Home » ಲೈವ್ ನ್ಯೂಸ್ » ಕುಷ್ಟಗಿ ಮೀನುಗಾರಿಕೆ ಇಲಾಖೆ: ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

ಕುಷ್ಟಗಿ ಮೀನುಗಾರಿಕೆ ಇಲಾಖೆ: ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನ

Facebook
X
WhatsApp
Telegram

ಕೊಪ್ಪಳ.09.ಜುಲೈ.26: ಕುಷ್ಟಗಿ ಮೀನುಗಾರಿಕೆ ಇಲಾಖೆಯಿಂದ 2026–27ನೇ ಸಾಲಿನ ಜಿಲ್ಲಾವಲಯದ ಜಿಲ್ಲಾ ಪಂಚಾಯತ್ ಯೋಜನೆಯಡಿ ವಿವಿಧ ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಇಲಾಖೆಯ ವಿವಿಧ ಯೋಜನೆಗಳಾದ ಕೆರೆ ಅಂಚಿನಲ್ಲಿ ಮೀನುಮರಿ ಪಾಲನಾ ಕೊಳಗಳ ನಿರ್ಮಾಣ ಹಾಗೂ ಮೀನುಮರಿಗಳ ಪಾಲನೆಗೆ ಸಹಾಯಧನ, ಮೀನುಮರಿಗಳ ಖರೀದಿಗೆ ಸಹಾಯಧನ, ಮೀನುಗಾರಿಕೆ ಸಲಕರಣೆ ಕಿಟ್‌ಗಳ ವಿತರಣೆ, ಒಳನಾಡು ಮೀನುಗಾರಿಕೆ ಅಭಿವೃದ್ಧಿಗೆ ನೆರವು, ಮೀನು ಮಾರಾಟಕ್ಕೆ ಸಹಾಯ ಮತ್ತು ಹೊಸದಾಗಿ ದ್ವಿಚಕ್ರ ಅಥವಾ ತ್ರಿಚಕ್ರ ವಾಹನದೊಂದಿಗೆ ಐಸ್‌ಬಾಕ್ಸ್ ಖರೀದಿಸಲು ಸಹಾಯಧನ ನೀಡಲಾಗುತ್ತದೆ.


ಸರ್ಕಾರದ ಮಾರ್ಗಸೂಚಿಯನ್ವಯ ಲಭ್ಯವಿರುವ ಅನುದಾನದ ಮೇರೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಕುಷ್ಟಗಿ ತಾಲ್ಲೂಕಿನ ಅರ್ಹ ಮತ್ತು ಆಸಕ್ತ ಮೀನುಗಾರರು ಹಾಗೂ ಮೀನುಗಾರರ ಸಹಕಾರ ಸಂಘಗಳ ಅಥವಾ ಎಫ್.ಎಫ್.ಪಿ.ಒ. ಸಂಸ್ಥೆಗಳ ಸದಸ್ಯರು ಅಗತ್ಯ ದಾಖಲೆಗಳೊಂದಿಗೆ ಜುಲೈ 15ರೊಳಗೆ ಕುಷ್ಟಗಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.

Author

ಪ್ರಮುಖ ಸುದ್ದಿ

Stock market

Astrology