Home » ಲೈವ್ ನ್ಯೂಸ್ » ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪ್ರವೇಶ ಪ್ರಾರಂಭ.

ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಪ್ರವೇಶ ಪ್ರಾರಂಭ.

Facebook
X
WhatsApp
Telegram

ರಾಯಚೂರು.25.ಡಿಸೆಂಬರ್.25: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2026-27 ಸಾಲಿಗಾಗಿ ಸ್ನಾತಕೋತ್ತರ ಕೋರ್ಸಗಳಿಗೆ ಪ್ರವೇಶಾತಿ ಆರಂಭವಾಗಿದೆ. ವಿಶ್ವವಿದ್ಯಾಲಯದಿಂದ ಪ್ರಸ್ತುತ ಪಿಜಿ ಕೋಸ್ðಗಳಿಗೆ ಸಿಯುಇಟಿ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದ್ದು, ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಮಟ್ಟದಲ್ಲಿ ಪ್ರವೇಶ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಬೇಕೆಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆರ್ಥಶಾಸ್ತç ವಿಭಾಗದ ಪ್ರಾಧ್ಯಾಪಕರಾದ ಡಾ.ಬಸವರಾಜ ಸೋಮನಮರಡಿ ಅವರು ಹೇಳಿದರು.
ರಾಯಚೂರಿನ ಪತ್ರಿಕಾ ಭವನದಲ್ಲಿ ಡಿಸೆಂಬರ್ 24ರಂದು ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಬಿಎಡ್ ಕೋರ್ಸ ಒಳಗೊಂಡoತೆ ಸ್ನಾತಕೋತ್ತರ ಕೋರ್ಸ್ಗಳಾದ ಎಂ.ಎ ಇಂಗ್ಲಿಷ್, ಹಿಂದಿ, ಕನ್ನಡ, ಭಾಷಾಶಾಸ್ತç, ಜಾನಪದ ಮತ್ತು ಬುಡಕಟ್ಟು ಅಧ್ಯಯನ, ಅರ್ಥಶಾಸ್ತç, ಇತಿಹಾಸ, ಸಾರ್ವಜನಿಕ ಆಡಳಿತ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನಕ್ಕೆ 30 ಸೀಟು, ಎಂ.ಎಸ್ಸಿ. ಗಣಿತ, ಭೌತಶಾಸ್ತç, ರಸಾಯನ ಶಾಸ್ತç, ಭೂಗೋಳ, ಭೂ ವಿಜ್ಞಾನ, ಸಸ್ಯಶಾಸ್ತç, ಪ್ರಾಣಿಶಾಸ್ತç ಮತ್ತು ಅಂಕಿಅoಶಗಳು ಮತ್ತು ದತ್ತಾಂಶ ವಿಶ್ಲೇಷಣೆ 30 ಸೀಟು, ಎಂ.ಎಸ್ಸಿ. ಮನೋವಿಜ್ಞಾನ 40 ಸೀಟು, ಜೆನೆಟಿಕ್ಸ್ ಮತ್ತು ಜೀನೋಮಿಕ್ 20 ಸೀಟು, ಎಂ.ಕಾo (ಬ್ಯಾಂಕಿoಗ್ ಮತ್ತು ಹಣಕಾಸು ತಂತ್ರಜ್ಞಾನ) 30 ಸೀಟು, ಎಂ.ಕಾo 30 ಸೀಟು, ಎಂ.ಬಿ.ಎ 60 ಸೀಟು, ಎಂ.ಬಿ.ಎ ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆಯಲ್ಲಿ 30 ಸೀಟು, ಸಮಾಜ ಕಾರ್ಯ 30 ಸೀಟು, ಎಂ.ಸಿ.ಎ 60 ಸೀಟು, ಎಲ್.ಎಲ್.ಎಂ 30 ಸೀಟು, ಬಿ.ಎಡ್ 50 ಸೀಟು, ಎಂ.ಎಡ್ 50 ಸೀಟು, ಎಂ.ಟೆಕ್ ಪವರ್ ಅಂಡ್ ಎನರ್ಜಿ ಇಂಜಿನಿಯರಿoಗ್ 18 ಸೀಟು, ಎಂ.ಟೆಕ್ ಅರ್‌ಎಫ್& ಮೈಕ್ರೋವೇವ್ ಇಂಜಿನಿಯರಿAಗ್ 18 ಸೀಟು, ಎಂ.ಟೆಕ್ ಎಐ ಮತ್ತು ಎಂಎಲ್ 24 ಸೀಟು, ಎಂಪಿಎ ಹಿಂಸ್ತುಸ್ಥಾನಿ ಗಾಯನ 10 ಸೀಟು, ಎಂಪಿಎ ಇನ್‌ಸ್ಟುçಮೆಂಟಲ್ (ಹಿಂಸ್ತುಸ್ಥಾನಿ ತಬಲಾ) 10 ಸೀಟು, ಮಾಸ್ಟರ್ ಆಫ್ ವಿಸುವಲ್ ಆರ್ಟ್ಸ (ಪೆಂಟಿoಗ್) 10 ಸೀಟುಗಳನ್ನು ಸಿಯುಇಟಿ ಪರೀಕ್ಷೆಯ ಮೂಲಕ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ ಎಂದರು.


ಅರ್ಹ ಅಭ್ಯರ್ಥಿಗಳಿಂದ ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ 2025ರ ಡಿಸೆಂಬರ 14ರಿಂದ ಪ್ರಾರಂಭವಾಗಿದೆ. ಸ್ನಾತಕ (ಯುಜಿ) ಅಂತಿಮ ಸೆಮೆಸ್ಟರನಲ್ಲಿ ಓದುತ್ತಿರುವ ಮತ್ತು ಈಗಾಗಲೇ ಉತ್ತೀರ್ಣರಾಗಿರುವ ಆಸಕ್ತ ಅರ್ಹವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅರ್ಜಿಗಳನ್ನು ಆನ್‌ಲೈನ್ ವೆಬ್‌ಸೈಟ್ ವಿಳಾಸ: https://exams.nta.nic.in/cuet-pg/ ನಲ್ಲಿ 2026ರ ಜನವರಿ 14 ರಾತ್ರಿ 11.50ರೊಳಗಾಗಿ ಸಲ್ಲಿಸಬಹುದಾಗಿದೆ ಎಂದರು.


ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯ ಒದಗಿಸುವ ಕೋರ್ಸ್ಗಳ ವಿವರ ಮತ್ತು ಅವುಗಳ ಅರ್ಹತೆಯ ವಿವರ ವಿಶ್ವವಿದ್ಯಾಲಯದ ವೆಬ್‌ಸೈಟ್ ವಿಳಾಸ: https://cuk.ac.in ನಲ್ಲಿ ಮತ್ತು https://nta.ac.in/https://exams.nta.nic.in/cuet-pg/ ನಲ್ಲಿ ಲಭ್ಯವಿದೆ. ಭಾಷಾ ಪ್ರಶ್ನೆ ಪತ್ರಿಕೆಗಳು ಹೊರತು ಪಡಿಸಿ ಉಳಿದ ಎಲ್ಲಾ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರಲಿವೆ ಎಂದರು.


ಪರೀಕ್ಷೆಗಳು, ಪರೀಕ್ಷೆ ವಿಧಾನ, ವೇಳಾ ಪಟ್ಟಿ, ಅರ್ಹತೆ ಮತ್ತು ಇತರ ಮಾಹಿತಿಗಾಗಿ ಅಭ್ಯರ್ಥಿಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸಿಯುಇಟಿ (ಪಿಜಿ)-2026ರ ಮಾಹಿತಿ ಬುಲೆಟಿನ್ ಪರಿಶೀಲಿಸಿಕೊಳ್ಳಬಹುದಾಗಿದೆ. ಎನ್‌ಟಿಎ ಫಲಿತಾಂಶಗಳನ್ನು ಪ್ರಕಟಿಸಿದ ನಂತರ ಪ್ರವೇಶಕ್ಕಾಗಿ ನೋಂದಾಯಿಸಲು ವಿಶ್ವವಿದ್ಯಾಲಯದಿಂದ ಅಭ್ಯರ್ಥಿಗಳಿಗೆ ಕರೆ ನೀಡಲಾಗುತ್ತದೆ ಎಂದರು.


ವಿದ್ಯಾರ್ಥಿಗಳು ಅರ್ಜಿಯ ವಿವರಗಳನ್ನು ಸಿಯುಕೆ ವೆಬ್‌ಸೈಟ್ ವಿಳಾಸ: https://cuk.ac.in  ನಲ್ಲಿ ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ 011 -40759000, 011-69227700 ಅನ್ನು ಸಂಪರ್ಕಿಸಬಹುದು. ಅಥವಾ helpdesk-cuetpg@nta.ac.in  ನಲ್ಲಿ ಇ-ಮೇಲ್ ಮಾಡಬಹುದು. ಜೊತೆಗೆ ಅಭ್ಯರ್ಥಿಗಳು ಪರೀಕ್ಷೆಗೆ ಸಂಬAಧಿಸಿದ ಇತ್ತೀಚಿನ ನವೀಕರಣಗಳಿಗಾಗಿ ಎನ್‌ಟಿಎ ವೆಬ್‌ಸೈಟ್(ಗಳು)  www.nta.ac.in ಮತ್ತು  https://exams.nta.nic.in/cuet-pg/ ನೋಂದಿಗೆ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology