05/07/2025 10:54 PM

Translate Language

Home » ಲೈವ್ ನ್ಯೂಸ್ » ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ: ರೈತರಿಗೆ ಸೂಚನೆ

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ: ರೈತರಿಗೆ ಸೂಚನೆ

Facebook
X
WhatsApp
Telegram

ಕೊಪ್ಪಳ.05.ಜುಲೈ .25:- 2025-26ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿದ್ದು, ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರ ಬೆಳೆವಿಮೆ ನೋಂದಾಯಿಸಿಕೊಳ್ಳುವoತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.


ನೀರಾವರಿ ಹತ್ತಿ ಮತ್ತು ಮಳೆಯಾಶ್ರಿತ ಹೆಸರು ಬೆಳೆಗಳಿಗೆ ನೋಂದಾಯಿಸಲು ಜುಲೈ 15 ಹಾಗೂ ಇತರೆ ಅಧಿಸೂಚಿತ ಎಲ್ಲಾ ಬೆಳೆಗಳಿಗೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿರುತ್ತದೆ. ರೈತರು ಬೆಳೆವಿಮೆ ನೋಂದಾಯಿಸಿ ಬೆಳೆವಿಮೆ ಪರಿಹಾರ ಲಾಭ ಪಡೆಯಬೇಕು. ರೈತರು ಕಡ್ಡಾಯವಾಗಿ ಎಫ್‌ಐಡಿ ಯನ್ನು ಹೊಂದಿರಬೇಕು. ರೈತರು ಬಿತ್ತನೆ ಮಾಡುವ ಬೆಳೆಯನ್ನೇ ನೋಂದಾಯಿಸಬೇಕು ಮತ್ತು ತಮ್ಮ ಬೆಳೆಯನ್ನು ತಾವೇ ಖುದ್ದಾಗಿ ಬೆಳೆ ಸಮೀಕ್ಷೆಯನ್ನು ಮಾಡಬೇಕು. ರೈತರು ತಮ್ಮ ದಾಖಲಾತಿಗಳಾದ ಪಹಣಿ, ಆಧಾರ್‌ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜರಾಕ್ಸ್ ಅನ್ನು ಇನ್ನೊಬ್ಬರಿಗೆ ಯಾವುದೇ ಕಾರಣಕ್ಕೂ ನೀಡಬಾರದು. ತಾವೇ ಖುದ್ದಾಗಿ ಬೆಳೆವಿಮೆ ನೋಂದಾಯಿಸಬೇಕು.

ಒಂದು ವೇಳೆ ಬೇರೆ ರೈತರ ದಾಖಲಾತಿಗಳನ್ನು ಉಪಯೋಗಿಸಿಕೊಂಡು ಬೆಳೆವಿಮೆ ವಿಮೆ ನೋಂದಾಯಿಸಿದ್ದು ಕಂಡು ಬಂದರೆ ಅಂತವರ ವಿವರಗಳನ್ನು ಕೂಡಲೇ ಕೃಷಿ ಇಲಾಖೆಗೆ ತಿಳಿಸಲು ಸೂಚಿಸಿದೆ.


ಅಧಿಸೂಚಿತ ಬೆಳೆಗಳ ವಿವರ:

ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳಲ್ಲಿ ಕೊಪ್ಪಳ ತಾಲ್ಲೂಕಿನ ಅಳವಂಡಿ, ಕವಲೂರು, ಬಿಸರಳ್ಳಿ, ಬೆಟಗೇರಿ, ಬೋಚನಹಳ್ಳಿ, ಹಟ್ಟಿ, ಹಲಗೇರಿ, ಕೋಳೂರು, ಇಂದರಗಿ, ಇರಕಲ್ಲಗಡ, ಕಲ್-ತಾವರಗೇರಾ, ಕಿನ್ನಾಳ, ಚಿಕ್ಕಬೊಮ್ಮನಾಳ, ಬೂದಗುಂಪ ವಣಬಳ್ಳಾರಿ, ಹಾಸಗಲ್, ಕಲಕೇರಾ, ಲೇಬಗೇರಿ, ಕೊಪ್ಪಳ (ಯುಎಲ್‌ಬಿ), ಓಜನಹಳ್ಳಿ, ಕುಣಿಕೇರಿ, ಗಿಣಗೇರಾ, ಬಹದ್ದೂರಬಂಡಿ, ಗುಳ್ಳದಳ್ಳಿ, ಹಾಲವರ್ತಿ, ಹಿರೇಬಗನಾಳ, ಹೊಸಳ್ಳಿ ಗ್ರಾಮಗಳ ಮಳೆಯಾಶ್ರಿತ ಮುಸುಕಿನ ಜೋಳ ಹಾಗೂ ಮಳೆಯಾಶ್ರಿತ ಸಜ್ಜೆ ಬೆಳೆಗಳು, ಹಿರೇಸಿಂದೋಗಿ, ಮಾದನೂರ, ಮತ್ತೂರು, ಗೊಂಡಬಾಳ, ಕಾತರಕಿ-ಗುಡ್ಲಾನೂರು, ಅಗಳಕೇರ, ಬೇವಿನಹಳ್ಳಿ, ಬಂಡಿಹರ್ಲಾಪುರ ಗ್ರಾಮಗಳ ಮಳೆಯಾಶ್ರಿತ ಮುಸುಕಿನ ಜೋಳ ಬೆಳೆ ಮತ್ತು ಮುನಿರಾಬಾದ್ ಡ್ಯಾಂ ಮತ್ತು ಶಿವಪುರ ಗ್ರಾಮಗಳ ಮಳೆಯಾಶ್ರಿತ ಸಜ್ಜೆ ಬೆಳೆಗೆ ವಿಮೆ ನೋಂದಾಯಿಸಬಹುದು.


ಹೋಬಳಿ ಮಟ್ಟದಲ್ಲಿ ಅಳವಂಡಿ ಹೋಬಳಿಯ ಅಧಿಸೂಚಿತ ನೀರಾವರಿ ಬೆಳೆಗಳಾದ ಈರುಳ್ಳಿ, ಮುಸಕಿನ ಜೋಳ, ಸಜ್ಜೆ, ಮಳೆಯಾಶ್ರಿತ ಬೆಳೆಗಳಾದ ಎಳ್ಳು, ಜೋಳ, ಟೊಮ್ಯಾಟೋ, ತೊಗರಿ, ನವಣೆ, ಹುರಳಿ, ಹೆಸರು, ಮಳೆಯಾಶ್ರಿತ ಹಾಗೂ ನೀರಾವರಿ ಬೆಳೆಗಳಾದ ನೆಲಗಡಲೆ(ಶೇಂಗಾ), ಸೂರ್ಯಕಾಂತಿ, ಹತ್ತಿ ಬೆಳೆಗಳನ್ನು ವಿಮೆಗೆ ನೋಂದಾಯಿಸಬಹುದು.


ಇರಕಲ್‌ಗಡಾ ಹೋಬಳಿಯ ಅಧಿಸೂಚಿತ ಮಳೆಯಾಶ್ರಿತ ಬೆಳೆಗಳಾದ ಅಲಸಂದಿ, ಎಳ್ಳು, ನವಣೆ, ಹುರುಳಿ, ಹೆಸರು, ನೀರಾವರಿ ಬೆಳೆಗಳಾದ ಈರುಳ್ಳಿ, ಮುಸಕಿನ ಜೋಳ, ಸಜ್ಜೆ, ಸೂರ್ಯಕಾಂತಿ, ಹತ್ತಿ, ನೀರಾವರಿ ಮತ್ತು ಮಳೆಯಾಶ್ರಿತ ಬೆಳೆಗಳಾದ ಜೋಳ, ತೊಗರಿ, ನೆಲಗಡಲೆ, ಭತ್ತ, ಟೊಮ್ಯಾಟೋ ಬೆಳೆಗಳನ್ನು ವಿಮೆಗೆ ನೋಂದಾಯಿಸಬಹುದು.


ಕೊಪ್ಪಳ ಹೋಬಳಿಯ ಅಧಿಸೂಚಿತ ನೀರಾವರಿ ಬೆಳೆಗಳಾದ ಈರುಳ್ಳಿ, ಭತ್ತ, ಮುಸಕಿನ ಜೋಳ, ಮಳೆಯಾಶ್ರಿತ ಬೆಳೆಗಳಾದ ಎಳ್ಳು, ಜೋಳ, ತೊಗರಿ, ನವಣೆ, ಹುರುಳಿ, ಹೆಸರು ಹಾಗೂ ಮಳೆಯಾಶ್ರಿತ ಮತ್ತು ನೀರಾವರಿ ಬೆಳೆಗಳಾದ ನೆಲಗಡಲೆ, ಸೂರ್ಯಕಾಂತಿ, ಹತ್ತಿ ಬೆಳೆಗಳನ್ನು ವಿಮೆಗೆ ನೋಂದಾಯಿಸಬಹುದು.


ಹಿಟ್ನಾಳ ಹೋಬಳಿಯ ಅಧಿಸೂಚಿತ ಮಳೆಯಾಶ್ರಿತ ಬೆಳೆಗಳಾದ ಎಳ್ಳು, ನವಣೆ, ಸೂರ್ಯಕಾಂತಿ, ಹುರುಳಿ, ನೀರಾವರಿ ಬೆಳೆಗಳಾದ ಭತ್ತ, ಮುಸಕಿನ ಜೋಳ, ಸಜ್ಜೆ, ಹತ್ತಿ ಹಾಗೂ ಟೊಮ್ಯಾಟೋ ಬೆಳೆಗಳನ್ನು ವಿಮೆಗೆ ನೋಂದಾಯಿಸಬಹುದು.


ಪ್ರಸಕ್ತ ಸಾಲಿಗೆ  TATA AIG INSURANCE CO LTD    ವಿಮಾ ಕಂಪನಿ ಆಯ್ಕೆಯಾಗಿದ್ದು, ರೈತರು ಹೆಚ್ಚಿನ ಮಾಹಿತಿಗಾಗಿ ಇನ್ಸೂರನ್ಸ್ ಕಂಪನಿಯ ಪ್ರತಿನಿಧಿ ಅಥವಾ ಟೋಲ್‌ಫ್ರೀ ಸಂಖ್ಯೆ:18002093536 ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ/ಸಾಮಾನ್ಯ ಸೇವಾ ಕೇಂದ್ರ/ಗ್ರಾಮ್ ಒನ್/ ಸಂಬAಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!