ಕಲಬುರಗಿ.19.ಏಪ್ರಿಲ್.25:- ರಾಜ್ಯದಲ್ಲಿ ಆಡಳಿತ ಕಾಂಗ್ರೇಸ್ ಪಕ್ಷ ಮತ್ತು ಭಾರತೀಯ ಜನತಾ ಪಾರ್ಟಿ ಮುಖಂಡರಾದ್ ಶ್ರೀರಾಮುಲು ಅವರು ಕರ್ನಾಟಕ ಸರ್ಕಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರೇ ಬೀಳಿಸುತ್ತಾರೆ ಎಂದು ಬಿ ಶ್ರೀರಾಮುಲು ಹೇಳಿದ್ದಾರೆ.
ಈ ಬಾರಿ ಆರ್ಸಿಬಿ ಕಪ್ ಗೆಲ್ಲುವ ನಿರೀಕ್ಷೆ ಇದೆ: ಅನಿಲ್ ಕುಂಬ್ಳೆ ಮಹತ್ವದ ಹೇಳಿಕೆ..!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ತಮ್ಮ ಮಗನನ್ನ ಸಿಎಂ ಮಾಡಲು ಮಲ್ಲಿಕಾರ್ಜುನ ಖರ್ಗೆಯವರೇ ಈ ಸರ್ಕಾರ ಬಿಳಿಸುತ್ತಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಈಗಾಗಲೇ ಸಿಎಂ ಗಾದಿಗೆ ಫೈಟ್ ಮಾಡುತ್ತಿದ್ದಾರೆ. ಇದರ ನಡುವೆಯೇ ಮೂರನೇ ವ್ಯಕ್ತಿ ಪ್ರವೇಶ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ತಮ್ಮ ಮಗನನ್ನು ಸಿಎಂ ಮಾಡಲು ಅವರೇ ಸರ್ಕಾರವನ್ನ ಬೀಳಿಸುತ್ತಾರೆ ಎಂದಿದ್ದಾರೆ.
ಮೊನ್ನೆ ಖರ್ಗೆ ಅವರು ಸರ್ಕಾರ ಬೀಳುವ ಬಗ್ಗೆ ಮಾತನಾಡಿದ್ದಾರೆ. ಮೋದಿಯವರು ಈ ಸರ್ಕಾರ ಬಿಳಿಸುತ್ತಾರೆ ಎಂದು ಹೇಳಿದ್ದಾರೆ. ಮೋದಿಯವರಿಗೆ ಏನು ಕರ್ಮ ಈ ಸರ್ಕಾರ ಬಿಳಿಸೋಕೆ. ಇಬ್ಬರ ಕಾದಾಟದಲ್ಲಿ ತಮ್ಮ ಮಗನನ್ನ ಸಿಎಂ ಮಾಡಲು ಖರ್ಗೆಯವರೇ ಪ್ಲ್ಯಾನ್ ಮಾಡಿದ್ದಾರೆ ಎಂದು ಗುಡುಗಿದರು.
ತಂದೆ, ಮಕ್ಕಳು ಸೇರಿ ರಿಪಬ್ಲಿಕ್ ಆಫ್ ಕಲಬುರಗಿಯನ್ನಾಗಿ ಮಾಡಿದ್ದಾರೆ. ನಮ್ಮ ರಾಜ್ಯಾಧ್ಯಕ್ಷರು ಅಲ್ಲಿಗೆ ಭೇಟಿ ಕೊಟ್ಟರೇ ಅವರ ಕಾರ್ಯಕರ್ತರು ದಬ್ಬಾಳಿಕೆ ಮಾಡುತ್ತಾರೆ. ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ. ನಿನ್ನೆ ಜಾತಿಗಣತಿ ಬಗ್ಗೆ ನಿರ್ಧಾರ ಮಾಡುವುದಿಲ್ಲ ಎಂದು ಗೊತ್ತಿತ್ತು. ಹೀಗಾಗಿ ಪಲಾಯನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.