11/08/2025 7:02 PM

Translate Language

Home » ಲೈವ್ ನ್ಯೂಸ್ » ಕರ್ನಾಟಕದ ಅತೀ ಚಿಕ್ಕ ತಾಲ್ಲೂಕು ಯಳಂದೂರಿನಲ್ಲಿ ಪ್ರಭಾರ ಅಧಿಕಾರಿಗಳೇ ಹೆಚ್ಚು.ಕೆಲಸಗಳು ವಿಳಂಬ.

ಕರ್ನಾಟಕದ ಅತೀ ಚಿಕ್ಕ ತಾಲ್ಲೂಕು ಯಳಂದೂರಿನಲ್ಲಿ ಪ್ರಭಾರ ಅಧಿಕಾರಿಗಳೇ ಹೆಚ್ಚು.ಕೆಲಸಗಳು ವಿಳಂಬ.

Facebook
X
WhatsApp
Telegram

ಯಳಂದೂರು: ಕರ್ನಾಟಕ ರಾಜ್ಯದಲ್ಲಿಯೇ ಅತೀ ಚಿಕ್ಕ ತಾಲ್ಲೂಕು ಎಂಬ ಹೆಸರುವಾಸಿಯಾಗಿರುವ ಯಳಂದೂರು ತಾಲ್ಲೂಕು ಅತೀ ಹಳೆಯ ತಾಲ್ಲೂಕು ಕೇಂದ್ರವು ಕೂಡವಾಗಿದೆ. ಚಾಮರಾಜನಗರ ಜಿಲ್ಲೆಯಾಗುವುದಕ್ಕಿಂತ ಮುಂಚೆಯೇ ಮೈಸೂರು ಜಿಲ್ಲೆಯಾಗಿದ್ದಾಗ ಯಳಂದೂರು ತಾಲ್ಲೂಕು ಕೇಂದ್ರವಾಗಿತ್ತು.  ಹಾಗೇಯೆ ಯಳಂದೂರು ವಿಧಾನಸಭಾ ಕ್ಷೇತ್ರ ಕೂಡವಾಗಿತ್ತು ಅವಾಗ ಮಾಜಿ ರಾಜ್ಯಪಾಲರಾದ ದಿವಂಗತ ಬಿ ರಾಚಯ್ಯನವರಿಗೆ ರಾಜಕೀಯ ಪ್ರವೇಶಕ್ಕೆ ವೇದಿಕೆಯಾದ ಕೇಂದ್ರವಾಗಿದೆ. ಆದರೆ ಇಂದು ಈ ತಾಲ್ಲೂಕಿನ ಕೇಂದ್ರ ಕಛೇರಿಗಳಲ್ಲಿ ಬಹುತೇಕ ಪ್ರಭಾರ ಅಧಿಕಾರಿಗಳಿರುವುದರಿಂದ ಸಾರ್ವಜನಿಕ ಕಾರ್ಯಗಳಿಗೆ ಅಡಚಣೆಯಾಗಿದೆ ಕೂಡಲೇ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೇ,ಸಂಸದರೇ ದಯವಿಟ್ಟು ಇತ್ತ ಗಮನಿಸಿ ಸಾರ್ವಜನಿಕ ಆಡಳಿತವನ್ನು ಚುರುಕುಗೊಳಿಸಬೇಕಾಗಿದೆ.

ತಹಶೀಲ್ದಾರ್ ಕಛೇರಿ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಉಪ ನೋಂದಣಿ ಕಛೇರಿ, ರೇಷ್ಮೆ ಇಲಾಖೆ, ಪಶು ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಟ್ಟಣ ಪಂಚಾಯತಿ ಹಾಗೂ ಇತರೆ ಇಲಾಖೆಗಳಲ್ಲಿರುವ ಮುಖ್ಯ ಅಧಿಕಾರಿಗಳು ಪ್ರಭಾರವಾಗಿದ್ದಾರೆ.

ಯಳಂದೂರು ತಾಲ್ಲೂಕು ಕೇಂದ್ರದೊಳಗೆ ಇರುವ ಬಹುತೇಕ ಇಲಾಖೆಗಳಲ್ಲಿ ಸುಮಾರು ವರುಷಗಳಿಂದ ಪ್ರಭಾರ ಅಧಿಕಾರಿಗಳೆ ಹೆಚ್ಚಾಗಿದ್ದಾರೆ.
ಇವಾಗ ಇರುವ ಪ್ರಭಾರ ತಹಶೀಲ್ದಾರ್  ಬಸವರಾಜ್ ರವರು ಚಾಮರಾಜನಗರ ದಿಂದ  ಕೊಳ್ಳೇಗಾಲ ತಾಲ್ಲೂಕಿಗೆ ತಹಶೀಲ್ದಾರ್ ರಾಗಿ  ವರ್ಗಾವಣೆಯಾಗಿದ್ದಾರೆ. ಅದರ ಜೊತೆಗೆ ಯಳಂದೂರು ತಾಲ್ಲೂಕಿಗೆ ಪ್ರಭಾರ ತಹಶೀಲ್ದಾರ್ ರಾಗಿ ಕಾರ್ಯನಿರ್ವಹಿಸುತ್ತಾರೆ.
ತಾಲ್ಲೂಕು ಕಛೇರಿಯ ಕಂದಾಯಕ್ಕೆ ಸಂಬಂಧಪಟ್ಟ ಕಾರ್ಯಗಳಿಗೆ ತಹಶೀಲ್ದಾರ್ ರವರ ಸಹಿ ಅವಶ್ಯಕವಾಗಿದೆ ಪ್ರಭಾರವಾಗಿರುವುದರಿಂದ ಹಾಗೂ ಹೆಚ್ಚುವರಿ ಅಧಿಕಾರವನ್ನು ನೀಡಿರುವುದರಿಂದ ಸಾರ್ವಜನಿಕ ಕೆಲಸಗಳು ವಿಳಂಬ ವಾಗುತ್ತದೆ.

ಯಳಂದೂರು ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ  ಹನೂರು ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ  ಉಮೇಶ್ ರವರು ಸುಮಾರು ವರ್ಷಗಳಿಂದ  ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಂಚಾಯತ್ ಹಾಗೂ ನರೇಗಕ್ಕೆ ಸಂಬಂಧಪಟ್ಟ ಕಾರ್ಯಗಳಿಗೆ ಕಾರ್ಯ ನಿರ್ವಾಹಕ ಅಧಿಕಾರಿಯ ಸಹಿ ಅಗತ್ಯವಾಗಿರುತ್ತದೆ  ಹನೂರು ಮತ್ತು ಯಳಂದೂರು ಎರಡು ಕಡೆ ನಿರ್ವಹಿಸುವುದರಿಂದ ಸಾರ್ವಜನಿಕ ಕೆಲಸಕ್ಕೆ ವಿಳಂಬವಾಗಿದೆ.

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಅಧಿಕಾರಿಯಾಗಿ ಕೇಶವಮೂರ್ತಿ ರವರು ಕಾರ್ಯನಿರ್ವಹಿಸುತ್ತಿದ್ದಾರೆ ಇವರ ಮೂಲ ಅಧಿಕಾರ ಕೊಳ್ಳೇಗಾಲ ತಾಲ್ಲೂಕು ಸಮಾಜ ಕಲ್ಯಾಣಧಿಕಾರಿಯಾಗಿರುತ್ತಾರೆ.
ಯಳಂದೂರಿಗೆ ಸಾಯಂಕಾಲ ಸಮಯದಲ್ಲಿ ಬಂದು ಕೂತಿದು ಮನೆಗೆ ಹೋಗುತ್ತಾರೆ.

ಉಪನೋಂದಣಿ ಅಧಿಕಾರಿ ಹುದ್ದೆಯಲ್ಲಿಯೂ ಪ್ರಭಾರ ಮಹಿಳಾ ಅಧಿಕಾರಿಯೊಬ್ಬರಿದ್ದಾರೆ.

ಯಳಂದೂರು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾಗಿ  ಸರಿತಾ ಕಾರ್ಯ ನಿರ್ವಹಿಸುವುದರ ಜೊತೆಗೆ  ವಿವಿಧ ತಾಲ್ಲೂಕಿಗೆ ಪ್ರಭಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಛೇರಿಗಳಲ್ಲಿ ಲಭ್ಯವಿರುವುದಿಲ್ಲ.

ಪಶು ಇಲಾಖೆಗೆ ಡಾ ಶಿವರಾಜ್ ರವರ ಮೂಲ ಕೆಸ್ತೂರು ಪಶು ವೈದ್ಯಾಧಿಕಾರಿ ಆದರೆ ತಾಲ್ಲೂಕಿನ ಪಶು ವೈದ್ಯಾಧಿಕಾರಿ ಹುದ್ದೆ ಖಾಲಿ ಇರುವುದರಿಂದ ಇಲ್ಲಿಗೆ ಅಧಿಕಾರಿಯಾಗಿರುತ್ತಾರೆ ಯಳಂದೂರು ಅಲ್ಲದೇ ಕೆಲವು ತಾಲ್ಲೂಕಿಗೂ ಕೂಡ ಪ್ರಭಾರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹೇಶ್ ರವರೆಗೆ ಹನೂರು ಪಟ್ಟಣ ಪಂಚಾಯತಿಯಲ್ಲಿ ಪ್ರಭಾರ  ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎರಡು ಕಡೆ ಕಾರ್ಯನಿರ್ವಹಿಸುವುದರಿಂದ ಅನೇಕ ಸಮಸ್ಯೆಗಳು ಉದ್ಬವಗೊಳ್ಳುತ್ತದೆ ಉದಾಹರಣೆಗೆ ಹನೂರಿನಲ್ಲಿ ಡಾ ಬಾಬು ಜಗಜೀವನ್ ರಾವ್ ರವರ ಜಯಂತಿಯನ್ನು ತಡವಾಗಿ ಮಾಡಿದರಿಂದ ಸಾರ್ವಜನಿಕರು ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಅಧಿಕಾರಿ ಯಳಂದೂರಿನಲ್ಲಿ ಜಯಂತಿ ಮುಗಿಸಿ ಹನೂರಿಗೆ ತೆರಳುವತನಕ ಗಲಾಟೆಯಾಗಿದೆ.

ಇನ್ನೇಷ್ಟು ಅಧಿಕಾರಿಗಳು ಮೀಟಿಂಗ್ ಅಂತ ಹೋಗಿರುತ್ತಾರೆ ಸಾರ್ವಜನಿಕರಿಗೆ ಅಧಿಕಾರಿಗಳೇ ಸಿಗುವುದಿಲ್ಲ.
ಕೂಡಲೇ ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು ಇದನ್ನು ಗಮನಿಸಿ ಸಾರ್ವಜನಿಕ ಆಡಳಿತವನ್ನು ಚುರುಕುಗೊಳಿಸಬೇಕೆಂದು ಸಾರ್ವಜನಿಕರು ತಿಳಿಸಿದರು.
ವರದಿ.ಪ್ರಸನ್ನಕುಮಾರ್ ಕೆಸ್ತೂರು

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD