|

ಕೆ.ಕೆ ಪ್ರಥಮ ದರ್ಜೇ ಕಾಲೇಜಿನಲ್ಲಿ “ವಿಶ್ವ ಪರಿಸರ ದಿನಾಚರಣೆ” ಆಚರಣೆ.!

ಬೀದರ್,ಜೂ:೦೫:- ನಗರದ ಕವಿರತ್ನ ಕಾಳಿದಾಸ ಪ್ರಥಮ ದರ್ಜೇ ಕಾಲೇಜಿನಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆ        
ಕಾರ್ಯಕ್ರಮ ಆಚರಿಸಲಾಯಿತು.


ಡಿ.ದೇವರಾಜ ಅರಸ ಶಿಕ್ಷಕರ ತರಬೇತಿ ಕೇಂದ್ರದ ಅಧಿಕ್ಷಕರಾದ ವೈಜಿನಾಥ ಬಿರಾದರ ರವರು ಮುಖ್ಯಾ ಅತಿಥಿಸ್ಥಾನ ವಹಿಸಿ ಸಸಿಗೆ ನೀರ ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ವಿಶ್ವ ಪರಿಸರ ದಿನವನ್ನು ಪ್ರತಿ ವರ್ಷ ಜೂನ್ ೫ ರಂದು ಆಚರಿಸಲಾಗುತ್ತದೆ ವಿಶ್ವ ಪರಿಸರ ದಿನವು ಪರಿಸರ ಕ್ರಿಯೆಗೆ ಅತ್ಯಂತ ಪ್ರಸಿದ್ದ ದಿನವಾಗಿದೆ ಎಂದು ನುಡಿದರು. 


ಮಹಾವಿದ್ಯಾಲಯದ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ರಾಜಕುಮಾರ ರಾಠೋಡ ಅತಿಥಿ ಸ್ಥಾನ ವಹಿಸಿ ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಪರಿಸರದ ಸಮೃದ್ಧಿ ಆರೋಗ್ಯಕರ ಜೀವನಕ್ಕೆ ಬಹು ಮುಖ್ಯಾವಗಿದೆ ಎಂದರು.


ಮಹಾವಿದ್ಯಲಯದo ಪ್ರಾಂಶುಪಾಲರಾದ ಡಾ. ಗಿರಿರಾವ ಕುಲಕರ್ಣಿ ರವರು ಅಧ್ಯಕ್ಷತೆ ವಹಿಸಿ ಕೇವಲ ಮಾನವರಿಗಷ್ಟೇ ಅಲ್ಲ ಇತರೆ ಪ್ರಾಣಿ, ಪಕ್ಷಿಗಳು ಸೇರಿದಂತೆ ಪ್ರತಿಯೊಂದು ಜೀವ ಸಂಕುಲ ಆಹಾರ, ಗಾಳಿ, ನೀರು ಇತರೆ ಅಗತ್ಯೆಗಳಿಗಾಗಿ ಪರಿಸರವನ್ನು ಅವಲಂಬಿಸಿದೆ ಎಂದು ಮಾತನಾಡಿದರು.


ಮಹಾವಿದ್ಯಾಲಯದ ಗ್ರಂಥಪಾಲಕರಾದ ವೈಜಿನಾಥ ಎಮ್.ಗೌಡನಗುರು ಕಾರ್ಯಕ್ರಮ ನಿರೂಪಿಸಿದರೆ, ಮಹಾವಿದ್ಯಲಯದo ದೈಹಿಕ ನಿರ್ದೇಶಕರಾದ ಓಂಕಾರ ಮಾಶೆಟ್ಟಿಯವರು ವಂದಿಸಿದರು.


ಈ ಸಂದರ್ಭದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Similar Posts

Leave a Reply

Your email address will not be published. Required fields are marked *