01/08/2025 7:26 AM

Translate Language

Home » ಲೈವ್ ನ್ಯೂಸ್ » ಓಪೆಕ್ ಆಸ್ಪತ್ರೆಯಿಂದ ತಿದ್ದುಪಡಿ ನೇಮಕಾತಿ ಅಧಿಸೂಚನೆ

ಓಪೆಕ್ ಆಸ್ಪತ್ರೆಯಿಂದ ತಿದ್ದುಪಡಿ ನೇಮಕಾತಿ ಅಧಿಸೂಚನೆ

Facebook
X
WhatsApp
Telegram

ರಾಯಚೂರು.31.ಜುಲೈ 25: ಇಲ್ಲಿನ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀನದ ರಾಜೀವ್ ಗಾಂಧಿ ಸೂಪರ್‌ಸ್ಪೆಷಾಲಿಟಿ (ಓಪೆಕ್) ಆಸ್ಪತ್ರೆಯು ದಿನಾಂಕ 16-07-2025ರಂದು ಹೊರಡಿಸಿದ ಅಧಿಸೂಚನೆ ಅನ್ವಯ ರಾಜೀವ್ ಗಾಂಧಿ ಸೂಪರ್‌ಸ್ಪೆಷಾಲಿಟಿ (ಓಪೆಕ್) ಆಸ್ಪತ್ರೆಯಲ್ಲಿ ಬೋಧಕೇತರ  ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಒಟ್ಟು 90 ಬೋಧಕೇತರ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿರುತ್ತದೆ.

ರಿಟ್ ಪಿಟಿಷನ್ ಸಂಖ್ಯೆ: 200099/2024 ಅನ್ವಯ (ಮಾನ್ಯ ನ್ಯಾಯಾಲಯದ ಪ್ರಕರಣದಲ್ಲಿನ ಅಭ್ಯರ್ಥಿಗಳಿಗೆ ಮಾತ್ರ) ಮಾನ್ಯ ಉಚ್ಚ ನ್ಯಾಯಾಲಯ, ಕಲಬುರ್ಗಿ ಅವರ ಆದೇಶದಂತೆ ಕ್ರಮ ಸಂಖ್ಯೆ 9 ಮತ್ತು 10 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಕೂಲವಾಗಲು ದಿನಾಂಕ 11-08-2025ರಂದು ಕೊನೆಯ ದಿನಾಂಕ ಆಗಿರುತ್ತದೆ.


ಅರ್ಹತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಓಪೆಕ್ ಆಸ್ಪತ್ರೆಯ  ವಿಶೇಷಾಧಿಕಾರಿಗಳು ಮತ್ತು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!