ಬೀದರ.01.ಜುಲೈ.25:- ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ಆಧೀನದಲ್ಲಿ ಬರುವ ಬೀದರ್ ತಾಲೂಕಿನ ಜನವಾಡಾ ಹತ್ತಿರದ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ ೨೦೨೫-೨೬ ನೇ ಸಾಲೀನ ಡಿಪ್ಲೋಮಾ (ಕೃಷಿ) ಕೋರ್ಸ್ ಪ್ರವೇಶ ಪ್ರಕ್ರಿಯೆ ಆರಂಭಗೊoಡಿದೆ.
ಎರಡು ವರ್ಷಗಳ ಈ ಕೋರ್ಸ್ಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ದಿನಾಂಕ
೨೮-೦೭-೨೦೨೫ ಕ್ಕೆ ಅಭ್ಯರ್ಥಿಗಳು ೧೯ ವರ್ಷ ಮೀರದ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಶೇ. ೪೫% (ಪಜಾ/ಪಪಂ/ಪ್ರವರ್ಗ-೧ ಶೇ.೪೦%) ಅಂಕಗಳು ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಜೂಲೈ ೨೮ ಕೊನೆಯ ದಿನವಾಗಿದೆ. ರೈತರ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಶೇಕಡಾ ೫೦ ರಷ್ಟು ಸೀಟಗಳನ್ನು ಮೀಸಲಾಗಿಡಲಾಗಿದೆ.

ಈ ಪ್ರವೇಶಕ್ಕೆ ಕುರಿತಂತೆ ಅರ್ಜಿ ನಮೂನೆಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ವೆಬ್‌ಸೈಟ್ ತಿತಿತಿ.uಚಿsಡಿಚಿiಛಿhuಡಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ದಿನಾಂಕ ೨೮.೦೭.೨೦೨೫ ವರೆಗೆ ಡೌನಲೋಡ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಡಾ ಆರ್. ಎಲ್. ಜಾಧವ ಮೋ: ೯೯೭೨೧೪೬೨೧೪ ಅಥವಾ ಶ್ರೀ ಕಾಂಬಳೆ ರಾಮದಾಸ ಮೋ:೮೮೯೨೫೮೯೦೩೬ ಗೆ ಸಂಪರ್ಕಿಸುವAತೆ ಕಾಲೇಜಿನ ಸಂಯೋಜಕಾರದ ಡಾ.ಆರ್.ಎಲ್. ಜಾಧವ ಪ್ರಕಟಣೆಯಲ್ಲಿ ಕೋರಿದ್ದಾರೆ