05/08/2025 8:47 AM

Translate Language

Home » ಲೈವ್ ನ್ಯೂಸ್ » ಏಪ್ರಿಲ್.19 ರಂದು ಕುಂದು ಕೊರತೆ ಸಭೆ

ಏಪ್ರಿಲ್.19 ರಂದು ಕುಂದು ಕೊರತೆ ಸಭೆ

Facebook
X
WhatsApp
Telegram

ಬೀದರ.17.ಏಪ್ರಿಲ್.25: -ಬೀದರ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯ ಔರಾದ(ಬಿ), ಭಾಲ್ಕಿ, ಬೀದರ, ಕಮಠಾಣ ಉಪ ವಿಭಾಗದಲ್ಲಿ ಏಪ್ರಿಲ್.19 ರಂದು ಜನ ಸಂಪರ್ಕ ಸಭೆ ಹಾಗೂ ಕೆಇಆರ್‌ಸಿಯ (ಎಸ್.ಒ.ಪಿ.) ಮಾನದಂಡಗಳನ್ನು ಕುರಿತು ಅರಿವು ಮೂಡಿಸುವಿಕೆ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಇಂಜಿನಿಯರರು(ವಿ)/ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು(ವಿ), ಗುವಿಸಕಂನಿ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿರುತ್ತದೆ ಎಂದು ಬೀದರ ಕಾಂiÀið ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಸಭೆಗಳ ವಿವರ: ಏಪ್ರಿಲ್.19 ರಂದು ಬೆಳಿಗ್ಗೆ 11 ಗಂಟೆಗೆ ಔರಾದ(ಬಿ) ಉಪ ವಿಭಾಗ ಕಛೇರಿಯಲ್ಲಿ, ಬೀದರ (ನಗರ) ಉಪ ವಿಭಾಗ ಕಛೇರಿಯಲ್ಲಿ, ಬೀದರ (ಗ್ರಾಮೀಣ) ಉಪ ವಿಭಾಗ ಕಛೇರಿಯಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಭಾಲ್ಕಿ ಉಪ ವಿಭಾಗ ಕಛೇರಿಯಲ್ಲಿ ಮತ್ತು ಕಮಠಾಣ ಉಪ ವಿಭಾಘ ಕಛೇರಿಯಲ್ಲಿ ಸಭೆಗಳು ನಡೆಯಲಿವೆ.


ಕಾರಣ ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಈ ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆಯ ಅರ್ಜಿಗಳನ್ನು ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD