11/06/2025 8:06 AM

Translate Language

Home » ಲೈವ್ ನ್ಯೂಸ್ » ಕಲಬುರಗಿ: ತಂದೆ ಅಗಲಿಕೆ ದುಃಖದಲ್ಲಿ SSLC ಪರೀಕ್ಷೆ ಬರೆದ ವಿದ್ಯಾಶ್ರೀಗೆ ಶೇ 95 ಅಂಕ.

ಕಲಬುರಗಿ: ತಂದೆ ಅಗಲಿಕೆ ದುಃಖದಲ್ಲಿ SSLC ಪರೀಕ್ಷೆ ಬರೆದ ವಿದ್ಯಾಶ್ರೀಗೆ ಶೇ 95 ಅಂಕ.

Facebook
X
WhatsApp
Telegram

ಕಲಬುರಗಿ.04.ಮೇ.25:- ವಿದ್ಯಾರ್ಥಿನಿ ವಿದ್ಯಾಶ್ರೀ ನಾಯಕ್ ತಂದೆ ಅಗಲಿಕೆ ದುಃಖದಲ್ಲಿ SSLC ಪರೀಕ್ಷೆ ಬರೆದ ವಿದ್ಯಾಶ್ರೀಗೆ ಶೇ 95 ಅಂಕ ಕಲಬುರಗಿ: ಪರೀಕ್ಷೆ ಮಧ್ಯೆಯೇ ತಂದೆಯ ಅಗಲಿಕೆಯ ದುಃಖವನ್ನು ಸಹಿಸಿಕೊಂಡು SSLC ಪರೀಕ್ಷೆ ಬರೆದ ನಗರದ ಎಸ್‌ಆರ್‌ಎನ್‌ ಮೆಹತಾ ಶಾಲೆಯ ವಿದ್ಯಾರ್ಥಿನಿ ವಿದ್ಯಾಶ್ರೀ ನಾಯಕ್ ಶೇ 95.36 ಅಂಕ ಗಳಿಸಿದ್ದಾಳೆ.

ನಗರದ ಬಂಬೂ ಬಜಾರ್ ಸಮೀಪದ ಗೋಕುಲ ನಗರದ ನಿವಾಸಿ ಪ್ರಕಾಶ್ ನಾಯಕ್ ಅವರು ಮಾರ್ಚ್ 26ರಂದು ಹೃದಯಾಘಾತದಿಂದ ನಿಧನರಾಗಿದ್ದರು.

ಅದೇ ದಿನ ಪ್ರಕಾಶ್ ಅವರ ಮಗಳು ವಿದ್ಯಾಶ್ರೀಯ ಕನ್ನಡ ಭಾಷಾ ಪರೀಕ್ಷೆ ಇತ್ತು. ತಂದೆಯ ಸಾವಿನ ಸುದ್ದಿಯ ಮಧ್ಯೆಯೇ ಪರೀಕ್ಷೆ ಬರೆದು ವಾಪಸಾದ ವಿದ್ಯಾಶ್ರೀ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಳು. ನಂತರದ ಮೂರು ಪರೀಕ್ಷೆಗಳನ್ನು ಬರೆಯುತ್ತಾಳೋ ಇಲ್ಲವೋ ಎಂಬ ಆತಂಕದಲ್ಲಿಯೇ ವಿದ್ಯಾರ್ಥಿನಿಯ ತಾಯಿ ಸಂಗೀತಾ ನಾಯಕ್, ಚಿಕ್ಕಪ್ಪ ಸುನಿಲ್ ನಾಯಕ್ ಅವರು ಪರೀಕ್ಷೆ ಬರೆಯುತ್ತೀಯಾ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿದ ವಿದ್ಯಾಶ್ರೀ ಉಳಿದ ಮೂರು ಪರೀಕ್ಷೆಗಳನ್ನೂ ಬರೆದಿದ್ದಾಳೆ.

ಶುಕ್ರವಾರ ಪ್ರಕಟವಾದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಶೇ 95.36 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ‘ನನ್ನ ಅಣ್ಣ ಪ್ರಕಾಶ್ ನಾಯಕ್ ಇಟ್ಟಿಗೆ ಭಟ್ಟಿ ಉದ್ಯಮ ನಡೆಸುತ್ತಿದ್ದರು. ಅತ್ತಿಗೆ ಸಂಗೀತಾ ಅವರು ಗೃಹಿಣಿಯಾಗಿದ್ದಾರೆ.

ಒಟ್ಟು ನಾಲ್ವರು ಮಕ್ಕಳ ಪೈಕಿ ವಿದ್ಯಾಶ್ರೀ ಎರಡನೆಯವಳು. ತಂದೆಯ ಅಗಲಿಕೆಯ ದುಃಖವನ್ನು ಸಹಿಸಿಕೊಂಡೂ ಪರೀಕ್ಷೆ ಬರೆದಿದ್ದು ನಮಗೆ ಅಚ್ಚರಿ ಎನಿಸಿತ್ತು. ಛಲ ಬಿಡದೇ ಪರೀಕ್ಷೆ ಬರೆದು ಉತ್ತಮ ಸಾಧನೆ ಮಾಡಿದ್ದಾಳೆ’ ಎಂದು ವಿದ್ಯಾರ್ಥಿನಿಯ ಚಿಕ್ಕಪ್ಪ ಸಂತೋಷ ನಾಯಕ ಪ್ರಜಾಪ್ರಭಾತ ಕನ್ನಡ ಸುದ್ದಿ 24X7 ಗೆ ಮಾಹಿತಿ ನೀಡಿದರು. ಸುನೀಲ್ ಅವರ ಪುತ್ರಿ ವಾಣಿಶ್ರೀ ನಾಯಕ್ ಸಹ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 81ರಷ್ಟು ಅಂಕ ಪಡೆದಿದ್ದಾಳೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!