01/08/2025 7:24 AM

Translate Language

Home » ಲೈವ್ ನ್ಯೂಸ್ » ಕೃಷಿ ಇಲಾಖೆಯಿಂದ ಪಿಎಮ್‌ಎಫ್‌ಎಮ್‌ಇ ಯೋಜನೆಯ ಕಾರ್ಯಗಾರ ಯಶಸ್ವಿ
ರಾಯಚೂರು

ಕೃಷಿ ಇಲಾಖೆಯಿಂದ ಪಿಎಮ್‌ಎಫ್‌ಎಮ್‌ಇ ಯೋಜನೆಯ ಕಾರ್ಯಗಾರ ಯಶಸ್ವಿ
ರಾಯಚೂರು

Facebook
X
WhatsApp
Telegram

ರಾಯಚೂರು.31.ಜುಲೈ 25: ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮ ಬದ್ದಗೊಳಿಸುವಿಕೆ ಅಂಗವಾಗಿ ಜಿಲ್ಲಾಮಟ್ಟದ ಅರಿವು ಮೂಡಿಸುವ ಕಾರ್ಯಾಗಾರವು ಜುಲೈ 30ರಂದು ನಡೆಯಿತು.

ಇಲ್ಲಿನ ಕೃಷಿ ಇಲಾಖೆಯಿಂದ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ರೈತರು ಪಿಎಮ್‌ಎಫ್‌ಎಮ್‌ಇ ಯೋಜನೆಯ ಫಲಾನುಭವಿಗಳು, ರೈತ ಉತ್ಪಾದಕ ಸಂಸ್ಥೆಗಳ ಪ್ರತಿನಿಧಿಗಳು, ರಾಷ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಮತ್ತು ರಾಷ್ಟೀಯ ನಗರ ಜೀವನೋಪಾಯ ಅಭಿಯಾನದ ಫಲಾನುಭವಿಗಳು ಹಾಗೂ ನವೋದ್ಯಮಿಗಳು ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕೆಪೆಕ್ ಸಂಸ್ಥೆಯ ರಾಜ್ಯ ಮಟ್ಟದ ಅಧಿಕಾರಿಗಳು ಭಾಗವಹಿಸಿ ಪಿಎಮ್‌ಎಫ್‌ಎಮ್‌ಇ ಯೋಜನೆಯ ಸೌಲಭ್ಯವನ್ನು ಪಡೆಯಲು ಇರುವಂತಹ ಮಾನದಂಡಗಳ ಕುರಿತು ಮಾಹಿತಿ ಒದಗಿಸಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಈ ಯೋಜನೆಯಡಿ ಸಾಲ-ಸೌಲಭ್ಯದ ಕುರಿತು ಮಾಹಿತಿ ನೀಡಿದರು.

ಆಹಾರ ಸಂಸ್ಕರಣೆಯ ಕುರಿತಾಗಿ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರು ಆಹಾರ ಸಂಸ್ಕರಣೆಯ ಮತ್ತು ತಮ್ಮಲ್ಲಿರುವ ಸೌಲಭ್ಯಗಳ ಕುರಿತಾಗಿ ರೈತರಿಗೆ ಮಾಹಿತಿ ನೀಡಿದರು. ಸೆಲ್ಲೊ ಸಂಸ್ಥೆಯ ಪ್ರತಿನಿಧಿಗಳು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಯೋಜನೆಯ ಫಲಾನುಭವಿ ರೈತರಾದ ಶ್ರೀಮತಿ ಈರಮ್ಮ ಅವರು ಕಸೆ ಕ್ಯಾಂಪ್ ಮತ್ತು ಮಹಮ್ಮದ್ ಇಸ್ಮಾಯಿಲ್ ರಾಯಚೂರು ಅವರು ಈ ಯೋಜನೆಯಿಂದ ತಾವು ಪಡೆದಿರುವಂತ ಸಹಾಯಧನ ಮತ್ತು ತಮ್ಮ ಉತ್ಪನ್ನಗಳ ಹಾಗೂ ಆದಾಯದ ಕುರಿತು ವೇದಿಕೆಯಲ್ಲಿ ಅನಿಸಿಕೆ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕರಾದ ಪ್ರಕಾಶ್ ಚಾವ್ಹಾಣ್ ಅವರು ಮಾತನಾಡಿ, ಈ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸುಮಾರು 135 ರೈತ ಫಲಾನುಭವಿಗಳು ಸೌಲಭ್ಯ ಪಡೆದಿರುವುದಾಗಿ ಮತ್ತು ಇದರಿಂದ ಉತ್ತಮ ಜೀವನ ನಿರ್ವಹಣೆ ಮಾಡುತ್ತಿರುವುದಾಗಿ ಹಾಗೂ ಇನ್ನೂ ಹೆಚ್ಚಿನ ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕಾಗಿ ತಿಳಿಸಿದರು.
ಕಾರ್ಯಾಗಾರದಲ್ಲಿ ಯೋಜನೆಯ ಸಹಾಯಧನ ಸೌಲಭ್ಯ ಪಡೆದಂತಹ ಫಲಾನುಭವಿಗಳು ತಮ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕೆಪೆಕ್ ಸಂಸ್ಥೆಯ ಅಧಿಕಾರಿಗಳು, ಜಂಟಿ ಕೃಷಿ ನಿರ್ದೇಶಕರು, ಕೌಶಲ್ಯಾಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರು, ನಬಾರ್ಡ್ ಮುಖ್ಯಸ್ಥರು, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ರಾಯಚೂರು ವಿಭಾಗದ ಉಪ ಕೃಷಿ ನಿರ್ದೇಶಕರು, ಲಿಂಗಸುಗೂರು ವಿಭಾಗದ ಉಪ ಕೃಷಿ ನಿರ್ದೇಶಕರು, ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ವಿಜ್ಞಾನಿಗಳು, ಉಪ ನಿರ್ದೇಶಕರು-ತೋಟಗಾರಿಕೆ ಇಲಾಖೆ ಮತ್ತು ಪಶು ಸಂಗೋಪನಾ ಇಲಾಖೆ,  ಸಂಸ್ಥೆಯ ಪ್ರತಿನಿಧಿಗಳು, ತಾಲೂಕಿನ ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳು, ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!