ಬೆಂಗಳೂರು.13. ಡಿಸೆಂಬರ್.25: ದೇಶದಾದ್ಯಂತ ಸರ್ಕಾರಿ ಉದ್ಯೋಗ ಕನಸನ್ನು ಹೊಂದಿರುವ ಅಭ್ಯರ್ಥಿಗಳಿಗೆ ಕೇಂದ್ರ ವಿದ್ಯಾಲಯ ಸಂಘಟನೆ ಮಹತ್ವದ ಅವಕಾಶ ನೀಡಿದೆ. ಡಿಸೆಂಬರ್ 2025ರ ಅಧಿಕೃತ ಅಧಿಸೂಚನೆಯ ಮೂಲಕ ಒಟ್ಟು 2,499 ಶಿಕ್ಷಕ ಹಾಗೂ ಬೋಧಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 26, 2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಈ ನೇಮಕಾತಿ ಪ್ರಕ್ರಿಯೆ ಅಖಿಲ ಭಾರತ ಮಟ್ಟದಲ್ಲಿ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ದೇಶದ ವಿವಿಧ ಕೇಂದ್ರೀಯ ವಿದ್ಯಾಲಯಗಳಲ್ಲಿ ನಿಯೋಜಿಸಲಾಗುತ್ತದೆ. ಸರ್ಕಾರಿ ವಲಯದಲ್ಲಿ ಶಾಶ್ವತ ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಇದು ಸುವರ್ಣಾವಕಾಶವಾಗಿದ್ದು, ಈಗಾಗಲೇ ಅರ್ಜಿ ಪ್ರಕ್ರಿಯೆಗೆ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ.
ಹುದ್ದೆಗಳ ವಿವರ
ಕೇಂದ್ರೀಯ ವಿದ್ಯಾಲಯ ಸಂಘಟನೆಯು ಈ ನೇಮಕಾತಿಯಲ್ಲಿ ಶಿಕ್ಷಕ (Teaching) ಮತ್ತು ಬೋಧಕೇತರ (Non-Teaching) ಹುದ್ದೆಗಳನ್ನು ಭರ್ತಿ ಮಾಡಲಿದೆ. ಪ್ರಾಥಮಿಕ ಶಿಕ್ಷಕರು, ತರಬೇತಿ ಪಡೆದ ಪದವಿ ಶಿಕ್ಷಕರು, ಸ್ನಾತಕೋತ್ತರ ಶಿಕ್ಷಕರು ಸೇರಿ ವಿವಿಧ ಹುದ್ದೆಗಳ ಜೊತೆಗೆ ಕಚೇರಿ ಸಿಬ್ಬಂದಿ, ಲೆಕ್ಕಪತ್ರ ಸಂಬಂಧಿತ ಹುದ್ದೆಗಳು ಕೂಡ ಒಳಗೊಂಡಿವೆ. ಒಟ್ಟು 2,499 ಹುದ್ದೆಗಳಿವೆ.
ಉದ್ಯೋಗ ಸ್ಥಳ ಮತ್ತು ವೇತನ!
ಆಯ್ಕೆಯಾದ ಅಭ್ಯರ್ಥಿಗಳಿಗೆ ಅಖಿಲ ಭಾರತ ಮಟ್ಟದಲ್ಲಿ ನಿಯೋಜನೆ ನೀಡಲಾಗುತ್ತದೆ. ವೇತನವನ್ನು KVS ನಿಯಮಾವಳಿ ಪ್ರಕಾರ ನೀಡಲಾಗುವುದು. ಕೇಂದ್ರ ಸರ್ಕಾರದ ಮಾನದಂಡದಂತೆ ಆಕರ್ಷಕ ವೇತನ, ಭತ್ಯೆಗಳು ಮತ್ತು ಇತರ ಸೌಲಭ್ಯಗಳು ದೊರೆಯಲಿವೆ.
ವಿದ್ಯಾರ್ಹತೆ:
KVS ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು 12ನೇ ತರಗತಿ, ಪದವಿ, ಬಿ.ಕಾಂ, ಬಿ.ಎಡ್, ಸಿಎ / ಐಸಿಡಬ್ಲ್ಯೂಎ, ಪದವಿ ಶಿಕ್ಷಣ, ಸ್ನಾತಕೋತ್ತರ ಪದವಿ, ಎಂಬಿಎ ಮುಂತಾದ ಅರ್ಹತೆಗಳನ್ನು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು. ಹುದ್ದೆಗನುಸಾರ ಅರ್ಹತೆಗಳು ಬದಲಾಗುತ್ತವೆ.
ಕೆವಿಎಸ್ ಕುರಿತು!
ಕೇಂದ್ರೀಯ ವಿದ್ಯಾಲಯ ಸಂಘಟನ(KVS) ಭಾರತದ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಸರ್ಕಾರಿ ನೌಕರರ ಮಕ್ಕಳಿಗಾಗಿ ದೇಶಾದ್ಯಂತ ಮತ್ತು ವಿದೇಶಗಳಲ್ಲೂ ಶಾಲೆಗಳನ್ನು ನಡೆಸುತ್ತದೆ. ಇದರ ಮುಖ್ಯ ಗುರಿ ರಾಷ್ಟ್ರೀಯ ಏಕೀಕರಣ ಮತ್ತು ಮಕ್ಕಳಲ್ಲಿ ಭಾರತೀಯತೆಯ ಭಾವನೆಯನ್ನು ಮೂಡಿಸುವುದಾಗಿದೆ. KVS ಸಂಸ್ಥೆಯು ಗುಣಮಟ್ಟದ ಶಿಕ್ಷಣ, ಸಮಗ್ರ ವ್ಯಕ್ತಿತ್ವ ವಿಕಸನ, ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಶ್ರೇಷ್ಠತೆಗಳನ್ನು ಸಾಧಿಸಲು ಶ್ರಮಿಸುತ್ತದೆ, ಇದು ವಿಶ್ವದ ಅತಿದೊಡ್ಡ ಶಾಲಾ ಜಾಲಗಳಲ್ಲಿ ಒಂದಾಗಿದೆ.
ವಯೋಮಿತಿ
ವಯೋಮಿತಿಯ ವಿಚಾರದಲ್ಲಿ, ಹೆಡ್ ಮಾಸ್ಟರ್ ಹುದ್ದೆಗೆ ಕನಿಷ್ಠ 35 ವರ್ಷ ವಯಸ್ಸು ಇರಬೇಕು. ಉಳಿದ ಹುದ್ದೆಗಳಿಗೆ ವಯೋಮಿತಿ KVS ನಿಯಮಾವಳಿ ಪ್ರಕಾರ ಇರಲಿದೆ. ವಯಸ್ಸನ್ನು ಡಿಸೆಂಬರ್ 28, 2025ರ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ನಿಯಮಾನುಸಾರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗುತ್ತದೆ.
ಪರೀಕ್ಷೆ, ಉತ್ತರ ಕೀ !
ನೇಮಕಾತಿ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವ ಸಾಧ್ಯತೆ ಇದೆ. ಪರೀಕ್ಷೆಯ ನಂತರ ಪ್ರಕಟಿಸಲಾಗುವ ಉತ್ತರ ಕೀಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅಭ್ಯರ್ಥಿಗಳು ಉತ್ತರ ಕೀ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಬಯಸಿದರೆ, ಪ್ರತಿ ಪ್ರಶ್ನೆಗೆ ₹1,000 ರೂ.,ಗಳ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ!
ಆಸಕ್ತ ಅಭ್ಯರ್ಥಿಗಳು KVS ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದವರೆಗೆ ಕಾಯದೆ, ಅಗತ್ಯ ದಾಖಲೆಗಳೊಂದಿಗೆ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವಂತೆ ಅಭ್ಯರ್ಥಿಗಳಿಗೆ ಸಲಹೆ ನೀಡಲಾಗಿದೆ. ಒಟ್ಟಿನಲ್ಲಿ, ಕೇಂದ್ರ ವಿದ್ಯಾಲಯ ಸಂಘಟನೆಯ ಈ ನೇಮಕಾತಿ ಅಧಿಸೂಚನೆ ಯುವಕರಿಗೆ ಸ್ಥಿರ ಹಾಗೂ ಗೌರವಯುತ ಸರ್ಕಾರಿ ಉದ್ಯೋಗದ ದಾರಿಯನ್ನು ತೆರೆದಿದ್ದು, ಅರ್ಹ ಅಭ್ಯರ್ಥಿಗಳು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕಾಗಿದೆ.





Any questions related to ಕೇಂದ್ರ ವಿದ್ಯಾಲಯ ಸಂಘಟನೆಯಲ್ಲಿ 2,499 ಹುದ್ದೆಗಳ ನೇಮಕಾತಿ! ಬೋಧಕ-ಬೋಧಕೇತರ ಹುದ್ದೆಗಳಿಗೆ ಅರ್ಜಿ?