|

ಕಾಣೆಯಾದ ವ್ಯಕ್ತಿ ಪತ್ತೆಗಾಗಿ ಮನವಿ

ಬೀದರ.03.ಜನವರಿ.26:- ಹುಮನಾಬಾದ ತಾಲ್ಲೂಕಿನ ಬೊರಂಪಳ್ಳಿ ಗ್ರಾಮದ ಬುದ್ಧಿಮಾಂದ್ಯನಾದ ಭಾಗ್ಯವಂತ ಬಾಬುರಾವ ಜಮಾದಾರ (28) ಇವರು ದಿನಾಂಕ: 19-12-2025 ರಂದು ಮನೆಯಿಂದ ಹೊರಗಡೆ ಹೋಗಿ ಕಾಣೆಯಾಗಿರುತ್ತಾನೆ.
ಕಾಣೆಯಾಗಿರುವ ವ್ಯಕ್ತಿಯು 5.5 ಅಡಿ ಎತ್ತರ ಇದ್ದು, ಸಾಧಾರಣ ಮೈಕಟ್ಟು ಮತ್ತು ಗೋಧಿ ಬಣ್ಣ ಹೊಂದಿದ್ದು, ಮೈಮೇಲೆ ನೀಲಿ ಬಣ್ಣದಲ್ಲಿ ಬಿಳಿ ಪಟ್ಟಿವುಳ್ಳ ಶರ್ಟ ಮತ್ತು ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುವ ಇತನು ಕನ್ನಡ ತಮ್ತು ಇಂಗ್ಲೀಷ ಹಾಗೂ ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ.

ಕಾಣೆಯಾಗಿರುವ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಚಿಟಗುಪ್ಪಾ ಪಿ.ಎಸ್.ಐ. ಮೊಬೈಲ್ ಸಂಖ್ಯೆ: 9480803455, 08483277133, ಹಾಗೂ ಚಿಟಗುಪ್ಪಾ ಸಿಪಿಐ ಮೊಬೈಲ್ ಸಂಖ್ಯೆ: 9480803434, ಬೀದರ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08482-2267043 ಗೆ ಸಂಪರ್ಕಿಸುವAತೆ ಚಿಟಗುಪ್ಪಾ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

Similar Posts

Leave a Reply

Your email address will not be published. Required fields are marked *