ಯಾದಗಿರಿ.11.ಏಪ್ರಿಲ್.25:- ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಕ. ದ. ಸಂ. ಸ ಭೀಮವಾದ ಸಂಘಟನೆ ವತಿಯಿಂದ ಬುದ್ಧ ಬಸವ ಅಂಬೇಡ್ಕರ್ ಜಯಂತ್ಯೋತ್ಸದ ಪ್ರಯುಕ್ತ ಸಭೆಯ ಉದ್ದೇಶಿಸಿ ರಾಜ್ಯ ಸಂಘಟನಾ ಸಂಚಾಲಕರು ಮತ್ತು ಯಾದಗಿರಿ ಉಸ್ತುವಾರಿ ಶ್ಯಾಮ ಕಾಳೆ ಅವರು ಬುದ್ಧ ಬಸವ ಅಂಬೇಡ್ಕರ್ ಅವರು ಬೆಳಕು ಮತ್ತು ಜ್ಞಾನದ ಸಂಕೇತ, ಪ್ರತಿಯೊಬ್ಬರು ಅಂಬೇಡ್ಕರ್ ಜೀವನ ಚರಿತ್ರೆ ಓದಬೇಕು, ಬುದ್ಧನ ಶಾಂತಿ, ಬಸವಣ್ಣನ ಸಮಾನತೆ, ಅಂಬೇಡ್ಕರ್ ಅವರ ಹೃದಯವೈಶಾಲ್ಯತೆ ನಮಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ಶರಣು ಎಸ್ ನಾಟೇಕರ್ ಅವರ ನೇತೃತ್ವದಲ್ಲಿ ಹಲವಾರು ನೂತನ ಕಾರ್ಯಕರ್ತರು ಭೀಮವಾದ ಸಂಘಟನೆಗೆ ಸೇರಿದರು.
ನಮ್ಮ ಯಾದಗಿರಿ ಜಿಲ್ಲೆಯಲ್ಲಿ ಸಂಘಟನೆ ಎಲ್ಲಾ ಪದಾಧಿಕಾರಿಗಳಿಗೆ ಸಂಘಟನೆ ಬಲಪಡಿಸಲು ಕೈ ಜೋಡಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸಿದ್ದು ಪೂಜಾರಿ ಬೆಳಗಾಂ, ಶಿವಶರಣಪ್ಪ ವಾಡಿ, ಮಂಜುಳಾ ಸುರಪುರ, ದಲಿತ ಹಿರಿಯ ಮುಖಂಡರು ಮಲ್ಲಪ್ಪ ಈಟೆ, ಭೀಮರಾಯ ಕಾಗಿ,ಅಂಜು ಯಾದಗಿರಿ,ಖಂಡಪ್ಪ ಸಾಹುಕಾರ್,ಶರಣು ಹಾಲಳ್ಳಿ. ಶರಣು ಮಮ್ಮದರ್. ಗಿರೀಶ್ ಚಟ್ಟೇರಕರ್, ಮಲ್ಲು ನಾಟೇಕರ್, ಸೌಭಾಗ್ಯ, ಗಂಗಮ್ಮ ಸುಂಗಲಕರ್, ಸಾಬಣ್ಣ ಬೇಗರ್, ಭೀಮರಾಯ ಸಿಂದಿಗೇರಿ, ಮಹಾದೇವಪ್ಪ ಗುರುಸುಣಿಗಿ ಬಸವರಾಜ್ ಯಮ್ಮನೂರ್. ಇನ್ನಿತರರು ಭಾಗವಹಿಸಿದರು.
