ಬೀದರ.26.ಜನವರಿ.26:- ಇಂದು 26 ಜನವರಿ 77ನೇ ಗಣರಾಜ್ಯೋತ್ಸವದ ನಮಗೆಲ್ಲರಿಗೂ ವಾಕ್ ಸ್ವಾತಂತ್ರö್ಯ, ಧಾರ್ಮಿಕ ಆಚರಣೆಯ ಸ್ವಾತಂತ್ರö್ಯ, ಮತದಾನದ ಹಕ್ಕು, ಗೌರವದಿಂದ ಬಾಳುವ ಹಕ್ಕುಗಳನ್ನು ನಮ್ಮ ಸಂವಿಧಾನ ನೀಡಿದೆ. ಸಮಸಮಾಜದ, ಸಾಮಾಜಿಕ ನ್ಯಾಯದ ಸ್ಪಷ್ಟ ಸಂದೇಶಗಳು ಸಂವಿಧಾನದಲ್ಲಿವೆ. ಶೋಷಿತರು, ದಲಿತರು, ವಂಚಿತರು, ದುರ್ಬಲರು, ಮಹಿಳೆಯರಿಗೂ ನ್ಯಾಯ ಕಲ್ಪಿಸಿರುವ ನಮ್ಮ ಸಂವಿಧಾನ ಇಡೀ ವಿಶ್ವಕ್ಕೇ ಮಾದರಿಯಾಗಿದೆ ಎಂದು ಅರಣ್ಯ, ಪರಿಸರ ಹಾಗೂ ಜೀವಿಶಾಸ್ತç ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಅವರು ಸೋಮವಾರ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವದಂದು ರಾಷ್ಟçಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಭಾರತದ ಸಂವಿಧಾನ ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ಇಷ್ಟು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹೊಂದಿರುವ ಲಿಖಿತ ಸಂವಿಧಾನದoತಹ ಯಾವುದೇ ಗೊಂದಲ ಅಸ್ಪಷ್ಟತೆ ಇಲ್ಲದ ಸಂವಿಧಾನ ಬೇರೆ ಯಾವ ರಾಷ್ಟ್ರದಲ್ಲೂ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಇದಕ್ಕೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಶ್ರಮ ಕಾರಣವಾಗಿದೆ.
ನಮ್ಮ ಸಂವಿಧಾನ ಭಾರತದ ಎಲ್ಲ ಪ್ರಜೆಗಳಿಗೂ ಬದುಕುವ ಸಮಾನಹಕ್ಕು ಕಲ್ಪಿಸಿದೆ. ಹಲವು ಮೂಲಭೂತ ಹಕ್ಕುಗಳನ್ನು ನೀಡಿದೆ. ಅದೇ ರೀತಿ ನಮ್ಮ ಕರ್ತವ್ಯಗಳೇನು ಎಂಬುದನ್ನೂ ತಿಳಿಸಿಕೊಟ್ಟಿದೆ ಎಂದರು.
ಇoದಿನ ಯುವ ಜನರು ಭಾರತದ ಭವ್ಯ ಇತಿಹಾಸವನ್ನು ತಿಳಿಯಬೇಕು ಸ್ವಾತಂತ್ರö್ಯ ಪೂರ್ವದಲ್ಲಿ ಹೇಗಿತ್ತು. ಇಂದು ತಾಂತ್ರಿಕವಾಗಿ, ವೈಜ್ಞಾನಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹೇಗೆ ಪ್ರಗತಿ ಸಾಧಿಸಿದೆ, ಸ್ವಾತಂತ್ರ್ಯ ಪೂರ್ವದಲ್ಲಿ ಬಡತನ ದೇಶವನ್ನು ಹೇಗೆ ಕಿತ್ತು ತಿನ್ನುತ್ತಿತ್ತು, ಸ್ವಾತಂತ್ರö್ಯ ನಂತರ ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಕೈಗಾರಿಕೆ, ಜಲಾಶಯಗಳನ್ನು ನಿರ್ಮಿಸಿದ ದೂರದರ್ಶಿತ್ವದ ನಾಯಕರು ಹೇಗೆ ಈ ಭಾರತವನ್ನು ಆಧುನಿಕ ಭಾರತವಾಗಿ ಪರಿವರ್ತಿಸಿದರು ಎಂಬುದನ್ನು ತಿಳಿಯಬೇಕು.

ಈ ಪ್ರವರ್ಧಮಾನ ಸ್ಥಿತಿಗೆ ಕಾರಣರಾದ ನಮ್ಮ ಸ್ವಾತಂತ್ರö್ಯ ಯೋಧರ, ಸ್ವಾತಂತ್ರ್ಯಾ ನಂತರದ ಆಡಳಿತಗಾರರ, ಸಂವಿಧಾನ ನಿರ್ಮಾತೃಗಳ ತ್ಯಾಗ, ಬಲಿದಾನ, ಪರಿಶ್ರಮದ ಬಗ್ಗೆಯೂ, ಸಂವಿಧಾನವನ್ನು ಓದಿ ತಿಳಿಯಬೇಕು. ಕನಿಷ್ಠ ಪ್ರಸ್ತಾವನೆಯನ್ನಾದರೂ ಓದಿ ತಿಳಿದುಕೊಳ್ಳಬೇಕೆಂದರು.
“ಭಾರತದ ಜನರಾದ ನಾವು ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಸರ್ವಧರ್ಮ, ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರö್ಯ ಸ್ಥಾನಮಾನ ಹಾಗೂ ಅವಕಾಶಗಳಲ್ಲಿ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು, ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುಭದ್ರಗೊಳಿಸಿ, ಅವರಲ್ಲಿ ಭ್ರಾತೃತ್ವಭಾವನೆಯನ್ನು ವೃದ್ಧಿಗೊಳಿಸಲು ಶ್ರದ್ಧಾಪೂರ್ವಕವಾಗಿ ಶ್ರಮಿಸಲು ಸಂಕಲ್ಪವಿದೆ.
ಸಂವಿಧಾನದ ಈ ಪ್ರಸ್ತಾವನಾ ನುಡಿಗಳು ಭಾರತದ ಪ್ರತಿಯೊಬ್ಬ ಪ್ರಜೆಯ ನಿತ್ಯಜೀವನದ ಮೂಲಮಂತ್ರಗಳಾಗಬೇಕು. ಪ್ರತಿಯೊಬ್ಬ ಭಾರತೀಯನ ನಡೆ-ನುಡಿಗಳು ಸಂವಿಧಾನಕ್ಕೆ ಸಾಕ್ಷಿಯಾಗಿರಬೇಕು. ಸಂವಿಧಾನದ ನಿರ್ದೇಶನವನ್ನು ನಿಷ್ಠೆಯಿಂದ ಪಾಲಿಸುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.

ಬೀದರ್ ಜಿಲ್ಲೆಯ ಅಸಮತೋಲನ ನಿವಾರಣೆ ಮಾಡಲು ಹೆಚ್ಚುವರಿ ಅನುದಾನದ ಅಗತ್ಯವಿದೆ. ಈ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದ್ದು, ಕಳೆದ ಏಪ್ರಿಲ್ ನಲ್ಲಿ ಮಾನ್ಯ ಮುಖ್ಯಮಂತ್ರಿಯವರು 2025 ಕೋಟಿ ರೂಪಾಯಿ ವೆಚ್ಚದ ವಿವಿಧ ಮೂಲಸೌಕರ್ಯ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವತಿಯಿಂದ ಜಿಲ್ಲೆಗೆ ಹೆಚ್ಚುವರಿ ಅನುದಾನ ಲಭಿಸುತ್ತಿದೆ ಎಂದರು.

ನಮ್ಮ ಸರ್ಕಾರ ನುಡಿದಂತೆ ನಡೆದಿದ್ದು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5 ಸಾವಿರ ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯಾವುದೇ ಜಿಲ್ಲೆ ಅಭಿವೃದ್ಧಿ ಹೊಂದಬೇಕಾದರೆ ಅದಕ್ಕೆ ರಸ್ತೆ, ರೈಲು, ವಿಮಾನ ಸೌಕರ್ಯ ಅತ್ಯಗತ್ಯ. ಹೀಗಾಗಿಯೇ ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ಅನುದಾನ ನಿಲ್ಲಿಸಿದ ಬಳಿಕ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಬೀದರ್ ನಾಗರಿಕ ವಿಮಾನಯಾನ ಸೇವೆಯನ್ನು ರಾಜ್ಯ ಸರ್ಕಾರವೇ 15 ಕೋಟಿ ರೂ. ಅನುದಾನ ನೀಡಿ ಮರು ಆರಂಭ ಮಾಡಿಸಿದೆ. ಮುಂಬರುವ ವರ್ಷದಲ್ಲಿಯೂ ಸಹ ಅನುದಾನ ಮೀಸಲಿಡಲಾಗುವುದೆಂದರು.
ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರವನ್ನೂ ಒಂದೇ ಪಥದಲ್ಲಿ ಒಗ್ಗೂಡಿಸುವ ಚಿಂತನೆ ನಡೆದಿದ್ದು, 500 ಕೋಟಿ ವೆಚ್ಚದಲ್ಲಿ 250 ಕಿಲೋ ಮೀಟರ್ಗಳ ಬಸವ ಪಥ ಎಂಬ ವರ್ತುಲ ರಸ್ತೆ ರಿಂಗ ರೋಡ ಮಾಡುವ ಪ್ರಸ್ತಾವನೆಯನ್ನು ನಾನು ಸರ್ಕಾರದ ಮುಂದಿಟ್ಟಿದ್ದೇನೆoದರು.

ಬುದ್ಧ, ಬಸವ, ಅಂಬೇಡ್ಕರ ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆಯಲ್ಲಿ ಬಿತ್ತಿ ಅನುಸರಿಸಬೇಕಿದೆ. ಇಡೀ ಜಗತ್ತಿಗೆ ಸಮಾನತೆ ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ನೀಡಿದ ಬಸವಾದಿ ಶರಣರ ನೆಲ ಇದು, 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲ ಜಾತಿ ಹಾಗೂ ಮಹಿಳೆಯರಿಗೆ ಸಮಾನತೆಯನ್ನು ಸಾರಿದರು. ಜಗತ್ತಿನ ಪ್ರಥಮ ಪ್ರಜಾಸಂಸತ್ತು ಇದಾಗಿತ್ತು. ಈಗ 750 ಕೋಟಿರೂ. ವೆಚ್ಚದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಈಗ ಶೇ. 70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಭವ ಮಂಟಪಕ್ಕೆ 175 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.
ಹೀಗಾಗಿ ಅನುಭವ ಮಂಟಪದ ಕಾಮಗಾರಿ ಭರದಿಂದ ಸಾಗಿದ್ದು, ನಾನು ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
770 ಕಂಬಗಳ ಮೇಲೆ 770 ಶರಣರ ವಚನ ಕೆತ್ತಲಾಗಿದೆ. ಜಗತ್ತಿನ ಪ್ರಥಮ ಇಷ್ಟಲಿಂಗ ಅಧ್ಯಯನ ಕೇಂದ್ರ ಸ್ಥಾಪನೆಯಾಗಲಿದೆ. ಶರಣ ಗ್ರಾಮ ಸ್ಥಾಪಿಸಲಾಗಿದ್ದು, ಈ ವರ್ಷ ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ 277 ಕೋಟಿ ರೂ. ಬೆಳೆ ಪರಿಹಾರವನ್ನು 1.92 ಲಕ್ಷ ರೈತರಿಗೆ ಈಗಾಗಲೇ ಅವರ ಖಾತೆಗೆ ಜಮೆ ಆಗಿವೆ.
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅಧ್ಯಾಯನ ಕೇಂದ್ರಕ್ಕೆ ಶ್ರೀಘ್ರವೇ 10 ಎಕರೆ ಜಮೀನು ಹಸ್ತಾಂತರಗೊಳ್ಳಲಿದೆ. ಇದಕ್ಕೆ ಈ ವರ್ಷ 5 ಕೋಟಿ ಅನುದಾನ ಮೀಸಲಿಡಲಾಗಿದೆ. ನಗರದ ನೌಬಾದ ಸಮೀಪದ ರೇಷ್ಮೆ ಇಲಾಖೆಯ ಜಾಗದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಲಾಗುವುದೆಂದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿoದ ಬೀದರ ಜಿಲ್ಲೆಯಲ್ಲಿ 2013-14 ರಿಂದ 2024-25 ರವರೆಗೆ 2638.81 ಕೋಟಿ ರೂ ಮೊತ್ತದಲ್ಲಿ 5086 ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ. 4260 ಕಾಮಗಾರಿಗಳು ಮುಕ್ತಾಯಗೊಂಡಿದ್ದು ಇದಕ್ಕೆ 1974.72 ಕೋಟಿ ರೂ ವೆಚ್ಚ ಮಾಡಲಾಗಿರುತ್ತದೆ. 558.00 ಕೋಟಿ ಮೊತ್ತದ 690 ಕಾಮಗಾರಿಗಳು ಜಿಲ್ಲೆಯಲ್ಲಿ ಪ್ರಗತಿಯಲ್ಲಿರುತ್ತದೆ. 206.36 ಕೋಟಿ ಮೊತ್ತದ 136 ಕಾಮಗಾರಿಗಳು ಜಿಲ್ಲೆಯಲ್ಲಿ ಪ್ರಾರಂಭವಾಗಬೇಕಾಗಿರುತ್ತದೆ. ಪ್ರಸ್ತುತ 2025-26ನೇ ಸಾಲಿಗೆ ಮಂಡಳಿಯಿAದ 437.91 ಕೋಟಿಗಳಿಗೆ ಅನುದಾನ ಮಂಜೂರು ಮಾಡಲಾಗಿದ್ದು, ಕ್ರಿಯಾಯೋಜನೆ ಸಿದ್ದಪಡಿಸಲು ಶಾಸಕರಿಂದ ಯೋಜನೆ ರೂಪಿಸಲು ತಿಳಿಸಲಾಗಿದ್ದು ಶೀಘೃದಲ್ಲಿ ಕ್ರಿಯಾಯೋಜನೆ ಸಿದ್ದಪಡಿಸಿ ಮಂಡಳಿಯ ಅನುಮೋದನೆಗಾಗಿ ಸಲ್ಲಿಸಲಾಗುತ್ತಿದೆ. ಈ ವರ್ಷವು ಸಹ ವಿಮಾನಯಾನಕ್ಕೆ ಅಗತ್ಯ ಅನುದಾನ ಮೀಸಲಿಡಲಾಗಿದೆ ಎಂದರು.
ಅರಣ್ಯ, ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಹವಮಾನಮ ಬದಲಾವಣೆ ಆಗುತ್ತಿದೆ ಯುವಕರು ಪರಿಸರ ರಕ್ಷಣೆ ಮಾಡಬೇಕು. ಬೀದರ ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ವಿಭಾಗಗಳಲ್ಲಿ ಒಟ್ಟು 9.00 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದ್ದು ಅದರಲ್ಲಿ ಈಗಾಗಲೇ 7.00 ಲಕ್ಷ ಸಸಿಗಳನ್ನು ಜಿಲ್ಲೆಯ ವಿವಿಧ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿ ನೆಡಲಾಗಿರುತ್ತದೆ. 2026-27ನೇ ಸಾಲಿನಲ್ಲಿ ವಿವಿಧ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲ್ಲಿ ನೆಡುತೋಪು ನಿರ್ಮಾಣ ಮಾಡಲು ಪ್ರಸ್ತುತ ಸಾಲಿನಲ್ಲಿ 10.00 ಲಕ್ಷ ಸಸಿಗಳನ್ನು ಬೆಳೆಸುವ ಗುರಿ ನಿಗಧಿಪಡಿಸಲಾಗಿದೆ. ಹೊನ್ನಿಕೇರಿ ಮೀಸಲು ಅರಣ್ಯ ಮತ್ತು ಇತರೆ ಜೀವವೈವಿಧ್ಯ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಂರಕ್ಷಣಾತ್ಮಕ ಕಾರ್ಯಕ್ರಮಗಳಿಗಾಗಿ ರೂ. 15.00 ಕೋಟಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿರುತ್ತದೆ ಮೇ ಒಳಗಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಬೀದರ ವಿಭಾಗದ ಭಾಲ್ಕಿ ವಿಧಾನಸಭಾ ಮತಕ್ಷೇತ್ರದ ಇಂಚೂರ ಗ್ರಾಮದ ಸರ್ವೆ ನಂ. 30 ರಲ್ಲಿ ಹೊಸದಾಗಿ ಉದ್ಯಾನ ನಿರ್ಮಾಣಕ್ಕಾಗಿ ರೂ. 508.00 ಲಕ್ಷಕ್ಕೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿ. ಪ್ರಗತಿಯಲ್ಲಿರುತ್ತದೆ. ಭಾಲ್ಕಿ ತಾಲ್ಲೂಕಿನ ಖಾನಾಪೂರ ಅರಣ್ಯ ಪ್ರದೇಶದ ಸರ್ವೆನಂ. 129/1ರಲ್ಲಿ ಪಕ್ಷಿಲೋಕ ನಿರ್ಮಾಣ ಕಾಮಗಾರಿಗಾಗಿ ರೂ. 12.00 ಕೋಟಿಯ ಪ್ರಸ್ತಾವನೆಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ಅನುಮೋದನೆ ನೀಡಲಾಗಿರುತ್ತದೆ. ಇಲ್ಲಿಯವರೆಗೆ ಬೀದರ ಜಿಲ್ಲೆಯಲ್ಲಿ ಕರ್ನಾಟಕ ಅರಣ್ಯ ಕಾಯ್ದೆ 1963 ರನ್ವಯ ಒಟ್ಟು 1177.00 ಎಕರೆ ಒತ್ತುವರಿಯಾದ ಅರಣ್ಯ ಪ್ರದೇಶವನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಇಲಾಖಾ ವಶಕ್ಕೆ ಪಡೆದುಕೊಂಡು, ಈ ಪ್ರದೇಶದಲ್ಲಿ ನೆಡುತೋಪು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತಿದೆಂದರು.
ಬೀದರ್ ಜಿಲ್ಲೆಯ ಹಸಿರುಹೊದಿಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣೆ ಹಾಗೂ ಅವುಗಳಿಂದ ಸಾರ್ವಜನಿಕರಿಗೆ ಹಾನಿ ಮತ್ತು ರೈತರ ಜಮೀನುಗಳಲ್ಲಿ ಬೆಳೆ ನಾಶವಾದಲ್ಲಿ ಸರ್ಕಾರ ನಿಗದಿಪಡಿಸಿದ ದರದಂತೆ ಪರಿಹಾರಧನ 2024-25ನೇ ಸಾಲಿನಿಂದ ಇಲ್ಲಿಯವರೆಗೆ ರೂ. 45.50 ಲಕ್ಷಅನುದಾನ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಬೆಳೆ ಪರಿಹಾರ ನೀಡಲಾಗಿದೆ. ಏಕರೂಪದ ಪ್ಲಾಸ್ಟಿಕ್ ನಿಷೆಧಿಸಲಾಗಿದೆ. ಗಿಡ ಮರಗಳನ್ನು ಬೆಳೆಸಬೇಕಿದೆ, ಪ್ರತಿ ತಾಲ್ಲೂಕಿನಲ್ಲಿ ದೇವವನ ನಿರ್ಮಿಸಲಾಗವುದುದು ಎಂದರು.
ಬೀದರ ಪಟ್ಟಣದಲ್ಲಿ ರೂ. 48.32 ಕೋಟಿಗಳಿಗೆ ಬೀದರ ಜಿಲ್ಲೆ ಪ್ರಜಾಸೌಧ, ಬೀದರ ಜಿಲ್ಲಾಡಳಿತ ಕೇಂದ್ರ ಕಟ್ಟಡ ನಿರ್ಮಿಸುವ ಕಾಮಗಾರಿ ಈಗಾಗಲೇ ಪ್ರಾರಂಭವಾಗಿರುತ್ತದೆ.
ಮುಖ್ಯಮಂತ್ರಿಯವರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಬೀದರ್ ಹಾಗೂ ಭಾಲ್ಕಿ ಕ್ಷೇತ್ರಗಳಿಗೆ ತಲಾ ರೂ. 50.00 ಕೋಟಿಗಳು ಮತ್ತು ಇತರೆ ನಾಲ್ಕು ಕ್ಷೇತ್ರಗಳಿಗೆ ತಲಾ ರೂ. 25.00 ಕೋಟಿಗಳು, ಒಟ್ಟಾರೆ ರೂ. 200.00 ಕೋಟಿಗಳು ಮಂಜೂರಾಗಿದ್ದು, ಇದರಲ್ಲಿ ಲೋಕೋಪಯೋಗಿ ಇಲಾಖೆಗೆ ಶೇಕಡಾ 50 ಮೀಸಲಾಗಿದ್ದು, ರೂ. 100.00 ಕೋಟಿಗಳಿಗೆ ಕ್ರಿಯಾಯೋಜನೆಯನ್ನು ಅನುಮೋದನೆಗಾಗಿ ಸಲ್ಲಿಸಲಾಗಿದೆ. 3 ವರ್ಷಗಳಲ್ಲಿ 500 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಭಾಲ್ಕಿ ಪಟ್ಟಣದಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ರೂ. 14.75 ಕೋಟಿಗಳಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಭಾಲ್ಕಿ ಪಟ್ಟಣದಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿರೂ. 16.50 ಕೋಟಿಗಳಲ್ಲಿ. ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ. ಭಾಲ್ಕಿ ತಾಲೂಕಿನಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ರೂ. 15.00 ಕೋಟಿ ಕೋನಮೆಳಕುಂದಾ ಗ್ರಾಮದಲ್ಲಿ ಕಿತ್ತೂರುರಾಣಿಚನ್ನಮ್ಮ ವಸತಿ ಶಾಲೆ ಕಟ್ಟಡ ಔರಾದ ತಾಲೂಕಿನ ಚಿಂತಾಕಿ ಗ್ರಾಮದಲ್ಲಿ ರೂ. 15.00 ಕೋಟಿಗಳಲ್ಲಿ ಡಾ: ಬಿ.ಆರ್. ಅಂಬೇಡ್ಕರ ಬಾಲಕಿಯರ ವಸತಿ ಶಾಲೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಭಾಲ್ಕಿ ಮತ್ತು ಔರಾದ್ ತಾಲೂಕುಗಳಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ತಲಾ ರೂ. 2.50 ಕೋಟಿಗಳಲ್ಲಿ ಒಟ್ಟು ರೂ. 5.00 ಕೋಟಗಳಲ್ಲಿ ಸುಮಾರು 60 ಹಳ್ಳಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಮ್ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿವೆ. ಹುಮನಾಬಾದ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಕೆ.ಕೆ.ಆರ್.ಡಿ.ಬಿ ಯೋಜನೆಅಡಿಯಲ್ಲಿ ರೂ. 8.00 ಕೋಟಿಗಳಿಗೆ ಡಾ: ಬಿ.ಆರ್. ಅಂಬೇಡರ ವಸತಿ ಶಾಲೆ ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆ. ಕಮಲನಗರ ತಾಲೂಕಿನ ಹೊರಂಡಿ ಗ್ರಾಮದಲ್ಲಿ ರೂ. 18.00 ಕೋಟಿಗಳಿಗೆ ಡಾ: ಬಿ.ಆರ್. ಅಂಬೇಡ್ಕರ ವಸತಿ ಶಾಲೆ ಮಂಜೂರಾಗಿದ್ದು, ಕಾಮಗಾರಿ ಪೂರ್ಣಗೊಂಡಿದೆAದರು.
ಮುoಗಾರು ಹಂಗಾಮಿನಲ್ಲಿ ವಾಡಿಕೆಗಿಂತಲು ಹೆಚ್ಚುವರಿಯಾಗಿ ಮಳೆೆಯಾಗಿ ಜಿಲ್ಲಾದ್ಯಂತ ಅಪಾರ ಪ್ರಮಾಣದಲ್ಲಿ ಒಟ್ಟು ವಿಸ್ತೀರ್ಣ 167202.78 ಹೆಕ್ಟೇರ ಪ್ರದೇಶದ ಅಂದಾಜು ರೂ 143.60 ಕೋಟಿ ಹಾನಿಯಾಗಿರುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,39945 ರೈತರು ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊoಡಿರುತ್ತಾರೆ. ರೈತರಿಗೆ ಅಗತ್ಯ ಬೀಜ, ರಸಗೊಬ್ಬರ, ಕೃಷಿಯಂತ್ರ, ತುಂತುರು ನೀರಾವರಿ ಸೌಲಭ್ಯ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕೃಷಿಯಾಂತ್ರೀಕರಣ ಯೋಜನೆಯಡಿ ಜಿಲ್ಲೆಗೆ ರೂ. 5.10 ಕೋಟಿ ಅನುದಾನವನ್ನು ಮೀಸಲಿರಿಸಿ, ಇಲ್ಲಿಯವರೆಗೆರೂ 3.64 ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ. ಸೂಕ್ಷ್ಮನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಶೇ.90 ರಷ್ಟು ಸಹಾಯಧನದಲ್ಲಿ ಹನಿ ನೀರಾವರಿ ಘಟಕ ಹಾಗೂ ತುಂತುರು ನೀರಾವರಿ ಘಟಕಗಳನ್ನು ರೈತರಿಗೆ ನೀಡಲಾಗುತ್ತಿದ್ದು ಸದರಿ ಕಾರ್ಯಕ್ರಮಕ್ಕಾಗಿ ರೂ. 3.61 ಕೋಟಿ ಅನುದಾನವನ್ನು ಮೀಸಲಿರಿಸಿ, ಇಲ್ಲಿಯವರೆಗೆರೂ. 1.37 ಕೋಟಿ ಅನುದಾನವನ್ನು ಬಿಡುಗಡೆಯಾಗಿರುತ್ತದೆ ಎಂದರು.
ಪ್ರವಾಹದಿoದ ಬೆಳೆ ಹಾನಿಯಾದ ರೈತರಿಗೆ ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಪ್ರತಿ ಹೆಕ್ಟೇರಗೆ ಮಳೆಯಾಶ್ರೀತ ರೂ 8,500, ನೀರಾವರಿ ಬೆಳೆಗೆ ರೂ.17,000 ಮತ್ತು ಬಹುವಾರ್ಷಿಕ ಬೆಳೆಗಳಿಗೆ ರೂ.22,500 ಗಳಂತೆ ಬೆಳೆಹಾನಿಯಾದ ರೈತರಿಗೆ ಹಂತಹoತವಾರು 10 ಹಂತಗಳಲ್ಲಿ ಒಟ್ಟು 188308 ರೈತರಿಗೆ ರೂ. 135.68 ಕೋಟಿ ಪರಿಹಾರ ನೇರವಾಗಿ ರೈತರ ಬ್ಯಾಂಕ ಖಾತೆಗೆ ಜಮೆ ಮಾಡಲಾಗಿರುತ್ತದೆ.
ಮುಂದುವರೆದು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಹೆಚ್ಚುವರಿ ಪರಿಹಾರ ಮೊತ್ತ ರೂ 8,500 ಗಳು ಸಹ ಹಂತಹoತವಾರು 07 ಹಂತಗಳಲ್ಲಿ ಒಟ್ಟು 186426 ರೈತರಿಗೆ ರೂ 134.27 ಕೋಟಿ ಪರಿಹಾರ ನೇರವಾಗಿ ರೈತರ ಬ್ಯಾಂಕ ಖಾತೆಗೆ ಜಮೆ ಮಾಡಲಾಗಿರುತ್ತದೆ. ಹೀಗಾಗಿ ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್/ಎಸ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ಘೋಷಿಸಲಾದ ಪರಿಹಾರ ಮೊತ್ತ ಸೇರಿ 27 ಹಂತಗಳಲ್ಲಿ ಒಟ್ಟು 188308 ರೈತರಿಗೆ ರೂ. 269.96 ಕೋಟಿ ಪರಿಹಾರ ಜಮೆ ಮಾಡಲಾಗಿರುತ್ತದೆಂದರು.
ಸರಕಾರಕ್ಕೆ 3 ವರ್ಷ ಆಗುತ್ತಿದೆ. ಪ್ರತಿ ವರ್ಷ 5 ಸಾವಿರ ಕೋಟಿ ರೂ. ಕಲ್ಯಾಣ ಕರ್ನಾಟಕ್ಕೆ ಮೀಸಲಿಸಲಾಗಿದ್ದು, ಬೀದರ ಜಿಲ್ಲೆಗೆ ಪ್ರತಿ ವರ್ಷ 500 ಕೋಟಿ ರೂ. ಮೀಸಲಿಟ್ಟು ವಿವಿಧ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೀದರ ಜಿಲ್ಲೆಯ ಹುಮನಾಬಾದ, ಹುಲಸೂರ, ಔರಾದ, ಕಮಲನಗರ ತಹಸೀಲ ಕಚೇರಿಯ ಅಭಿಲೇಖಾಲಯ ಶಾಖೆ ಡಿಜಿಟಲೀಕರಣ ಕಾರ್ಯ ಮುಕ್ತಾಯಗೊಂಡಿರುತ್ತದೆ.
ಬೀದರ ಜಿಲ್ಲಾ ಸಂಕೀರ್ಣ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರವು ರೂ 48.32 ಕೋಟಿಗಳಿಗೆ ಅಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕಮಲನಗರ ಹಾಗೂ ಚಿಟಗುಪ್ಪಾ ತಾಲ್ಲೂಕಿನಲ್ಲಿ ತಲಾ ರೂ. 8. ಕೋಟಿ 60 ಲಕ್ಷಗಳಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದರು.
ಆರೋಗ್ಯವೇ ಭಾಗ್ಯ, ಅರೋಗ್ಯವಂತ ಜನರಿಂದ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ಜಿಲ್ಲೆಯ ಜನರು ಆರೋಗ್ಯವಂತರಾಗಿ ಬದುಕಬೇಕು ಎಂಬುದು ಸರ್ಕಾರವು ಆಶಯವಾಗಿದ್ದು, ಹಲವಾರು ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಆರೋಗ್ಯ ಕಾರ್ಯಕ್ರಮಗಳನ್ನು ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಎಂಬ ಧ್ಯೆಯದೊಂದಿಗೆ ಕಾರ್ಯಗತಗೊಳಿಸಲಾಗುತ್ತಿದೆ. ತಾಯಿ ಮತ್ತು ಮಕ್ಕಳ ಸುರಕ್ಷತೆಗಾಗಿ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ನಗು-ಮಗು, ಆರೋಗ್ಯ ಕವಚ, ಜನನಿ ಸುರಕ್ಷಾ ವಾಹಿನಿಯಂತಹ ಹಲವಾರು ಆರೋಗ್ಯ ಕಾರ್ಯಕ್ರಮಗಳು, ನೂತನವಾಗಿ ಪರಿಚಯಿಸಲಾಗಿರುವ ತಾತ್ಕಾಲಿಕ ವಿಧಾನವಾದ “ಸೆಬ್ಡರ್ಮಲ್ಸಿಂಗಲ್ರಾಡ್ ಕಾಂಟ್ರಾಸೆಪ್ಟಿವ್ ಇಂಪ್ಲಾoಟ್” ಗರ್ಭನಿರೋಧಕ ಚುಚ್ಚುಮದ್ದು ಬ್ರೀಮ್ಸ್ ಆಸ್ಪತ್ರೆ ಬೀದರ ಹಾಗೂ 100 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆ, ತಾಲೂಕಾ ಸಾರ್ವಜನಿಕ ಆಸ್ಪತ್ರೆ ಔರಾದ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬಸವಕಲ್ಯಾಣ ಸೇರಿ ಒಟ್ಟು-800 ಫಲಾನುಭವಿಗಳಿಗೆ ಅಳವಡಿಸಲಾಗಿದೆ ಎಂದರು.
ಕುಟುಂಬ ಕಲ್ಯಾಣ ಕಾರ್ಯಕ್ರಮದ ಪ್ರಗತಿಯು ಶೇಕಡ 97 ರಷ್ಟು ಆಗಿದೆ. ರಾಷ್ಟ್ರೀಯ ಶ್ರವಣದೋಷ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಶ್ರವಣದೋಷಹೊಂದಿರುವ 23-ಮಕ್ಕಳಿಗೆ ಉಚಿತವಾಗಿ ಕಾಕ್ಲಿಯ ಇಂಪ್ಲಾAಟ್ ಶಸ್ತç ಚಿಕಿತ್ಸೆ ಮಾಡಿಸಲಾಗಿದ್ದು, ಈ ಸಾಧನೆ ಮಾಡುವಲ್ಲಿ ನಮ್ಮ ಜಿಲ್ಲೆಯು ರಾಜ್ಯಮಟ್ಟದಲ್ಲಿ 3ನೇ ಸ್ಥಾನದಲ್ಲಿರುತ್ತದೆ ಎಂದು ಹೇಳಲು ಸಂತೋಷವಾಗುತ್ತದೆ. “ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ”, “ಚೈನ್”, “ವಿಫ್ಸ್” “ನಮ್ಮ ಕ್ಲಿನಿಕ್” ಹೀಗೆ ಹಲವಾರು ಪ್ರಾಯೋಗಿಕ ಆರೋಗ್ಯ ಕಾರ್ಯಕ್ರಮಗಳನ್ನು ಕೂಡ ಪರಿಣಾಮಕಾರಿ ಅನುಷ್ಠಾನ ಮಾಡುತ್ತಿದೆ. ಭಾಲ್ಕಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಯಿಂದ 150 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸುವುದಕ್ಕೆ ಪ್ರಸ್ತಾಪಿಸಲಾಗಿದೆ. ಬಸವಕಲ್ಯಾಣ ಉಪವಿಭಾಗಿಯ ಆಸ್ಪತ್ರೆಯನ್ನು 300 ಹಾಸಿಗೆಯ ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದನ್ನು ತಿಳಿಸಲು ಹರ್ಷಿಸುತ್ತೇವೆಂದರು.
ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿರುತ್ತದೆ.
ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಡ ಕುಟುಂಬದವರಿಗೆ ಆಹಾರ ಭದ್ರತೆಯನ್ನು ಒದಗಿಸಲಾಗುತ್ತಿದೆ. ಅದರಂತೆ ಅನ್ನಭಾಗ್ಯ ಯೋಜನೆಯ ಪ್ರತಿ ಬಿ.ಪಿ.ಎಲ್. ಪಡಿತರ ಚೀಟಿಯ ಸದಸ್ಯರಿಗೆ 05ಕೆ.ಜಿ.ಯ ಅಕ್ಕಿ ಜೊತೆಗೆ ಇನ್ನು 5ಕೆ.ಜಿ. ಸೇರಿಸಿ, ಒಟ್ಟು 10 ಕೆ.ಜಿ. ಅಕ್ಕಿ ನೀಡಲಾಗುವುದೆಂದು ಗ್ಯಾರಂಟಿ ಯೋಜನೆಯಡಿ ಘೋಷಿಸಿರುತ್ತಾರೆ. ಜುಲೈ 2023 ರಿಂದ ಹೆಚ್ಚುವರಿ 05 ಕೆ.ಜಿ. ಅಕ್ಕಿ ಬದಲಾಗಿ 170/- ರೂ. ಗಳಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯನ್ನು (ಡಿ.ಬಿ.ಟಿ) ಡಿಸೆಂಬರ್- 2024 ರವರಗೆ ಮಾಡಲಾಗಿರುತ್ತದೆ.
ಜುಲೈ-2023 ರಿಂದ ಡಿಸೆಂಬರ್-2024 ರವರೆಗೆ ಒಟ್ಟು ರೂ. 333.28 ಕೋಟಿಗಳನ್ನು ಕುಟುಂಬಗಳ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ. ಮೂಲಕ ಜಮೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಯಂತೆ ಫೆಬ್ರವರಿ-2025 ರಿಂದ ಡಿ.ಬಿ.ಟಿ. ಬದಲಾಗಿ ಪ್ರತಿ ಪಡಿತರ ಚೀಟಿಯ ಫಲಾನುಭವಿಗಳಿಗೆ ಪ್ರತಿ ಮಾಹೆ 10 ಕೆ.ಜಿ. ಅಕ್ಕಿಯನ್ನು ವಿತರಿಸಲಾಗಿರುತ್ತದೆ.
ಜುಲೈ-2025 ರಿಂದ ಸೆಪ್ಟೆಂಬರ್.2025ರ ಮಾಹೆಯವರೆಗೆ ಅಕ್ಕಿ ಜೊತೆಗೆ ಜೋಳ ಸೇರಿಸಿ ಒಟ್ಟು 18 ಕೆ.ಜಿ.ಯಂತೆ ಪಡಿತರ ಧಾನ್ಯ ವಿತರಿಸಲಾಗಿರುತ್ತದೆ. ಅಕ್ಟೋಬರ್.2025 ರಿಂದ ಒಟ್ಟು 10 ಕೆ.ಜಿ. ಅಕ್ಕಿ ಪಡಿತರ ಧಾನ್ಯ ವಿತರಿಸಲಾಗುತ್ತಿದೆ. ಅನ್ನಸುವಿಧಾ ಯೋಜನೆಯಡಿ 75 ವರ್ಷದ ಮೇಲ್ಪಟ್ಟ ವೃದ್ಧ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಡಿತರ ಆಹಾರಧಾನ್ಯ ತಲುಪಿಸಲಾಗುತ್ತಿದೆ.
ಬೀದರ ಜಿಲ್ಲೆಯಲ್ಲಿ ಒಟ್ಟು 7818 ವೃದ್ಧ ಫಲಾನುಭವಿಗಳು ಈ ಯೋಜನೆಯಡಿ ಪಡಿತರ ಆಹಾರಧಾನ್ಯ ಪಡೆಯಬಹುದಾಗಿದೆಂದರು.
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಸಲುವಾಗಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000 ಗಳನ್ನು ನೀಡುವ ಗೃಹಲಕ್ಷ್ಮೀಯೋಜನೆಯು ದಿನಾಂಕ: 19-07-2023 ರಂದು ರಾಜ್ಯಾದ್ಯಂತಚಾಲನೆಗೊAಡಿರುತ್ತದೆ. ಬೀದರ ಜಿಲ್ಲೆಯಲ್ಲಿ ಒಟ್ಟು 3,56,041 ಅರ್ಹ ಫಲಾನುಭವಿಗಳು ನೋಂದಣಿಯಾಗಿದ್ದು, ಇಲ್ಲಿಯವರೆಗೆ ಪ್ರತಿ ಫಲಾನುಭವಿಗಳಿಗೆ ತಲಾ ರೂ. 2000/- ರಂತೆ ಸೆಪ್ಟೆಂಬರ್.2025 ರವರೆಗೆ ಒಟ್ಟು ರೂ. 1547.49 ಕೋಟಿ ಹಣವನ್ನು ಡಿ.ಬಿ.ಟಿ. ಮುಖಾಂತರ ಫಲಾನುಭವಿಗಳಖಾತೆಗೆ ಜಮೆ ಮಾಡಲಾಗಿದೆ. ರಾಜ್ಯದ ಕುಟುಂಬ ವರ್ಗದವರಿಗೆ ಉಚಿತವಾಗಿ 200 ಯುನಿಟ್ಗಳ ವರೆಗೆ ವಿದ್ಯುತ್ ಸೌಲಭ್ಯ ಕಲ್ಪಿಸುವ ಗೃಹಜ್ಯೋತಿ ಯೋಜನೆಯು ಆಗಷ್ಟ 2023 ರಂದು ರಾಜ್ಯದ್ಯಾಂತ ಜಾರಿಗೆ ಬಂದಿರುತ್ತದೆ. ಸದರಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 386871 ಅರ್ಹ ಗ್ರಾಹಕರಿದ್ದು, ಅದರಲ್ಲಿ 367854 ಗ್ರಾಹಕರು ಸದರಿ ಯೋಜನೆಯಡಿ ನೋಂದಣಿ ಮಾಡಿಕೊಂಡಿರುತ್ತಾರೆ.
ಸದರಿ ನೋಂದಣಿ ಪ್ರಕಾರ ಒಟ್ಟು 356422 ಅರ್ಹ ಫಲಾನುಭವಿಗಳಾಗಿರುತ್ತಾರೆ. ಸದರಿ ಯೋಜನೆಯಡಿಯಲ್ಲಿ ಶೇಕಡಾ 95.08% ನೋಂದಣಿ ಪ್ರಗತಿ ಆಗಿರುತ್ತದೆ. ಸದರಿ ಯೋಜನೆಯಡಿ ಜಿಲ್ಲೆಗೆ ಆಗಸ್ಟ 2023 ರಿಂದ ಡಿಸೆಂಬರ್-2025 ರ ವರೆಗೆ ಒಟ್ಟು 461.09 ಕೋಟಿ ಸಬ್ಸಿಡಿ ಮೊತ್ತ ಸರ್ಕಾರದಿಂದ ಬಿಡುಗಡೆಯಾಗಿರುತ್ತದೆ ಎಂದರು.
ರಾಜ್ಯದ ಸಮಸ್ತ ಮಹಿಳೆಯರಿಗೆ ರಾಜ್ಯದ ರಸ್ತೆ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವಾದ ಶಕ್ತಿ ಯೋಜನೆಯನ್ನು ದಿನಾಂಕ: 11-06-2023 ರಿಂದ ಜಾರಿಗೆ ಬಂದಿರುತ್ತದೆ. ಅದರಂತೆ ಬೀದರ ಜಿಲ್ಲೆಯಲ್ಲಿ ದಿನಾಂಕ: 11-06-2023 ರಿಂದ 11-01-2026 ರವರೆಗೆ ಒಟ್ಟು 10.92 ಕೋಟಿ ಕೋಟಿ ಮಹಿಳೆಯರು ಪ್ರಯಾಣಿಸಿರುತ್ತಾರೆ. ಸದರಿ ಯೋಜನೆಯಡಿ ಸಂಸ್ಥೆಯ ವಾಹನಗಳಲ್ಲಿ ದಿನಾಂಕ: 11-06-2023 ರಿಂದ 11-01-2026 ರವರೆಗೆ ರೂ. 321.33 ಕೋಟಿ ಸಾರಿಗೆ ಆದಾಯ ಗಳಿಸಿರುತ್ತದೆ. ಸದರಿ ಯೋಜನೆ ಅಡಿಯಲ್ಲಿ ಪ್ರತಿದಿನ ಪ್ರಯಾಣಿಕರಿಂದ ಸರಾಸರಿ ರೂ. 34.00 ಲಕ್ಷ ಸಾರಿಗೆಆದಾಯ ಸಂದಾಯವಾಗುತ್ತಿದೆ.
ಸದರಿ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 1.16 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಬೇರೆ ಊರಿಗೆ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಬಹಳ ಅನುಕೂಲವಾಗಿರುತ್ತದೆ ಎಂದರು.
ಯುವನಿಧಿ ಯೋಜನೆ ನಿರುದ್ಯೋಗ ಯುವಕ/ಯುವತಿಯರಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಮಹಾದಾಸೆಯಿಂದ ಅನುಷ್ಠಾನ ಗೊಂಡ ಯೋಜನೆಯಾಗಿದೆ. ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳಿಗೆ ರೂ. 3000/- (ಮೂರು ಸಾವಿರ ಯಾವುದೇ ಡಿಪ್ಲೋಮಾ ಮುಗಿಸಿದ ಅಭ್ಯರ್ಥಿಗಳಿಗೆ ರೂ. 1500/- (ಒಂದು ಸಾವಿರದ ಐದು ನೂರು) ನೀರುದ್ಯೋಗ ಭತ್ಯೆ ನೀಡಲಾಗುತ್ತಿದೆ. ಯುವನಿಧಿ ಯೋಜನೆಯು 12ನೇ ಜನೇವರಿ 2024 ರಲ್ಲಿ ಜಾರಿಯಾಗಿದ್ದು, ಜನೇವರಿ 2024 ರಿಂದ ಆಗಸ್ಟ -2025 ರ ವರೆಗೆ ಒಟ್ಟು 14,881 ಫಲಾನುಭವಿಗಳಿದ್ದು, ಅದರಲ್ಲಿ ಡಿಗ್ರಿ ಫಲಾನುಭವಿಗಳು =14533 ಮತ್ತು ಡಿಪ್ಲೋಮಾ ಫಲಾನುಭವಿಗಳು= 348 ಒಟ್ಟು ಫಲಾನುಭವಿಗಳು=14,881 ಡಿ.ಬಿ.ಟಿ. ಮೂಲಕ ಇಲ್ಲಿಯವರೆಗೆ ನಿರುದ್ಯೋಗ ಯುವಕ ಯುವತಿಯವರಿಗೆಒಟ್ಟು ಮೊತ್ತರೂ. 30.10 ಕೋಟಿಗಳ ಪಾವತಿಯಾಗಿರುತ್ತದೆಂದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತರಲು ವಿವಿಧ ಕಾರ್ಯಕ್ರಮ, ಕಾರ್ಯಾಗಾರ ನಡೆಸಲಾಗುತ್ತಿದೆ. ನೀರಾವರಿ ಕೆರೆಗಳು, ಇಂಗು ಕೆರೆಗಳುಪಿಕಪ್ಗಳು, ಚೆಕ್ ಡ್ಯಾಂಗಳು ಮತ್ತು ಬಂದಾರಗಳು, ಬ್ಯಾರೇಜುಗಳು, ಬಿ.ಸಿ.ಬಿಗಳು, ಕಿಂಡಿ ಆಣೆಕಟ್ಟುಗಳು ಹಾಗೂ ಏತ ನೀರಾವರಿ ಯೋಜನೆಗಳು ಸೇರಿಕೊಂಡಿವೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ ಬೀದರ ವ್ಯಾಪ್ತಿಯಲ್ಲಿ 2025ನೇ ಆಗಸ್ಟ್ 1ರಲ್ಲಿದಂತೆ ಒಟ್ಟು 359 ಸಣ್ಣ ನೀರಾವರಿ ಯೋಜನೆಗಳು ಅಸ್ತಿತ್ವದಲ್ಲಿದ್ದು, ಇವುಗಳಿಂದ 39896 ಹೆಕ್ಟೇರ್ ಭೂಮಿಗೆ ಪರೋಕ್ಷವಾಗಿ/ಅಪರೋಕ್ಷವಾಗಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 10 ಟಿಎಂಸಿ ನೀರು ರೈತರಿಗೆ ಒದಗಿಸಲು ಕ್ರಮ ವಹಿಸಲಾಗುವುದೆಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಜಲಜೀವನ ಮಿಷನ್ ಯೋಜನೆಯಡಿ 867 ವಸತಿಗಳಿಗೆ 900 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾರಣ ಯೋಜನೆ ಪ್ರಗತಿಯಲ್ಲಿದೆ, ಕೃಷ್ಣಾ ಬೇಸಿನ್ ನಿಂದ ನೇರವಾಗಿ ಬೀದರ ಕಲಬುರಗಿಯ 2055 ರವರೆಗೆ ಜನಸಂಖ್ಯೆಗೆ 1900 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಬೀದರ ಕೋಟೆ ಅಭಿವೃದ್ಧಿಗೆ ಸಂಸದರು 25 ಕೋಟಿ ಅನುದಾನ ತರಿಸಿದ್ದು, ಅಭಿವೃದ್ಧಿ ಪಡಿಸಲಾಗುವುದು. ಔರಾದ ಏತ ನೀರಾವರಿ 550 ಕೋಟಿ ರೂ. ಆರಂಭಿಸಲಾಗಿದೆ. ಭಾಲ್ಕಿಯ 762 ಕೋಟಿ ರೂ. ಮೆಹಕರ್ ಏತ ನೀರಾವರಿ ಯೋಜನೆ ಆರಂಭಿಸಲಾಗಿದೆ. ಶೀಘ್ರವೇ ಪೂರ್ಣಗೊಳಿಸಲಾಗುವುದು. 25 ಸಾವಿರ ಎಕರೆ ಭೂಮಿ ನೀರಾವರಿ ವ್ಯಾಪ್ತಿಗೆ ಒಳಪಡುತ್ತದೆ. ಗ್ಯಾರಂಟಿ ಯೋಜನೆಯಿಂದ ಕೋಟ್ಯಾಂತರ ಜನರಿಗೆ ಸದುಪಯೋಗವಾಗಿದೆಂದರು.
ರಾಜ್ಯದ ತಲಾ ಆದಾಯ 3 ಲಕ್ಷ ದಾಟಿದೆ. ಪ್ರತಿ ವರ್ಷ 2500 ಕೋಟಿ ರೂ. ಖರ್ಚಾಗಿದೆ. ಸಾಹಿತ್ಯ, ಕಲೆ, ಸಂಸ್ಕೃತಿ ಬೆಳೆಸಿ ಉಳಿಸಲು ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ ಕಂಬಳಿವಾಲೆ ಟ್ರಸ್ಟ್ ರಚಿಸಿ ಅನುದಾನ ಬಿಡುಗಡೆ ಮಾಡಲಾಗಿದೆ. ಕರೆಜ್ ರಕ್ಷಣೆಗೆ ಅಗತ್ಯ ಅನುದಾನ ನೀಡಿ ಕಾಮಗಾರಿ ಆರಂಭಿಸಲಾಗುವುದು. ಪಾಪನಾಶ ಅಭಿವೃದ್ಧಿಗೆ 25 ಕೋಟಿ ರೂ. ಕೇಂದ್ರದಿoದ ತರಿಸಲಾಗಿದೆ. ಫೆಬ್ರುವರಿ.6 ರಂದು ಶಂಕುಸ್ಥಾಪನೆ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಆರೋಗ್ಯ ಕ್ಷೇತ್ರದಲ್ಲಿ ಶಿಬಿಲ್ ಸೈಲಿನ್ಸ್ ಕಣ್ಣಿನ ಆಸ್ಪತ್ರೆ, ವಿಶೇಷಚೇತನ ಕ್ಷೇತ್ರದಲ್ಲಿ ಸಂಗಮೇಶ ತಂದೆ ಶರಣಪ್ಪಾ ಭಾವಿದೊಡ್ಡಿ, ಎಲೆಕ್ಟಾçನಿಕ್ ಮೀಡಿಯಾ ಕ್ಷೇತ್ರದಲ್ಲಿ ಶಿವಾನಂದ ತಂದೆ ಮಲ್ಲಪ್ಪ ಅಮರಗೋಳ, ಪತ್ರಿಕಾ (ಮುದ್ರಣ) ಕ್ಷೇತ್ರದಲ್ಲಿ ರಮೇಶ ರೆಡ್ಡಿ ತಂದೆ ಬಸವರೆಡ್ಡಿ, ಯೋಗಾ ಕ್ರೀಡಾ ಕ್ಷೇತ್ರದಲ್ಲಿ ಶೃದ್ದಾ ತಂದೆ ಶರಣಬಸಪ್ಪ ಎಸ್.ಪಾಟೀಲ್, ಜಾನಪದ ಭೂತೇರ ನೃತ್ಯ ಕ್ಷೇತ್ರದಲ್ಲಿ ಭಾರತ ತಂದೆ ಮಾರುತಿ, ಸಾಹಿತ್ಯ ಕ್ಷೇತ್ರದಲ್ಲಿ ಓಂಕಾರ ತಂದೆ ಬಸವರಾಜ ಉಪ್ಪೆ, ಕೈಗಾರಿಕೆ ಕ್ಷೇತ್ರದಲ್ಲಿ ಸಂತೋಷಕುಮಾರ ತಂದೆ ರಾಜಕುಮಾರ ಲದ್ದೆ, ಪತ್ರಿಕಾ ಮಾಧ್ಯಮ ಕ್ಷೇತ್ರದಲ್ಲಿ ದಿ.ನಾಗಶೆಟ್ಟಿ ಧರಂಪೂರೆ, ರಾಷ್ಟçಮಟ್ಟದ ಜೂನಿಯರ್ ಮಿಸ್ ಇಂಡಿಯಾ 2ನೇ ರನ್ನರಪ್ ಆದ ಪೂರ್ವಿ ತಂದೆ ಸಂಜಯಕುಮಾರ ಬಿರಾದರ್ ಅವರುಗಳಿಗೆ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಸಾಗರ ಈಶ್ವರ ಖಂಡ್ರೆ, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಮಾರುತಿರಾವ ಮೂಳೆ, ಬೀದರ ನಗರಸಭೆ ಅಧ್ಯಕ್ಷರಾದ ಮಹ್ಮದ ಗೌಸ್, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಬೀದರ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.






Any questions related to ಎಲ್ಲಾ ವರ್ಗದವರಿಗೂ ನ್ಯಾಯ ಕಲ್ಪಿಸಿರುವ ನಮ್ಮ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ-ಸಚಿವ ಈಶ್ವರ ಬಿ.ಖಂಡ್ರೆ.?