆ ಅವರು ತಿಳಿಸಿದ್ದಾರೆ.


ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಲಯನ್ಸ್ ಬುದ್ದಿಮಾಂದ್ಯ ಮಕ್ಕಳ ವಸತಿಯುತ ಶಾಲೆ, ಗಂಗಾವತಿ ತಾಲ್ಲೂಕಿನ ದಾಸನಾಳ ಗ್ರಾಮದಲ್ಲಿರುವ ಮಾನಸ ಬುದ್ದಿಮಾಂದ್ಯ ಮಕ್ಕಳ ವಸತಿಯುತ ಶಾಲೆ ಮತ್ತು ದಾಸನಾಳದ ನಾದಬಿಂದು ಕಿವುಡ ಹಾಗೂ ಮೂಕ ಮಕ್ಕಳ ವಸತಿಯುತ ಶಾಲೆಯಲ್ಲಿ ಪ್ರಸಕ್ತ ಸಾಲಿಗೆ ಪ್ರವೇಶ ಪ್ರಾರಂಭವಾಗಿದ್ದು, ಉಚಿತ ಮತ್ತು ಗುಣ ಮಟ್ಟದ ಶಿಕ್ಷಣ ನೀಡಲು ಶಾಲೆಗಳು ಪ್ರಖ್ಯಾತವಾಗಿವೆ.


ಶಿಕ್ಷಣವು ಉಚಿತವಾಗಿದ್ದು, ಊಟ, ವಸತಿ, ಸಮವಸ್ತç ಹಾಗೂ ಪುಸ್ತಕಗಳು ಮತ್ತು ಇನ್ನಿತರ ಮುಲಭೂತ ಸೌಲಭ್ಯಗಳು ಸಂಪೂರ್ಣ ಉಚಿತವಾಗಿರುತ್ತದೆ. ವಿಶೇಷ ಶಿಕ್ಷಣದಲ್ಲಿ ತರಬೇತಿ ಪಡೆದ ನುರಿತ ಅನುಭವಿ ಶಿಕ್ಷಕರಿಂದ ಮಕ್ಕಳಿಗೆ ವಿಶೇಷ ಶಿಕ್ಷಣ ಮತ್ತು ತರಬೇತಿ ನೀಡಲಾಗುವುದು. 


ಹೆಚ್ಚಿನ ಮಾಹಿತಿಗಾಗಿ ಪ್ರಭು ಹಿರೇಮಠ ಅಧಿಕ್ಷಕರು, ಲಯನ್ಸ್ ಬುದ್ದಿಮಾಂದ್ಯ ಶಾಲೆ ಗಂಗಾವತಿ ಮೊ.ಸಂ: 9241372265, ಬಸುವರಾಜ, ಮಾನಸ ಬುದ್ದಿಮಾಂದ್ಯ ಹಾಗೂ ನಾದಬಿಂದು ಕಿವುಡ ಹಾಗೂ ಮೂಕ ಮಕ್ಕಳ ಶಾಲೆ ದಾಸನಾಳ- ಮೊ.ಸಂ: 9900369336 ಸಂಪರ್ಕಿಸಬಹುದು ಎಂದು ಕೊಪ್ಪಳ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಕಟಣೆ ತಿಳಿಸಿದೆ. 

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology