22/05/2025 5:56 PM

Translate Language

Home » ಲೈವ್ ನ್ಯೂಸ್ » ಎಎಪಿ ತೊರೆದ 8 ಶಾಸಕರು ಬಿಜೆಪಿ ಸೇರ್ಪಡೆ

ಎಎಪಿ ತೊರೆದ 8 ಶಾಸಕರು ಬಿಜೆಪಿ ಸೇರ್ಪಡೆ

Facebook
X
WhatsApp
Telegram

ಹೊಸ ದೆಹಲಿ : ದೆಹಲಿ ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸುತ್ತಿದ್ದ ಆಮ್ ಆದ್ಮಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಎರಡೂ ಪಕ್ಷ ಅಧಿಕಾರಕ್ಕೆ ಬರುವ ಉದ್ದೇಶದಿಂದ ತುಂಬಾ ಪೈಪೋಟಿ ನಡೆಯುತ್ತಿದೆ.

ಆಮ್ ಆದ್ಮಿ ಪಕ್ಷಕ್ಕೆ ಶುಕ್ರವಾರ ಭಾರಿ ಆಘಾತ ಎದುರಾಗಿತ್ತು. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಪಕ್ಷಕ್ಕೆ 8 ಶಾಸಕರು ರಾಜೀನಾಮೆ ನೀಡಿದ್ದರು. ಶನಿವಾರ ಈ ಎಂಟೂ ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು ಎಎಪಿಗೆ ಮತ್ತೊಂದು ಆಘಾತ ನೀಡಿದ್ದಾರೆ.

ಪಾಲಂ ಕ್ಷೇತ್ರದ ವಂದನಾ ಗೌರ್, ತ್ರಿಲೋಕಪುರಿ ಕ್ಷೇತ್ರದ ಶಾಸಕ ರೋಹಿತ್ ಮೆಹ್ರೌಲಿಯಾ, ಮದೀಪುರ ಕ್ಷೇತ್ರದ ಗಿರೀಶ್ ಸೋನಿ, ಕಸ್ತೂರಿಬಾ ನಗರ ಕ್ಷೇತ್ರದ ಮದನ್‌ ಲಾಲ್, ಉತ್ತಮ್ ನಗರ ಕ್ಷೇತ್ರದ ರಾಜೇಶ್ ರಿಷಿ, ಬಿಜ್ವಾಸನ್ ಕ್ಷೇತ್ರದ ಬಿಎಸ್ ಜೂನ್, ಮೆಹ್ರೌಲಿ ಕ್ಷೇತ್ರದ ನರೇಶ್ ಯಾದವ್ ಮತ್ತು ಆದರ್ಶ ನಗರ ಕ್ಷೇತ್ರದ ಶಾಸಕ ಪವನ್ ಶರ್ಮಾ ಬಿಜೆಪಿಗೆ ಸೇರಿದ್ದಾರೆ.

ಎಎಪಿ ತೊರೆದು ಬಿಜೆಪಿ ಸೇರಿರುವ 8 ಶಾಸಕರಲ್ಲಿ ಏಳು ಮಂದಿಗೆ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರಾಕರಿಸಲಾಗಿತ್ತು. ಇದರಿಂದ ಏಳು ಜನ ಶಾಸಕರು ಎಎಪಿ ವಿರುದ್ಧ ಸಿಟ್ಟಾಗಿದ್ದರು ಎಂದು ವರದಿಯಾಗಿದೆ.

ಮೆಹ್ರೌಲಿ ಶಾಸಕ ನರೇಶ್ ಯಾದವ್ ಅವರಿಗೆ ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿತ್ತು. ಬಳಿಕ ಪಂಜಾಬ್‌ನಲ್ಲಿ ನಡೆದ ಕುರಾನ್ ಅಪವಿತ್ರ ಪ್ರಕರಣದಲ್ಲಿ ಅವರ ಮೇಲಿನ ಆರೋಪಗಳು ಸಾಬೀತಾದ ಬಳಿಕ ಅವರು ಸ್ಪರ್ಧೆಯಿಂದ ಹಿಂದೆ ಸರಿದರು, ಅವರ ಬದಲಾಗಿ ಮಹೇಂದರ್ ಚೌಧರಿ ಅವರಿಗೆ ಮೆಹ್ರೌಲಿ ಕ್ಷೇತ್ರದಿಂದ ಸ್ಪಧಿರ್ಸಲು ಟಿಕೆಟ್ ನೀಡಲಾಗಿದೆ. ಈ ನಿರ್ಧಾರದಿಂದ ಬೇಸರಗೊಂಡಿದ್ದ ನರೇಶ್ ಯಾದವ್ ಶುಕ್ರವಾರ ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದು ಈಗ ಬಿಜೆಪಿ ಸೇರಿದ್ದಾರೆ.

ಎಎಪಿಗೆ ರಾಜೀನಾಮೆ ನೀಡಿದ ಬಳಿಕ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ವಿಧಾನಸಭಾ ಸ್ಪೀಕರ್‌ಗೆ ಸಲ್ಲಿಸಿ, ಸದನದ ಸದಸ್ಯತ್ವವನ್ನು ತ್ಯಜಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಶನಿವಾರ ಬಿಜೆಪಿ ಸೇರ್ಪಡೆ

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಮತ್ತು ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರ ಸಮ್ಮುಖದಲ್ಲಿ ಮಾಜಿ ಎಎಪಿ ನಾಯಕರು ಬಿಜೆಪಿ ಸೇರ್ಪಡೆಯಾದರು. ಎಲ್ಲರಿಗೂ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡ ಬೈಜಯಂತ್ ಪಾಂಡಾ, ಇದು ಐತಿಹಾಸಿಕ ದಿನ ಎಂದು ಕರೆದಿದ್ದಾರೆ. ಈ ನಾಯಕರು “ಅಪ್ಡಾ” (ವಿಪತ್ತು) ದಿಂದ ಮುಕ್ತವಾಗಿದ್ದಾರೆ. ಫೆಬ್ರವರಿ 5ರ ಚುನಾವಣೆ ಬಳಿಕ ದೆಹಲಿ ಕೂಡ ಎಎಪಿಯಿಂದ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.

ಪಾಲಂ ಶಾಸಕಿ ಭಾವನಾ ಗೌರ್, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದು, ನಿಮ್ಮ ಮತ್ತು ಪಕ್ಷದ ಮೇಲೆ ನಂಬಿಕೆ ಕಳೆದುಕೊಂಡಿರುವುದರಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದಲ್ಲಿ ಪ್ರಮುಖರ್  ಕಂಟ್ರೋಲ್ ಎಲ್ಲಾ ಕಂಡುಬರುತ್ತಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!