ಬೀದರ.15.ಜೂನ್.25:- ಸಾರ್ವಜನಿಕರು ತಮ್ಮ ಮೊಬೈಲ್ ಪೋನ್‍ಗಳು ಕಳೆದುಹೋದ ಅಥವಾ ಕಳ್ಳತನವಾದ್ದಲ್ಲಿ ಅನ್‍ಲೈನ್ ಮೂಲಕವೇ ಕೆಎಸ್‍ಪಿ ವೆಬ್‍ಸೈಟ್‍ನಲ್ಲಿ ಹೋಗಿ e-Lost Reports Karnataka State Policeನಲ್ಲಿ ಕಳ್ಳತನವಾದ, ಕಳೆದುಕೊಂಡ ಮೊಬೈಲ್ ಪೋನ್ ವಿವರವನ್ನು ದಾಖಲಿಸಬೇಕು.
ನಂತರ ಕಳೆದುಹೋದ ವಸ್ತು, ದಾಖಲೆಯ ವರದಿ ಕ್ರಮ ಸಂಖ್ಯೆ ಬರುತ್ತದೆ. ನಂತರ CEIR ಪೋರ್ಟಲ್‍ನಲ್ಲಿ ಹೋಗಿ ತಮ್ಮ ಕಳೆದು ಹೋದ ಮೊಬೈಲ್ ಪೋನ್ ವಿವರವನ್ನು ದಾಖಲಿಸಿ ಸದರಿ ದೂರಿನ ಪ್ರತಿಯನ್ನು ತಮ್ಮ ಸಮೀಪದ ಪೆÇಲೀಸ್ ಠಾಣೆಯಲ್ಲಿ ನೀಡಬೇಕು. ನಂತರ ಅವರ ಮೊಬೈಲ್ ಫೋನ್‍ಗಳನ್ನು ನಾವು ಪತ್ತೆ ಹಚ್ಚಿ ವಾರಸುದಾರರಿಗೆ ಹಿಂತಿರುಗಿಸಲಾಗುವುದು ಎಂದು ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರದೀಪ ಗುಂಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.