ಔರಾದ (ಬಾ),11.ಜುಲೈ.25:- ಇಂದು ಪವಿತ್ರ ಗುರುಪೂರ್ಣಿಮಾ ದಿನದಂದು ಔರಾದ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಬೌದ್ಧ ಧರ್ಮಾನುಯಾಯಿಗಳ ಪಾವನ ಸಾನ್ನಿಧ್ಯದಲ್ಲಿ ವರ್ಷಾವಾಸ ಧಮ್ಮ ಕಾರ್ಯಕ್ರಮವನ್ನು ಭಾವಪೂರ್ಣವಾಗಿ ಉದ್ಘಾಟಿಸಲಾಯಿತು.
ಈ ಕಾರ್ಯಕ್ರಮವು ಮೂರು ತಿಂಗಳ ಕಾಲ ನಡೆಯಲಿದ್ದು, ಈ ಅವಧಿಯಲ್ಲಿ ಬುದ್ಧನ ಧರ್ಮದ ತಾತ್ವಿಕ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಪ್ರಭೋದನಾತ್ಮಕ ಉಪನ್ಯಾಸಗಳು, ಧಮ್ಮದೀಪ ಪ್ರಚಾರ, ಸಾಮಾಜಿಕ ಜಾಗೃತಿ ಚಟುವಟಿಕೆಗಳು ಕೈಗೊಳ್ಳಲಾಗುತ್ತದೆ.
ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಬೌದ್ಧ ಮಹಾಸಭೆಯ ಅಧ್ಯಕ್ಷರಾದ ಸೋಪಾನರಾವ್ ಡೊಂಗ್ರೆ ಅವರು ಧರ್ಮಚಕ್ರ ಪ್ರವರ್ತನದ ಮಹತ್ವವನ್ನು ವಿವರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ NSYF ರಾಜ್ಯ ಸಂಚಾಲಕರು ಶಿವಕುಮಾರ ಕಾಂಬಳೆ ಹಾಗೂ ಮೋಹನ್ ಕಾಂಬಳೆ, ರಾಹುಲ್ ಕಾಂಬಳೆ, ಲಕ್ಷ್ಮಣ್ ತುರೆ, ತುಳಸಿರಾಮ್ ಬೇಂದ್ರೆ, ಭೀಮರಾವ್ ಕಾಂಬಳೆ, ಧನರಾಜ್ ಸಿಂಧಿ, ಪ್ರಕಾಶ್ ಕಾಂಬಳೆ, ಗೋಪಾಲ್ ಕಾಂಬಳೆ, ಅನಿಲ್ ಕುಮಾರ್ ಸೂರ್ಯವಂಶಿ, ಸುನೀತಾ ಕರ್ಬಾಳೆ ಶಕುಂತಲಾ ಭೆಂಡೆ, ಆಶಾ ಕಾಂಬಳೆ, ಇಂದುಮತಿ ಸಾಧೂರೆ ಮುಂತಾದವರು ಉಪಸ್ಥಿತಿ ಇದ್ದರು
