|

ಒಳಮೀಸಲಾತಿ ಸಮೀಕ್ಷೆ – “ಹೊಲೆಯ” ಎಂದುಲೇ ನಮೂದಿಸಿ

ಛಲವಾದಿ ಮಹರ್ (ಹೊಲೆಯ) ಬಂಧುಗಳೇ,

ಕರ್ನಾಟಕ ಸರ್ಕಾರ, ಪರಿಶಿಷ್ಟ ಜಾತಿಗಳೊಳಗಿನ ಒಳಮೀಸಲಾತಿಗಾಗಿ 101 ಜಾತಿ ಜನಾಂಗದವರ ಸಮೀಕ್ಷೆ ನಡೆಸಲು ರಾಜ್ಯಾದ್ಯಂತ 54,000 ಶಿಕ್ಷಕರನ್ನು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿದೆ. ಈಗಾಗಲೇ ಈ ಸಮೀಕ್ಷೆ ಆರಂಭಗೊಂಡಿದ್ದು, ಅದರ ಪ್ರಯುಕ್ತ ನಿಮ್ಮ ಮನೆಗೆ ಸರ್ಕಾರಿ ಅಧಿಕಾರಿಗಳು ಬರುವ ಸಾಧ್ಯತೆ ಇದೆ.

ಇಲ್ಲಿಯವರೆಗೆ ಬಹುಮಂದಿ ನಾವು ಮತ್ತು ನಮ್ಮ ಮಕ್ಕಳು ಶಿಕ್ಷಣ ಹಾಗೂ ಇತರೆ ದಾಖಲೆಗಳಲ್ಲಿ ನಮ್ಮ ಜಾತಿಯನ್ನು:

1. ಆದಿ ಕರ್ನಾಟಕ (AK)


2. ಆದಿ ದ್ರಾವಿಡ (AD)


3. ಆದಿ ಆಂಧ್ರ (AA)



ಎಂದು ನಮೂದಿಸಿರುವುದಾಗಿ ಕಂಡುಬಂದಿದೆ. ಆದರೆ ನಾವು ಮೂಲ ಜಾತಿಯಾಗಿ “ಹೊಲೆಯ” ಆಗಿರುವುದರಿಂದ ಈ ರೀತಿಯ ಹೆಸರುಗಳನ್ನು ಬಳಸುವುದರಿಂದ ನಮ್ಮ ನಿಜವಾದ ಜನಸಂಖ್ಯೆ ಸರಿಯಾಗಿ ದಾಖಲಾಗದ ಅಪಾಯವಿದೆ.

ಆದ್ದರಿಂದ, ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು, ಈ ಸಮೀಕ್ಷೆಯಲ್ಲಿ ಭಾಗವಹಿಸುವಾಗ ಮತ್ತು ಮುಂದಿನ ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಖಂಡಿತವಾಗಿ “ಹೊಲೆಯ” ಎಂದುಲೇ ನಮೂದಿಸಬೇಕು. ಇದರಿಂದ ಮಾತ್ರ ನಮ್ಮ ಸಮುದಾಯದ ಶಕ್ತಿಯು ಸರಿಯಾಗಿ ಪ್ರಾತಿನಿಧ್ಯ ಪಡುವುದು ಸಾಧ್ಯ.

ಔರಾದ ತಾಲೂಕು ಹೊಲೆಯ ಜಾಗೃತಿ ಸಮಿತಿ ಈ ಮೂಲಕ ಎಲ್ಲಾ ಛಲವಾದಿ ಮಹರ್ (ಹೊಲೆಯ) ಬಂಧುಗಳಿಗೆ ಮನವಿ ಮಾಡುತ್ತದೆ:
ಸರ್ಕಾರಿ ಸಮೀಕ್ಷಾಧಿಕಾರಿಗಳು ನಿಮ್ಮ ಮನೆಗೆ ಬಂದಾಗ “ಹೊಲೆಯ” ಎಂದುಲೇ ನಿಖರವಾಗಿ ಹೇಳಿ ನೋಂದಾಯಿಸಿ.

ಶಿವಕುಮಾರ ಕಾಂಬಳೆ
ಅಧ್ಯಕ್ಷರು,
ಪರಿಶಿಷ್ಟ ಜಾತಿ ಹೊಲೆಯ ಸಂಬಂಧಿತ ಹೋರಾಟ ಸಮಿತಿ, ಔರಾದ ತಾಲೂಕು

ಪ್ರಕಾಶ ಭಂಗಾರೆ ಕಾರ್ಯಧ್ಯಕ್ಷರು, ಝರೆಪ್ಪಾ ವರ್ಮಾ ಗೌರವ ಅಧ್ಯಕ್ಷರು, ಪ್ರವೀಣ ಕಾರಂಜೆ, ದನೇಶ ಶಿಂದೆ, ರತ್ನದೀಪ ಕಸ್ತೂರೆ, ಸುಂದರ ಮೇತ್ರೆ

Similar Posts

Leave a Reply

Your email address will not be published. Required fields are marked *