ಬೀದರ.09.ಜುಲೈ.25:- ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನಲ್ಲಿ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ಅನುμÁ್ಠನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಿಗೆ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ: 10-07-2025 ರವರೆಗೆ ವಿಸ್ತರಿಸಲಾಗಿದೆ ಎಂದು ಬೀದರ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಜನೆಗಳ ವಿವರ: ಶ್ರೀ ಶಾಹಜೀ ರಾಜೇ ಸಮೃದ್ಧಿ ಯೋಜನೆ, ಜೀಜಾವು ಜಲಭಾಗ್ಯ ಯೋಜನೆ, ರಾಜಶ್ರೀ ಶಾಹುಮಹಾರಾಜ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ, ಮರಾಠಮಿಲ್ಟ್ರಿಹೋಟೆಲ್, ಸ್ವಯಂಉದ್ಯೋಗಸಾಲಯೋಜನೆಯ (ವಾಣಿಜ್ಯ ಬ್ಯಾಂಕಗಳ ಸಹಯೋಗದೊಂದಿಗೆ) ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ ಹಾಗೂ ಸ್ವಾತಂತ್ರ್ಯಯ ಅಮೃತ್ ಮೊಹೋತ್ಸವ ಮುನ್ನಡೆ ಯೋಜನೆ.
ಸಾಲ-ಸೌಲಭ್ಯವನ್ನು ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ. (ಶೈಕ್ಷಣಿಕ ಸಾಲ ಯೋಜನೆಗಳಿಗೆ ಕೊನೆ ದಿನಾಂಕ ಇರುವುದಿಲ್ಲ)
ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ: 8867537799/ ದೂ.ಸಂ:080-29903994, ವೆಬ್‍ಸೈಟ್ https://kmcdc.karnataka.gov.in ಅಥವಾ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ನಂ. 9-8-15/5ಬಿ, ಬಿವ್ಹಿಬಿ ಕಾಲೇಜ ರಸ್ತೆ, ಮೈಲೂರ ಕ್ರಾಸ್, ಬಸವನಗರ-585403 ದೂರವಾಣಿ ಸಂ:08482-223515 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.