ಬೀದರ. 17.ಜುಲೈ.25:- ಬೀದರ್ ಜಿಲ್ಲೆ, ಔರಾದ್(ಬಿ) ಪಟ್ಟಣದ ಸರ್ವೆ ನಂ.154/2 ಹಾಗೂ 154/3 ರಲ್ಲಿ ಬೇರೆ ಉದ್ದೇಶಕ್ಕಾಗಿ (CA site) ಮೀಸಲಿಟ್ಟ ಸ್ಥಳವನ್ನು ಕುಂಬಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡುವ ಕುರಿತು.
ಬೀದರ್ ಜಿಲ್ಲೆಯ ಔರಾದ್ (ಬಿ) ಪಟ್ಟಣದಲ್ಲಿ ಕುಂಬಾರ ಸಮುದಾಯದವರು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಾಗಿದ್ದು, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಲು ಭವನದ ಕೊರತೆ ಇರುತ್ತದೆ. ಆದ ಕಾರಣ ಔರಾದ್ (ಬಿ) ಪಟ್ಟಣದ ಸರ್ವೆ ನಂ.154/2 ಹಾಗೂ 154/3 ರಲ್ಲಿ ಬೇರೆ ಉದ್ದೇಶಕ್ಕಾಗಿ ಮೀಸಲಿಟ್ಟ ಸ್ಥಳವಿದ್ದು, ಸದರಿ ಸ್ಥಳವನ್ನು ಕುಂಬಾರ ಸಮುದಾಯ ಭವನವನ್ನು ನಿರ್ಮಿಸಲು ಸದರಿ ಸ್ಥಳವನ್ನು ಮಂಜೂರು ಮಾಡುವುದು ಅವಶ್ಯಕವಿರುತ್ತದೆ.
ಆದುದರಿಂದ ನನ್ನ ಮತಕ್ಷೇತ್ರದ ವ್ಯಾಪ್ತಿಯ ಔರಾದ್ (ಬಿ) ಪಟ್ಟಣದ ಪಟ್ಟಣದ ಸರ್ವೆ ನಂ.154/2 ಹಾಗೂ 154/3 ರಲ್ಲಿ ಬೇರೆ ಉದ್ದೇಶಕ್ಕಾಗಿ ಮೀಸಲಿಟ್ಟ ಸದರಿ ಸ್ಥಳವನ್ನು ಕುಂಬಾರ ಸಮುದಾಯದವರಿಗೆ ಕುಂಬಾರ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಮಂಜೂರು ಮಾಡಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರಿದೆ.





Any questions related to ಕುಂಬಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರಾತಿಗೆ ಮನವಿ.?