ಔರಾದ.26.ಏಪ್ರಿಲ25:- ಔರಾದ್ ತಾಲುಕಿನ ವಿವಿಧ ಗ್ರಾಮಗಳಲ್ಲಿ ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್ ಅವರು ಔರಾದ ಕ್ಷೇತ್ರದ ಠಾಣಾ ಕುಶನೂರು, ಚಿಂತಾಕಿ, ಬೆಲ್ದಾಳ ಯನಗುಂದಾ, ಖೇರ್ಡಾ, ಡೋಣಗಾಂವ್ ಎಂಪಿ, ರಾಂಪುರ, ಲಾದಾ, ಜಮಲಪುರ, ಏಕಂಬಾ, ರೈಪಳ್ಳಿ, ಚಿರ್ಕಿ ತಾಂಡಾ, ಚಿಕ್ಲಿ ಜೆ, ವಲ್ಲೇಪುರ, ತೆಗಾಂಪೂರ್ ಸೇರಿದಂತೆ ವಿವಿಧ ಗ್ರಾಮಗಳಿಗಿಂದು ಭೇಟಿ ನೀಡಿ, ಸುಮಾರು 24 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರೆ.
ಬಳಿಕ ಕಾಮಗಾರಿ ಅಂದಾಜು ಪಟ್ಟಿಯಲ್ಲಿ ಇರುವಂತೆ ಆಗಬೇಕು ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಕಾಮಗಾಗಿ ಮುಗಿಸಬೇಕು ಜೊತೆಗೆ ಡಾಂಬರೀಕರಣ, ಕ್ಯೂರಿಂಗ್ ಸರಿಯಾಗಿ ಆಗಬೇಕು.
ರಸ್ತೆಯ ಬಗ್ಗೆ ಜನರಿಂದ ಯಾವುದೇ ರೀತಿಯ ದೂರುಗಳು ಬಾರದ ಹಾಗೆ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು