12/08/2025 1:09 AM

Translate Language

Home » ಲೈವ್ ನ್ಯೂಸ್ » ಕೆಸ್ತೂರಿನ ದಲಿತ ನೀಲಗಾರರು ಕಂಡಾಯ ಹೊತ್ತಿ ಸಮಾನತೆ ಸಾರಿದರು.

ಕೆಸ್ತೂರಿನ ದಲಿತ ನೀಲಗಾರರು ಕಂಡಾಯ ಹೊತ್ತಿ ಸಮಾನತೆ ಸಾರಿದರು.

Facebook
X
WhatsApp
Telegram

ಯಳಂದೂರು.04.ಮಾರ್ಚ.25:- ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ದಲಿತ ನೀಲಗಾರರು ತಾಲ್ಲೂಕಿನಲ್ಲಿಯೇ ಮೊದಲ ಬಾರಿಗೆ  ಕಂಡಾಯವನ್ನು ಹೊರುವ ಮೂಲಕ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ.

ಗ್ರಾಮದ ನಂಜುಂಡಸ್ವಾಮಿರವರು ತಮ್ಮ ಮಗನಿಗೆ ನೀಲಗಾರರನ್ನು ಮಾಡಲು ಕುರುಬನ ಕಂಡಾಯವನ್ನು ತರಸಿ ಕಾರ್ಯಕ್ರಮ ಮಾಡುವಾಗ ಗ್ರಾಮದ ದಲಿತ ನೀಲಗಾರರು ಕಂಡಾಯವನ್ನು ಹೊತ್ತಿ ಸಮಾನತೆ ಸಾರಿದರು.

ಕಂಡಾಯ ಹೊರುವಂತಹ ಪದ್ದತಿ ಕುರುಬ ಸಮುದಾಯ, ಲಿಂಗಾಯತರು, ನಾಯಕರಿಗೆ ಮಾತ್ರ ಮೀಸಲಾಗಿತ್ತು ಈ ವಿಷಯವನ್ನು ದಲಿತ ಮುಖಂಡರು ಜನಪ್ರತಿನಿಧಿಗಳು ಚರ್ಚಿಸಿ ಕುರುಬನ ಕಟ್ಟೆ ಕ್ಷೇತ್ರದ  ಧರ್ಮಾಧಿಕಾರಿ ವರುಣರಾಜೇ ಅರಸು ಸಮ್ಮುಖದಲ್ಲಿ ಚರ್ಚಿಸಿ ನಂತರ ಕಳದೆ ವರುಷ ಸಿದ್ದಯ್ಯನಪುರದಲ್ಲಿ ದಲಿತ ನೀಲಗಾರರು ಚಾಮರಾಜನಗರ ಜಿಲ್ಲೆಯಲ್ಲಿಯೇ ಮೊಟ್ಟಮೊದಲು ಕಂಡಾಯಹೊತ್ತು ಇತಿಹಾಸ ಮಾಡಿದರು.

ಅದೇ ರೀತಿ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಯಜಮಾನರುಗಳು ಧರ್ಮಾಧಿಕಾರಿ ವರುಣರಾಜೇ ಅರಸು ರವರ ಬಳಿ ಹೋಗಿ ನಮ್ಮ ಗ್ರಾಮದಲ್ಲಿಯೂ ದಲಿತ ನೀಲಗಾರರು ಕಂಡಾಯ ಹೊರುವುದಕ್ಕೆ ಅನುಮತಿ ಕೇಳಿದಾಗ ಮಂಟೇಸ್ವಾಮಿ ಪರಂಪರೆ ಸಮಾ‌ನತೆಯಿಂದ ಕೂಡಿದೆ ಯಾವುದೇ ತಾರತಮ್ಯವಿಲ್ಲ ದಲಿತರು ಕೂಡ ಹೊರಬಹುದು ಎಂದು ತಿಳಿಸಿದರು.


ಈ ಹಿನ್ನಲೆ ಮಂಗಳವಾರ ಕುರುಬನ ಕಟ್ಟೆ ಕ್ಷೇತ್ರ ಕಂಡಾಯವನ್ನು ಕೆಸ್ತೂರು  ಗ್ರಾಮದ ದಲಿತ ನೀಲಗಾರರು ಹೊತ್ತಿ ಸಮಾನತೆಯನ್ನು ಸಾರಿ ಯಳಂದೂರು ತಾಲ್ಲೂಕಿನಲ್ಲಿಯೇ ಮೊಟ್ಟ ಮೊದಲು ದಲಿತ ನೀಲಗಾರರು ಕಂಡಾಯವನ್ನು ಹೊತ್ತಿ ಐತಿಹಾಸಿಕ ಘಟನೆ ಸಾಕ್ಷಿಯಾಗಿದೆ.

ದಲಿತ ನೀಲಗಾರರು ಮಾತನಾಡಿ ಮೈಸೂರು ಚಾಮರಾಜನಗರ ಮಂಡ್ಯ ಕನಕಪುರ ಬೆಂಗಳೂರು ಭಾಗದಲ್ಲಿ  ಮಂಟೇಸ್ವಾಮಿ ಸಿದ್ದಪ್ಪಾಜ್ಜಿ, ರಾಚಪ್ಪಾಜ್ಜಿ, ಚೆನ್ನಾಜಮ್ಮ, ದೊಡ್ಡಮ್ಮ ತಾಯಿ ರವರ ಪರಂಪರೆ ದೊಡ್ಡದಾಗಿದೆ.

ಇವರು ಅಂದಿ‌ನ ಕಾಲದಲ್ಲಿ ಸಮ ಸಮಾಜ ನಿರ್ಮಾಣ ಮಾಡಲು ಕ್ರಾಂತಿ ಮಾಡಿದಂತಹ ಮಹಾನಿಯರ್ ಇವರ ತತ್ವ ಸಿದ್ದಾಂತಗಳನ್ನು ನೀಲಗಾರರು ಜನರಿಗೆ ತಿಳಿಸುವಂತಹ ಕಾಯಕವನ್ನು ಮಾಡಿಕೊಂಡು ಬಂದಿದ್ದಾರೆ.

ಕುರುಬನ ಕಟ್ಟೆ ಕ್ಷೇತ್ರದ ಲಿಂಗಯ್ಯ ಮತ್ತು ಚೆನ್ನಯ್ಯ ನವರ ಕಂಡಾಯವನ್ನು ಮಂಟೇಸ್ವಾಮಿ ಪರಂಪರೆಯ ಮೂಲಾಧಾರವಾಗಿರುವುದರಿಂದ ಈ ಕಂಡಾಯವನ್ನು ದಲಿತರಾದ ನಾವು ಹೊತ್ತು ಮೆರವಣಿಗೆ ಮಾಡಲಾಗಿದೆ ನಮಗೆ ತುಂಬಾ ಸಂತೋಷವಾಗುತ್ತದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ನಾಗರಾಜು ಬಿ, ಕುಮಾರ್, ಜಯರಾಜ್, ದೊರೆಸ್ವಾಮಿ, ಮುಖಂಡರಾದ ಸಿದ್ದರಾಜು, ನಾಗರಾಜು ಎಂ, ಮಧು ಕೆಸ್ತೂರು, ಸಿದ್ದಯ್ಯ ರಾಮಕೃಷ್ಣ, , ಗ್ರಾಪಂ ಸದಸ್ಯರಾದ ಗುರುಲಿಂಗಯ್ಯ,  ಪ್ರಸಾದ್, ಮಹೇಂದ್ರ, ಅಂಬೇಡ್ಕರ್ ಸಂಘದ ಅಧ್ಯಕ್ಷ ಸಚಿನ್, ಅಂಬೇಡ್ಕರ್ ಸಂಘದ ಪದಾಧಿಕಾರಿಗಳಾದ ಸಂಜಯರಾಜ್ ಜೆ. ಕಿರಣ್, ನಂಜಯ್ಯ, ರಾಜು ಹಾಗೂ ಗ್ರಾಮದ ನೀಲಗಾರರು ಹಾಜರಿದ್ದರು .

_ G Prasankumar Kittur

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD