ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆಗೆ ಕಲಬುರಗಿ ಜಿಲ್ಲಾ ಹಡಪದ ಸಮುದಾಯ ತೀವ್ರ ಖಂಡನೆ.
ಸಣ್ಣ ಸಮುದಾಯಕ್ಕೆ ಜಾತಿ ನಿಂದನೆ ಮಾಡಿದ ಕಾರ್ಮಿಕ ಸಚಿವರಿಗೆ ಶಾಸಕ ಸ್ಥಾನ ವಜಾ ಗೊಳಿಸಲು ರಾಜ್ಯದ ಸಿ.ಎಮ್ ಸಿದ್ರಾಮಯ್ಯನವರಿಗೆ ಕಲಬುರಗಿ ಜಿಲ್ಲಾ ಹಡಪದ ಸಮುದಾಯ ಆಗ್ರಹ.
ಕಲಬುರಗಿ.03.ಫೆಬ್ರವರಿ.26:- ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಕುರಿತು ಮಾಧ್ಯಮ ವರದಿಗಾರರು ಸಂದರ್ಶನ ಮಾಡಿ ಪ್ರಶ್ನೆ ಕೇಳಿದಾಗ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ ಬರದಲ್ಲಿ ಬಾರ ಬಾರ್ ಅಂದರೆ (ಹಜಾಮ್) ಎಂಬ ನಿಷೇಧ ಪದವನ್ನು ಬಳಸಿ ಜಾತಿ ನಿಂದನೆ ಮಾಡಿದ ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಮಿಕ ಸಚಿವರು ಶ್ರೀ ಸಂತೋಷ್ ಎಸ್. ಲಾಡ್. ಅವರು ಧಾರವಾಡ ಜಿಲ್ಲೆಯ ಕಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರವನ್ನು ಶಾಸಕರು ಮತ್ತು ಕಾರ್ಮಿಕ ಸಚಿವರು ಅವರು ನೀಡಿರುವ ಈ ಹೇಳಿಕೆಯನ್ನು ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜ ಹಾಗೂ ಇತರ ಹಿಂದುಳಿದ ಸಣ್ಣ ಸಣ್ಣ (ಒಬಿಸಿ ) ಯ ಸಮುದಾಯಗಳು ಮತ್ತು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಹಡಪದ ಅಪ್ಪಣ್ಣ (ಕ್ಷೌರಿಕ) ಸಮುದಾಯದ ನಿಷೇಧಿತ ಪದ ಬಳಸಿ, ಸಮಾಜವನ್ನು ಅವಮಾನಿಸಿದ್ದಾರೆ. ಹಿಂದುಳಿದ ವರ್ಗಗಳಿಗೆ ನೋವು ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಒಂದು ಸಮುದಾಯವನ್ನು ಸಾರ್ವಜನಿಕವಾಗಿ ಅಪಮಾನಿಸುವುದು ಅಕ್ಷಮ್ಯ ಅಪರಾಧ. ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವಿರುದ್ಧದ ಸಾರ್ವಜನಿಕವಾಗಿ ಹೇಳಿಕೆ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಸಮಾಜದಲ್ಲಿ ಜಾತಿ ಆಧಾರಿತ ತಾರತಮ್ಯ, ದ್ವೇಷ ಹಾಗೂ ಅಶಾಂತಿಗೆ ಕಾರಣ ಆಗುವಂಥದ್ದಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಣ್ಣ ಸಣ್ಣ ಸಮುದಾಯಗಳನ್ನು ಕೀಳಾಗಿ ಕಾಣುವುದು ಕಾಂಗ್ರೆಸ್ ನ ಶಾಸಕರು ಈ ರೀತಿಯ ಮಾತನಾಡುವ ಸಂಸ್ಕೃತಿ ಯಾಗಿದೆ. ಆ ಪಕ್ಷದ ನಾಯಕರು ಜಾತಿಗಳನ್ನು ವೃತ್ತಿಯ ಹೆಸರಲ್ಲಿ ಹಂಗಿಸುವ ಚಾಳಿ ಬೆಳೆಸಿಕೊಂಡಿದ್ದಾರೆ. ಇದಕ್ಕೆ ಸಂತೋಷ ಲಾಡ್ ಅವರ ಹೇಳಿಕೆಯೇ ತಾಜಾ ಉದಾಹರಣೆ ಎಂದು ಹೇಳಿದ್ದಾರೆ. ಹಡಪದ ಸಮಾಜವನ್ನು ಅಪಮಾನಿಸಿದ ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ್ ವಿರುದ್ಧ ಕಾಂಗ್ರೆಸ್ ನ ವರಿಷ್ಠರು ಕ್ರಮ ಕೈಗೊಳ್ಳಬೇಕು.
ಇಲ್ಲವಾದಲ್ಲಿ ಮತ್ತು ಆದಷ್ಟು ಬೇಗ ಹಡಪದ ಅಪ್ಪಣ್ಣ (ಕ್ಷೌರಿಕ) ಸಮುದಾಯಕ್ಕೆ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ನಮ್ಮ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ರೀತಿಯ ಜಾತಿ ನಿಂದನೆ ಪದಕ್ಕೆ ಕಡಿವಾಣ ಹಾಕುವ ಕೆಲಸ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕು.
ಈ ನಿಟ್ಟಿನಲ್ಲಿ ಈಗಿನ ಬೆಂಗಳೂರು ನಗರದಲ್ಲಿ ನಡೆಯುತ್ತಿರುವ ೨೦೨೬ ಸಾಲಿನ ರಾಜ್ಯ ಪೂರ್ವಭಾವಿ ಬಜೆಟ್ ಮಂಡನೆ ಸದನದಲ್ಲಿ ಕಲಾಪ ಚರ್ಚೆಗಳು ನಡೆಯುತ್ತಿವೆ. ಈ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಕಾಯಕ ಬಂಧುಗಳಿಗೆ ‘ಜಾತಿ ನಿಂದನೆ ” ಮಾಡಿ ಈ ಕ್ಷೌರಿಕ ಸಮಾಜಕ್ಕೆ ಅಪಹಾಸ್ಯ ಮಾಡಿ ಚುಚ್ಚು ಮಾತನಾಡುವ ವ್ಯಕ್ತಿಗಳಿಗೆ, ಕಾನೂನು ಪ್ರಕಾರ “ಅಟ್ರಾಸಿಟಿ” ಕಾನೂನು ಜಾರಿಗೆ ತರುವಂತೆ ಸರ್ಕಾರ ಸೊಕ್ತ ಚರ್ಚೆ ಅಧಿವೇಶನದಲ್ಲಿ ಮಾಡಲಿ.
ಈ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ (ಕಾಯಕ) ಬಂಧುಗಳಿಗೆ ನ್ಯಾಯ ಸಿಗಲಿ ಎಂಬುದು ಈ ಕರ್ನಾಟಕ ರಾಜ್ಯದ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಬಹು ದಿನಗಳ ಈ ಬೇಡಿಕೆಯ ಈಡೇರಲಿ. ಸಮಾಜದ ಜನತೆ ತೆಲೆ ಎತ್ತಿ ಗೌರವದಿಂದ ಕಾಣುವ ಹಾಗೆ ಬೆಳೆಯಬೇಕು ನಮ್ಮ ಹಡಪದ ಅಪ್ಪಣ್ಣ ಕ್ಷೌರಿಕ ಸಮುದಾಯ ಜನರು ಎಂದು ಈ ಪತ್ರಿಕೆಯ ಮಾಧ್ಯಮ ಮೂಲಕ ತಮ್ಮ ಆಕ್ರೋಶ ವನ್ನು ವ್ಯಕ್ತಪಡಿಸಿದರು.






Any questions related to ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆಗೆ ಕಲಬುರಗಿ ಜಿಲ್ಲಾ ಹಡಪದ ಸಮುದಾಯ ತೀವ್ರ ಖಂಡನೆ.?