ಕೊಪ್ಪಳ.08.ಆಗಸ್ಟ್.25: ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಬರುವ ವಸತಿ ನಿಲಯಗಳಿಗೆ ಬಾಡಿಗೆ ಕಟ್ಟಡಗಳು ಬೇಕಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿ ನಿಲಯಗಳಲ್ಲಿ ಮಂಜೂರಾತಿ ಸಂಖ್ಯೆಗಿoತ ಹೆಚ್ಚುವರಿ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದರಿಂದ ಹಾಗೂ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರುರವರಿoದ ನಿರ್ದೇಶನ ಇರುವುದರಿಂದ ಕೊಪ್ಪಳ ನಗರ ಪ್ರದೇಶದಲ್ಲಿ 100 ಸಂಖ್ಯಾ ಬಲವುಳ್ಳ ವಸತಿ ನಿಲಯವನ್ನು ಪ್ರಾರಂಭಿಸಲು ಸುಸಜ್ಜಿತವಾದ ಕಟ್ಟಡದ ಜೊತೆಗೆ 10 ಶೌಚಾಲಯ ಮತ್ತು 10 ಸ್ನಾನಗೃಹಗಳು ಹಾಗೂ ಬೋರ್‌ವೆಲ್ ಹೊಂದಿರುವ ಕಟ್ಟಡವನ್ನು ಬಾಡಿಗೆ ರೂಪದಲ್ಲಿ ಇಲಾಖೆಗೆ ನೀಡಲು ಇಚ್ಛಿಸುವ ಕಟ್ಟಡದ ಮಾಲೀಕರು ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ರವರನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸುವoತೆ ಪ್ರಕಟಣೆ ತಿಳಿಸಿದೆ.