|

ಕಂಪ್ಯೂಟರ ತರಬೇತಿಗಾಗಿ ಅರ್ಜಿ ಆಹ್ವಾನ

ಬೀದರ.27.ಅಗಸ್ಟ್.25:- ಪುರಸಭೆ ಭಾಲ್ಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಎಸ್.ಎಸ್.ಎಲ್.ಸಿ. ಪಾಸಾದ ವಿದ್ಯಾರ್ಥಿಗಳಿಗೆ ಬೇಸಿಕ್ ಕಂಪ್ಯೂಟರ್ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಭಾಲ್ಕಿ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಲ್ಲಿಸಬೇಕಾದ ದಾಖಲಾತಿಗಳು: ಎಸ್.ಎಸ್.ಎಲ್.ಸಿ. ಪಾಸಾದ ಅಂಕಪಟ್ಟಿ ಮತ್ತು ವರ್ಗಾವಣೆ ಪ್ರಮಾಣಪತ್ರದ ಧೃಢೀಕೃತ ಝರಾಕ್ಸ ಪ್ರತಿ, ಜಾತಿ ಆದಾಯ ಪ್ರಮಾಣಪತ್ರ ಝರಾಕ್ಸ ಪ್ರತಿ, ಇತ್ತೀಚೀನ ಪಾಸಪೋರ್ಟ್ ಸೈಜ್ ಉಳ್ಳ (03) ಭಾವಚಿತ್ರಗಳು, ಆಧಾರ ಕಾರ್ಡ ಝರಾಕ್ಸ ಪ್ರತಿ, ಪ್ರಸ್ತುತ ಚುನಾವಣೆ ಗುರುತಿನ ಚೀಟಿ ಝರಾಕ್ಸ ಪ್ರತಿ, ಪಡಿತರ ಚೀಟಿ ಝರಾಕ್ಸ ಪ್ರತಿ ಹಾಗೂ ಪ್ಯಾನ ಕಾರ್ಡ ಝರಾಕ್ಸ ಪ್ರತಿ
ಆಸಕ್ತ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಪುರಸಭೆ ಭಾಲ್ಕಿಯಲ್ಲಿ ಪಡೆದುಕೊಂಡು ತಮ್ಮ ಎಲ್ಲಾ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ: 10-09-2025 ರೊಳಗಾಗಿ ಭಾಲ್ಕಿ ಪುರಸಭೆಯ ಆವಕ-ಜಾವಕ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಭಾಲ್ಕಿ ಪುರಸಭೆಗೆ ಅಥವಾ ದೂರವಾಣಿ ಸಂಖ್ಯೆ: 08484-262230 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *