ರಾಯಚೂರು.07.ಆಗಸ್ಟ್.25: ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ವಾರ್ಡ್ಗಳಲ್ಲಿ 2 ವರ್ಷಗಳ ಅವಧಿಗೆ ಸ್ವಚ್ಛ ಭಾರತ್ ಮಿಷನ್ 2.0ನ ಐಇಸಿ ಚಟುವಟಿಕೆ ಕೈಗೊಳ್ಳಲು ಡೇ-ನಲ್ಮ್ ಯೋಜನೆಯಡಿ ನೋಂದಾಯಿತ ಎಸ್‌ಹೆಚ್‌ಜಿ ಸದಸ್ಯರಿಂದ ಕಮ್ಯುನಿಟಿ ಮೊಬಿಲೈಜರ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಎಸ್‌ಹೆಚ್‌ಜಿ ಸದಸ್ಯರು ಸ್ವ-ಸಹಾಯ ಗುಂಪಿನ ಸದಸ್ಯರು ಆಗಿರಬೇಕು. (ಗುಂಪಿನ ಪಾಸ್ ಬುಕ್), ಆಧಾರ್ ಕಾರ್ಡ್, ಗುರುತಿನ ಚೀಟಿ, ರೇಷನ್ ಕಾರ್ಡ್ ಹೊಂದಿರಬೇಕು, ಹತ್ತನೇ ತರಗತಿಯಲ್ಲಿ ಪಾಸ್ ಆಗಿರಬೇಕು, ಡೇ-ನಲ್ಮ್ ಎಂ.ಐ.ಎಸ್ ಎಸ್‌ಹೆಚ್‌ಜಿ ನೋಂದಾಣಿಯಾಗಿರಬೇಕು, ಎಂಪನೇಲ್ ದಾಖಲೆಗಳೊಂದಿಗೆ ಆಗಸ್ಟ್ 14ರ ಸಂಜೆ 5.30ಗಂಟೆಯೊಳಗೆ ಪಾಲಿಕೆಯ ಜೋನಲ್-1 ನೇ ಮಹಡಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಗುಂಪುಗಳ ಅರ್ಹತೆ ಮೇರೆಗೆ ಆಯ್ಕೆಗೊಂಡಿರುವ ಗುಂಪುಗಳಿಗೆ ಜಿಲ್ಲಾ ಮಟ್ಟದಲ್ಲಿ ಸಂದರ್ಶನ ಮುಖಾಂತರ ಸ್ವ-ಸಹಾಯ ಸಂಘಗಳ ಪಟ್ಟಿಯನ್ನು ಆಂತಿಮಗೊಳಿಸಲಾಗುವುದು ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಪಾತ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.