|

ಕಲ್ಯಾಣ ಕರ್ನಾಟಕ ಭಾಗಕ್ಕೆ  200 ಕೆಪಿಎಸ್ ಶಾಲೆ

ಕಲಬುರಗಿ.09.ಜನವರಿ.26: ರಾಜ್ಯದ ಹಿಂದುಳಿದ ಭಾಗ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆ) KPS ನಿರ್ಮಾಣಕ್ಕೆ ಒತ್ತು ನೀಡಲಾಗಿದೆ.

ಸರ್ಕಾರದಿಂದ ೧೦೦, ಕೆಕೆಆರ್‌ಡಿಬಿಯಿಂದ ೨೦೦ ಸೇರಿ ೩೦೦ ಕೆಪಿಎಸ್ ಶಾಲೆ ಮಂಜೂರು ಮಾಡಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲೆಗಳ ನಿರ್ವಹಣೆ ನಡೆಯಲಿದ್ದು, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡುವ ಗುರಿ ಇದೆ.

ಈ ಭಾಗದಲ್ಲಿ ೧,೦೦೮ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಿದ್ದು, ೪೩ ಸಾವಿರಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ.

ಶಿಕ್ಷಕರ ತರಬೇತಿ, ೧೦ನೇ ತರಗತಿ ಪ್ರವೇಶ ಹಾಗೂ ಫಲಿತಾಂಶ ಸುಧಾರಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಪೋಷಕರು ಮಕ್ಕಳ ಭವಿಷ್ಯದ ಬಗ್ಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮೇಘಾ ಪಿಟಿಎಂ ಯೋಜನೆ ಜಾರಿ ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಶಾಲೆಗಳ ಮೂಲ ಸೌಕರ್ಯಗಳಿಗಾಗಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಅನುದಾನದಿಂದ ೯.೪೦ ಕೋಟಿ ನೀಡಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.

Similar Posts

Leave a Reply

Your email address will not be published. Required fields are marked *