ರಾಯಚೂರು.25.ಜುಲೈ 25: ಲೀನ್ ಯೋಜನೆ ಮತ್ತು ಝಡ್‌ಇಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಕಾರ್ಯಕ್ರಮವನ್ನು ರಾಯಚೂರು ಜಿಲ್ಲೆಯ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಜುಲೈ 30ರಂದು ಬೆಳಗ್ಗೆ 10 ಗಂಟೆಗೆ ಸ್ಟೇಷನ್ ರಸ್ತೆಯ ಅಜಾದ್ ನಗರದಲ್ಲಿ ಹೋಟೆಲ್ ರಂಜಿತಾ ಪ್ಯಾಲೆಸ್‌ನಲ್ಲಿ ಆಯೋಜಿಸಲಾಗಿದೆ.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ವೈದ್ಯಕೀಯ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ವೈದ್ಯಕೀಯ ಸಣ್ಣ ಕೈಗಾರಿಕೆಗಳ ಸಂಘ (ಕಾಶಿಯಾ)ದ ಅಧ್ಯಕ್ಷರಾದ ಬಿ.ಆರ್.ಗಣೇಶ್ ರಾವ್ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಕಾಶಿಯಾ ವಿಶೇಷವಾದ ವ್ಯವಸ್ಥೆ ಮಾಡುತ್ತಿದೆ. 75 ವರ್ಷಗಳ ಇತಿಹಾಸ ಹೊಂದಿರುವ ಕಾಶಿಯಾ ಸಂಸ್ಥೆಯು ಸಣ್ಣ ಕೈಗಾರಿಕೆಗಳ ಏಳಿಗೆ ಮತ್ತು ಶ್ರೇಯೋಭಿವೃದ್ಧಿಯ ಉದ್ದೇಶದೊಂದಿಗೆ ಕೆಲಸ ಮಾಡುತ್ತಿದೆ. ರಾಜ್ಯ ಮತ್ತು ದೇಶದ ಸಣ್ಣ ಕೈಗಾರಿಕೆಗಳ ಹಿತಾಶಕ್ತಿಯನ್ನು ಪ್ರತಿನಿಧಿಸುವ ರಾಜ್ಯ ವ್ಯಾಪ್ತಿ ಹೊಂದಿರುವ ಏಕೈಕ ಸಂಸ್ಥೆಯಾಗಿದೆ.
ರಾಜ್ಯಾದ್ಯಂತ ಇರುವ ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕೈಗೊಳ್ಳುವಲ್ಲಿ ಕಾಸಿಯಾವು ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಹಾಗೂ ಸರ್ಕಾರದ ವಿವಿಧ ಯೋಜನೆಗಳು ಮತ್ತು ನೀತಿ ಕುರಿತಂತೆ ಕೈಗಾರಿಕೋದ್ಯಮಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಲೀನ್ ಯೋಜನೆ ಮತ್ತು ಝಡ್‌ಇಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಕಾರ್ಯಕ್ರಮಕ್ಕೆ ಇದೀಗ ರಾಯಚೂರ ಜಿಲ್ಲೆಯನ್ನು ಆಯ್ಕೆ ಮಾಡಿದೆ.
ಎಂಎಸ್‌ಎoಇಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಮತ್ತು ವೇಗಗೊಳಿಸುವುದು, ರ‍್ಯಾಂಪ್ ಯೋಜನೆಯಡಿ, 2025-26ನೇ ಸಾಲಿನಲ್ಲಿ ರಫ್ತು, ಲೀನ್ ಯೋಜನೆ ಮತ್ತು ಝಡ್ ಪ್ರಮಾಣೀಕರಣ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಈಗಾಗಲೇ ರಾಜ್ಯದ 16 ಜಿಲ್ಲೆಗಳಲ್ಲಿ ಕಾಸಿಯಾ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸ್ಥಳೀಯ ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಭಾರತ ಸರ್ಕಾರದ ವಾಣಿಜ್ಯ ಇಲಾಖೆಯ ಡಿಸ್ಟ್ರಿಕ್ಟ್ಸ್ ಆಸ್ ಎಕ್ಸ್ಪೋರ್ಟ್ ಹಬ್ಸ್ ಉಪಕ್ರಮವು ತಳಮಟ್ಟದಲ್ಲಿ ರಫ್ತು ಉತ್ತೇಜನ, ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯ ಗುರಿಯೊಂದಿಗೆ ಹುಟ್ಟಿಕೊಂಡಿದೆ. ಮೇಕ್ ಇನ್ ಇಂಡಿಯಾದ ದೃಷ್ಟಿಕೋನ ಮತ್ತು ಭಾರತದಲ್ಲಿ ರಫ್ತು ಉತ್ತೇಜನ ಪ್ರಯತ್ನಗಳನ್ನು ಸಮನ್ವಯಗೊಳಿಸುತ್ತಿದೆ. ರಾಜ್ಯಗಳು ಮತ್ತು ಜಿಲ್ಲೆಗಳನ್ನು ಪಾಲುದಾರನ್ನಾಗಿಸಿ ದೇಶದ ಪ್ರತಿಯೊಂದು ಜಿಲ್ಲೆಯು ಒಂದು ಸಣ್ಣ ಆರ್ಥಿಕ ಸಾಮರ್ಥ್ಯ ಹೊಂದುವoತೆ ಮಾಡುವ ಉದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಬೆಳೆಸುವ ನಿಟ್ಟಿನಲ್ಲಿ ರಫ್ತು ಕುರಿತಂತೆ ಕಾರ್ಯಗಾರವನ್ನು ಆಯೋಜಿಸಲಾಗಿದೆ.
ಲೀನ್ ಯೋಜನೆಯು ಭಾರತ ಸರ್ಕಾರದ ಉಪಕ್ರಮವಾಗಿದ್ದು, ನೇರ ಉತ್ಪಾದನಾ ತತ್ವಗಳು ಮತ್ತು ತಂತ್ರಗಳನ್ನು ಅನುಷ್ಠಾನಗೊಳಿಸುವ ಮೂಲಕ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯು ಎಂ.ಎಸ್.ಎo.ಇಗಳು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು, ಉತ್ಪನ್ನದ ಗುಣಮಟ್ಟವನ್ನು ಸುಧಾರಿಸಲು ಮತ್ತು ನೇರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಒಟ್ಟಾರೆ ದಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಗುರಿ ಹೊಂದಿದೆ.
ಎo.ಎಸ್.ಎo.ಇ ಸುಸ್ಥಿರ ಪ್ರಾಮಾಣೀಕರಣವು ಎಂ.ಎಸ್.ಎo.ಇ.ಗಳಲ್ಲಿ ಶೂನ್ಯ ದೋಷ ಶೂನ್ಯ ಪರಿಣಾಮ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಎಂ.ಎಸ್.ಎA.ಇ ಸುಸ್ಥಿರ ಝಡ್ ಪ್ರಮಾಣೀಕರಣದ ಪ್ರಯಾಣದ ಮೂಲಕ ಎಂಎಸ್‌ಎoಇಗಳು ವ್ಯರ್ಥವನ್ನು ಗಣನೀಯವಾಗಿ ಕಡಿಮೆ ಮಾಡಬಹುದು, ಉತ್ಪಾದಕತೆಯನ್ನು ಹೆಚ್ಚಿಸಬಹುದು, ಪರಿಸರ ಪ್ರಜ್ಞೆಯನ್ನು ಹೆಚ್ಚಿಸಬಹುದು, ಶಕ್ತಿಯನ್ನು ಉಳಿಸಬಹುದು, ನೈಸರ್ಗಿಕ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿ ಬಳಸಬಹುದು, ತಮ್ಮ ಮಾರುಕಟ್ಟೆಗಳನ್ನು ವಿಸ್ತರಿಸಬಹುದಾಗಿದೆ.
ಈ ಉದ್ದೇಶಿತ ಕಾರ್ಯಕ್ರಮವು ಸೂಕ್ಷö್ಮ ಮತ್ತು ಸಣ್ಣ ಕೈಗಾರಿಕೆಗಳ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸಹಕಾರಿಯಾಗಿದ್ದು ಎಂ.ಎಸ್.ಎo.ಇಗಳ ಸಾಮರ್ಥ್ಯ ವೃದ್ಧಿಗಾಗಿ ನಿರ್ಣಾಯಕವಾಗಲಿದೆ. ಹಾಗೂ ದೀರ್ಘಾವಧಿಯ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ಸಾದಿಸಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ತಮ್ಮ ವ್ಯವಹಾರಗಳನ್ನು ಸಶಕ್ತಗೊಳಿಸುವುದಾಗಿದೆ.
ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ವಿಷಯಕ್ಕೆ ಸಂಬAಧಿಸಿದoತೆ ಸಂಪನ್ಮೂಲ ವ್ಯಕ್ತಿಗಳು ವಿಷಯ ಪ್ರಸ್ತುತಪಡಿಸಲಿದ್ದಾರೆ ಹಾಗೂ ಲೀನ್ ಮತ್ತು ಝಡ್ ಪ್ರಮಾಣೀಕರಣಕ್ಕೆ ಸಂಬoಧಿಸಿದoತೆ ಸ್ಥಳದಲ್ಲೇ ನೋಂದಾಯಿಸಲು ಅನುವಾಗುವಂತೆ ಸಹಾಯ ವೇದಿಕೆಯನ್ನು ತೆರೆಯಲಾಗುತ್ತದೆ. ಆದ್ದರಿಂದ ಹೆಚ್ಚಿನ ಅರಿವು ಪಡೆಯಲು ಸ್ಥಳೀಯ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಲು ಕಾಶಿಯಾದ ಅಧ್ಯಕ್ಷರಾದ ಬಿ.ಆರ್.ಗಣೇಶ್ ರಾವ್ ಅವರು ಪ್ರಕಟಣೆಯ ಮೂಲಕ ಕೋರಿದ್ದಾರೆ.