04/08/2025 8:35 AM

Translate Language

Home » ಲೈವ್ ನ್ಯೂಸ್ » ಕರ್ನಾಟಕ ಹಾಜರಾತಿ ನಿರ್ವಹಣ ವ್ಯವಸ್ಥೆ ವಿನೂತನ ತಂತ್ರಾಂಶವನ್ನು ಮೊಬೈಲ್ ಆಧಾರಿತ ಅಪ್ಲಿಕೇಶನ್.!

ಕರ್ನಾಟಕ ಹಾಜರಾತಿ ನಿರ್ವಹಣ ವ್ಯವಸ್ಥೆ  ವಿನೂತನ ತಂತ್ರಾಂಶವನ್ನು ಮೊಬೈಲ್ ಆಧಾರಿತ ಅಪ್ಲಿಕೇಶನ್.!

Facebook
X
WhatsApp
Telegram

ಬೆಂಗಳೂರು.16.ಜುಲೈ.25:- ರಾಜ್ಯಾದ್ಯಂತ ಸರ್ಕಾರಿ ಶಾಲಾ ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಆನ್ಲೈನ್ ಹಾಜರಾತಿಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಶಾಲಾ ಶಿಕ್ಷಣ ಇಲಾಖೆ ಸಿಬ್ಬಂದಿಗೂ ಆನ್ಲೈನ್ ಹಾಜರಾತಿಗೆ ಆದೇಶ ಹೊರಡಿಸಿದೆ. ಈ ಸಂಬಂಧ ಕೂಡಲೇ ಆಧಾರ್ ಸಂಖ್ಯೆ ಅಪ್ಡೇಟ್ ಮಾಡಬೇಕು, ಇಲ್ಲವಾದಲ್ಲಿ ಮುಂದಿನ ತಿಂಗಳ ವೇತನ ಪಾವತಿ ಮಾಡುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ.

ಕರ್ನಾಟಕ ಸರ್ಕಾರದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಹಾಜರಾತಿ ನಿರ್ವಹಣೆ ವ್ಯವಸ್ಥೆಯಲ್ಲಿ ಅನುಸರಿಸುತ್ತಿರುವ ರಿಜಿಸ್ಟರ್ ಆಧಾರಿತ ದಾಖಲಾತಿ ಮತ್ತು ಹಸ್ತಚಾಲಿತ ಸಹಿಗಳನ್ನೊಳಗೊಂಡ ಹಾಜರಾತಿಯನ್ನು ಸೆರೆಹಿಡಿಯುವ ಸಾಂಪ್ರದಾಯಿಕ ವಿಧಾನಗಳ ದೃಢಿಕರಣದ ಕುರಿತು ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಜರಾತಿ ನಿರ್ವಹಣ ವ್ಯವಸ್ಥೆ ಎಂಬ ವಿನೂತನ ತಂತ್ರಾಂಶವನ್ನು (ಮೊಬೈಲ್ ಆಧಾರಿತ ಅಪ್ಲಿಕೇಶನ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಯ ಇ-ಆಡಳಿತ ಕೇಂದ್ರವು ಅಭಿವೃದ್ಧಿಪಡಿಸಿರುತ್ತಾರೆ ಹಾಗೂ ಸದರಿ ತಂತ್ರಾಂಶವು ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ face recognistion ಮತ್ತು geographical information system (GIS) ಆಧಾರಿತ ಆಧುನಿಕ ತಂತ್ರಜ್ಞಾನಗಳೊಂದಿಗೆ ಸರಳೀಕರಿಸಲಾಗಿರುತ್ತದೆ.

ಆಡಳಿತ ಕೇಂದ್ರವು ಅಭಿವೃದ್ಧಿಪಡಿಸಿರುವ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAMS) ಅನ್ನು ವಿಸ್ತರಿಸಲು ನೌಕರರ ಆಧಾರ್ ಮಾಹಿತಿಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಎಲ್ಲಾ ಡಿಡಿಓಗಳಿಗೆ ತಮ್ಮ ನೌಕರರ ಆಧಾರ್ ಮಾಹಿತಿಗಳು ಸೀಡ್ ಆಗಿರುವುದನ್ನು ಪರಿಶೀಲಿಸಿಕೊಳ್ಳಲು ដ ( SERVICE REGISTER-→ EMP AADHAR UPDATED AND NOT UPDATED DETAILS) ಈ SCREENನಲ್ಲಿ ಎಲ್ಲಾ ನೌಕರರ ಮಾಹಿತಿಗಳನ್ನು ಪರಿಶೀಲಿಸಿಕೊಳ್ಳಬೇಕು. ನೌಕರರ SERVICE REGISTER –→ FAMILY DEPENDENT ENTRY FORM KASS ಈ OPTIONನಲ್ಲಿ ನೌಕರರ ಆಧಾರ್ ನಂಬರ್ಗಳನ್ನು ಕಡ್ಡಾಯವಾಗಿ ನಮೂದಿಸಬೇಕು.

ಆಧಾರ್ ನಂಬರ್ ನಮೂದಿಸದ ಅಧಿಕಾರಿ/ನೌಕರರ ಮುಂದಿನ ತಿಂಗಳ ವೇತನ ಜನರೇಟ್ ಆಗುವುದಿಲ್ಲ, ಎಲ್ಲಾ ಡಿಡಿಓಗಳು ಈ ಬಗ್ಗೆ ತುರ್ತಾಗಿ ಕ್ರಮವಹಿಸಿ ತಮ್ಮ ಕಛೇರಿಯ ಎಲ್ಲಾ ಅಧಿಕಾರಿ/ನೌಕರರ ಆಧಾರ್ ಮಾಹಿತಿಗಳನ್ನು ಕಡ್ಡಾಯವಾಗಿ ತಮ್ಮ ಲಾಗಿನ್ ಗಳಲ್ಲಿಯೇ ನಮೂದಿಸಿಕೊಳ್ಳಲು ತಿಳಿಸಿದೆ.

WhatsApp Group Link

https://chat.whatsapp.com/HqjmC1n4Cu1HtOmXec7ccF

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!