ಕೆ ಕೆ ಹೊರ ಜಿಲ್ಲೆ ಅವಕಾಶ?
ಕಲ್ಯಾಣ ಕರ್ನಾಟಕ ಅಲ್ಲದ ಅತಿಥಿ ಉಪನ್ಯಾಸಕ ಅಭ್ಯರ್ಥಿಗಳಿಗೆ ಕ.ಕ.ಭಾಗದಲ್ಲಿ ಶೇ.25ರಷ್ಟು ಮೀಸಲು |
ಕ.ಕ. ಅಭ್ಯರ್ಥಿಗಳಿಗೆ ಅನ್ಯಾಯ
ಶಿವರಾಜ ಬಂಡಿಹಾಳ ಹನುಮಸಾಗರ
ಉನ್ನತ ಶಿಕ್ಷಣ ಇಲಾಖೆ, ಯುಜಿಸಿ ಆರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಕೆಲ ನಿಯಮ ಗಾಳಿಗೆ ತೂರಿ ಆರಂಭಿಸಿದ್ದು, ಕಲ್ಯಾಣ ಕರ್ನಾಟಕದ ಅತಿಥಿ ಉಪನ್ಯಾಸಕರಾಗುವ ಅಭ್ಯರ್ಥಿಗಳಿಗೆ ಅವಕಾಶದಿಂದ ವಂಚಿತರನ್ನಾಗಿಸುತ್ತಿದೆ.
ರಾಜ್ಯದಲ್ಲಿ 2025-26ನೇ ಶೈಕ್ಷಣಿಕ ವರ್ಷದ ಪದವಿ ತರಗತಿಯ 2, 4 ಹಾಗೂ 6ನೇ ಸೆಮಿಸ್ಟರ್‌ಗಳಿಗೆ ನ.24ರಿಂದ ಯುಜಿಸಿ ನಿಯಮಾವಳಿ ಪ್ರಕಾರ ಕೆ-ಸೆಟ್, ನೆಟ್ ಹಾಗೂ ಪಿಎಚ್.ಡಿ ಪಡೆದ ಅಭ್ಯರ್ಥಿಗಳಿಗೆ ಈಗಾಗಲೇ ಬ್ಯುಸಿನೆಸ್ ಮ್ಯಾನೇಜ್ ಮೆಂಟ್, ಇತಿಹಾಸ, ರಾಜ್ಯಶಾಸ್ತ್ರ, ಇಂಗ್ಲಿಷ್, ಕನ್ನಡ, ಅರ್ಥಶಾಸ್ತ್ರ ಸೇರಿ ಎಲ್ಲ ವಿಷಯಗಳ ಕೌನ್ಸೆಲಿಂಗ್ ಮುಗಿಸಿದೆ. ಆದರೆ ಕಲ್ಯಾಣ ಕರ್ನಾಟಕ ಮೀಸಲು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಬಾರಿ ಅದೇ ಭಾಗದಲ್ಲಿ ತೆಗೆದುಕೊಳ್ಳಬೇಕು ಎಂಬ ನಿಯಮವನ್ನು ಕೌನ್ಸೆಲಿಂಗ್ ವೇಳೆ ಮೌಖಿಕವಾಗಿ ಅಧಿಕಾರಿಗಳು ಹೇಳಿದ್ದು, ಗೊಂದಲ ಸೃಷ್ಟಿಸಿದೆ.
ಗಡಿಭಾಗದ ಕೊಪ್ಪಳ, ಕಲಬುರಗಿ, ವಿಜಯನಗರ ಸೇರಿ ಸುತ್ತಲಿನ ಕೆಲವು ಅಭ್ಯರ್ಥಿಗಳು ಕ-ಕ ಹೊರತುಪಡಿಸಿ ಆಯ್ಕೆಗೆ ಅವಕಾಶ ನೀಡುತ್ತಿಲ್ಲ. ಆದರೆ ಕ-ಕ ಅಲ್ಲದ ಅಭ್ಯರ್ಥಿಗಳಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೇ.25ರಷ್ಟು ಮೀಸಲು ಒದಗಿಸಲಾಗಿದೆ. ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಶೇ.8 ರಷ್ಟು ಮೀಸಲು ನೀಡಲಾಗಿದೆ. ಆದರೆ ಬೇರೆ ಜಿಲ್ಲೆಗಳಿಗೆ ಅವಕಾಶ ಕೊಟ್ಟಿಲ್ಲ. ಹೀಗಾಗಿ ನೆರೆಯ ಜಿಲ್ಲೆಗಳಿಗೆ ಅವಕಾಶ ನೀಡಿದರೆ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ ಎನ್ನುವುದು ಅತಿಥಿ ಉಪನ್ಯಾಸಕರ ಅಳಲು.
KALYANA KARNATAKA REGION-GUEST LECTURER APPLICANTS
NON-KALYANA KARNATAKA REGION-GUEST LECTURER POSITIONS
NO OPPORTUNITY IN NON-KK REGION
APPLY ANYWHERE IN NON-AX REGION
ಕಂಪ್ಯೂಟರ್ ಸೈನ್ಸ್ ಅತಿಥಿ ಉಪನ್ಯಾಸಕರು ಮೂಲೆ ಗುಂಪು
ಕಂಪ್ಯೂಟರ್ ಸೈನ್ಸ್ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದವರು ಕೆಲಸವಿಲ್ಲದೆ ಮೂಲೆ ಗುಂಪಾಗಿದ್ದಾರೆ. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಕೊಪ್ಪಳ ವಿಶ್ವವಿದ್ಯಾಲಯಗಳಲ್ಲಿ ಕಡ್ಡಾಯ ಕಂಪ್ಯೂಟರ್ ಸೈನ್ಸ್ ವಿಷಯವನ್ನು ಬಿ.ಎ ಹಾಗೂ ಬಿ.ಕಾಂ ತರಗತಿಯಲ್ಲಿ ತೆಗೆದು ಹಾಕಿದ್ದರಿಂದ ಈ ಅತಿಥಿ ಉಪನ್ಯಾಸಕರು ಅವಕಾಶದಿಂದ ವಂಚಿತರಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಪದವಿ ತರಗತಿ ಕಂಪ್ಯೂಟರ್ ಸೈನ್ಸ್ ವಿಷಯವನ್ನು ಈಗಾಗಲೇ ತೆಗೆದು ಹಾಕಲಾಗಿದೆ. ಆದರೆ ಬೇರೆ ಜಿಲ್ಲೆಗಳಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಅಳವಡಿಕೊಳ್ಳಲಾಗಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳನ್ನು ಹೊರತು ಪಡಿಸಿ ಬೇರೆ ಜಿಲ್ಲೆಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂಬುವುದು ಅತಿಥಿ ಉಪನ್ಯಾಸಕರ ಒತ್ತಾಯವಾಗಿದೆ.
ಅತಿಥಿ ಉಪನ್ಯಾಸಕರಾಗಿ ಹೊರ ಜಿಲ್ಲೆಗಳಿಗೆ ಹೋಗಲು ಕಲ್ಯಾಣ ಕರ್ನಾಟಕದವರಿಗೆ ಶೇ.8ರಷ್ಟು ಮೀಸಲು ಕಡ್ಡಾಯವಾಗಿ ಕೊಡಲೇಬೇಕು. ಅದರ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಆಯುಕ್ತರ ಗಮನಕ್ಕೆ ತರುವುದರೊಂದಿಗೆ ಮನವಿ ಸಲ್ಲಿಸಲಾಗುವುದು.
– ಅಮರೇಗೌಡ ಪಾಟೀಲ್ ಬಯ್ಯಾಪುರ ಮಾಜಿ ಸಚಿವ ಕುಷ್ಟಗಿ.
ಕಪಿಥಿಪನಾನಕರ ಕಲ್ಯಾಣ ಕರ್ನಾಟಕದವರಿಗೆ ಬೆಂಗಳೂರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೇರೆ ಜಿಲ್ಲೆಗಳಿಗೆ ಅವಕಾಶ ನೀಡುತ್ತಿಲ್ಲ. ಕ-ಕ ಭಾಗದ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಸಾಕಷ್ಟು ಸ್ಥಾನಗಳಿದ್ದು, ಅವಕಾಶ ಒದಗಿಸಬೇಕು.
– ಮಂಜುನಾಥ ಎಚ್. ಅತಿಥಿ
ಉಪನ್ಯಾಸಕ. ಕುಷ್ಟಗಿ.





Any questions related to ಕ.ಕ. ಭಾಗದ ಅಭ್ಯರ್ಥಿಗಳು ಅದೇ ಭಾಗದಲ್ಲಿ ಸೇವೆ ಸಲ್ಲಿಸಬೇಕು !?