|

ಕ್ಷೇತ್ರ ಅಭಿವೃದ್ಧಿಯೇ ನನ್ನ ಗುರಿ ಶಾಸಕ ಎ ಆರ್ ಕೆ.

ಯಳಂದೂರು.23.ಜೂನ್.25:- ತಾಲ್ಲೂಕಿನ ಕೆಸ್ತೂರು, ಮದ್ದೂರು, ದುಗ್ಗಹಟ್ಟಿ,ಯರಿಯೂರು ಗ್ರಾಮಗಳಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ ರವರು ಉಪ್ಪಾರ‌ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗಳಿಗೆ  ಗುದ್ದಲಿ ಪೂಜೆ ಮಾಡಿದರು. ಪೂಜೆ‌ ನೆರವೇರಿಸಿದರು.

ಬಳಿಕ ಮಾತನಾಡಿ ಮದ್ದೂರು ಗ್ರಾಮದ ಉಪ್ಪಾರ ಸಮುದಾಯಭವನಕ್ಕೆ 25 ಲಕ್ಷ, ಯರಿಯೂರು ಉಪ್ಪಾರ ಸಮುದಾಯ ಭವನಕ್ಕೆ 20 ಲಕ್ಷ, ಕೆಸ್ತೂರು ಉಪ್ಪಾರ ಸಮುದಾಯ ಭವನಕ್ಕೆ 25 ಲಕ್ಷ ವನ್ನು ನೀಡಲಾಗಿದೆ.

ದುಗ್ಗಹಟ್ಟಿ ಗ್ರಾಮದಲ್ಲಿ ರಾಜೀವ್ ಗಾಂಧಿ ಗ್ರಾಮಪಂಚಾಯತಿ ಕಟ್ಟಡ ನಿರ್ಮಾಣಕ್ಕೆ 15 ಲಕ್ಷ .ಒಟ್ಟು 85 ಲಕ್ಷ ಇಷ್ಟು ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಲಾಗಿದೆ.

ನಿರ್ಮಿತ ಕೇಂದ್ರದ ಮೂಲಕ ಈ ಕಟ್ಟಡಗಳು ನಿರ್ಮಾಣವಾಗುತ್ತದೆ. ಕಾಂಗ್ರೇಸ್ ಸರಕಾರ ನುಡಿದಂತೆ ನಡೆದಿದೆ ನಾಡಿನ ಜನರ ಕ್ಷೇಮಾಭಿವೃದ್ಧಿ ದೃಷ್ಟಿಯಿಂದ ಚುನಾವಣಾ ಪೂರ್ವ ತಿಳಿಸಿದ  ಐದು ಗ್ಯಾರಂಟಿ ಯೋಜನೆಗಳನ್ನು ಸರಕಾರ‌ ಬಂದಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರ  ಜಾರಿಗೆ ತಂದಿದ್ದಾರೆ..
ಕೊಳ್ಳೇಗಾಲ ವಿಧಾನಸಭೆ ಕ್ಷೇತ್ರದ ಅಭಿವೃದ್ಧಿ ಹಿನ್ನಲೆ ಸರಕಾರದಿಂದ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಮಾಡಲಾಗುತ್ತದೆ.
ನೆನೆಗುದಿಗೆ ಬಿದ್ದಿದ್ದ ಕೆಲ ಹಳ್ಳಿಯ ರಸ್ತೆಗಳು ಹಾಗೂ ಸಮುದಾಯ ಭವನಗಳ ಪೂರ್ಣಗೊಳಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಯೋಗೇಶ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಕೆಸ್ತೂರು ಗ್ರಾಪಂ ಅಧ್ಯಕ್ಷೆ ದೊಡ್ಡತಾಯಮ್ಮ,  ಡಿ ಎನ್ ನಾಗರಾಜು, ಮರಿಸ್ವಾಮಿ, ಮಹೇಶ್, ಪಿ.ರಾಮಕೃಷ್ಣ, ನಾಗಣ್ಣ, ಮಧು, ಸಿದ್ದರಾಜು, ಬಿ ನಾಗರಾಜು, ಗ್ರಾಪಂ ಸದಸ್ಯ ಪ್ರಸಾದ್, ಮಹೇಂದ್ರ, ಅಂಬೇಡ್ಕರ್ ಸಂಘದ ಅಧ್ಯಕ್ಷ ಸಚಿನ್  ಹಾಗೂ ಇತರರು ಹಾಜರಿದ್ದರು

Similar Posts

Leave a Reply

Your email address will not be published. Required fields are marked *