Home » ಲೈವ್ ನ್ಯೂಸ್ » ಉನ್ನತ ಶಿಕ್ಷಣ ಇಲಾಖೆ ಯುಜಿಸಿ ಅರ್ಹತೆ ಹೊಂದಿದ ಅರ್ಹ ಉಪನ್ಯಾಸಕರಿಗೆ ಅನ್ಯಾಯ|

ಉನ್ನತ ಶಿಕ್ಷಣ ಇಲಾಖೆ ಯುಜಿಸಿ ಅರ್ಹತೆ ಹೊಂದಿದ ಅರ್ಹ ಉಪನ್ಯಾಸಕರಿಗೆ ಅನ್ಯಾಯ|

Facebook
X
WhatsApp
Telegram

ಬೆಂಗಳೂರು.22.ಮಾರ್ಚ್.26: ಉನ್ನತ ಶಿಕ್ಷಣ ಇಲಾಖೆಯ ಶೈಕ್ಷಣಿಕ ಸಂಯೋಜಕರ ಹುದ್ದೆ ಸೃಷ್ಟಿ; ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದ ನಿಗದಿತ ವಿದ್ಯಾರ್ಹತೆ ಹೊಂದದ ಮತ್ತು ಇದೇ ಕಾರಣದಿಂದ ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿಯಲಿರುವ 3,863, ಅತಿಥಿ ಉಪನ್ಯಾಸಕರಿಗಾಗಿಯೇ ಶೈಕ್ಷಣಿಕ ಸಂಯೋಜಕರು ಹೆಸರಿನಲ್ಲಿ ಹುದ್ದೆಗಳನ್ನು ಸೃಜಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರಕಾರವು, ಅರ್ಹತೆ ಹೊಂದಿರುವ ಅಂದಾಜು 1,500 ಸಂಖ್ಯೆಯ ಸ್ನಾತಕೋತ್ತರ ಪದವೀಧರರನ್ನು ಅತಿಥಿ ಉಪನ್ಯಾಸಕರ ಹುದ್ದೆಯಿಂದ ಬೀದಿಪಾಲಾಗಿದ್ದಾರೆ.

ರಾಜ್ಯ ಸರಕಾರದ ಈ ನಿರ್ಧಾರದಿಂದಾಗಿ ಅರ್ಹತೆ ಹೊಂದಿರುವ ಇಷ್ಟೇ ಸಂಖ್ಯೆಯ ಸ್ನಾತಕೋತ್ತರ ಪದವೀಧರರು ಅತಿಥಿ ಉಪನ್ಯಾಸಕರ ಹುದ್ದೆಗಳನ್ನೇ ಕಿತ್ತುಕೊಂಡಂತಾಗಿದೆ. ನ್ಯಾಯಾಲಯದ ನಿರ್ದೇಶನದ ವಿರುದ್ಧ ಬೇರೊಂದು ಮಾರ್ಗದಿಂದ ನಿಗದಿತ ವಿದ್ಯಾರ್ಹತೆಯಿಲ್ಲದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಹೊರಟಿದೆ. ಅಲ್ಲದೇ ಸರಕಾರವು, ಶೈಕ್ಷಣಿಕ ಸಂಯೋಜಕರ ಹುದ್ದೆಯನ್ನು ಸೃಜಿಸುವುದರಿಂದ ಮೊದಲ ವರ್ಷದಲ್ಲೇ ಅಂದಾಜು 88.06 ಕೋಟಿಯಷ್ಟು ಆರ್ಥಿಕ ಹೊರೆಯನ್ನು ಮೈ ಮೇಲೆ ಎಳೆದುಕೊಂಡಿದೆ. ಆರ್ಥಿಕ ಹೊರೆ ಮೊತ್ತವು ಮುಂದಿನ ವರ್ಷಗಳಲ್ಲಿ ದುಪ್ಪಟ್ಟಾಗಲಿದೆ.

ಈ ಸಂಬಂಧ ‘the-file.in’ ಸಮಗ್ರ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

ವಿದ್ಯಾರ್ಹತೆ ಹೊಂದಿರದ ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ಸಂಯೋಜಕರುಗಳನ್ನಾಗಿ ತಾತ್ಕಾಲಿಕವಾಗಿ ನೇಮಿಸಿಕೊಳ್ಳಲು ಆರ್ಥಿಕ ಇಲಾಖೆಯು ಬಲವಾಗಿ ಆಕ್ಷೇಪಿಸಿತ್ತು ಮತ್ತು ಈ ಪ್ರಸ್ತಾವವನ್ನು ಪರಿಗಣಿಸುವುದು ಸೂಕ್ತವಾಗಿಲ್ಲ ಎಂದು ಆರ್ಥಿಕ ಇಲಾಖೆಯು ಸ್ಪಷ್ಟವಾಗಿ ನೀಡಿದ್ದ ಅಭಿಪ್ರಾಯವನ್ನೂ ಬದಿಗೊತ್ತಿರುವುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.

ಪ್ರಥಮದರ್ಜೆ ಕಾಲೇಜುಗಳು ಮತ್ತು ಇಂಜಿನಿಯರಿಂಗ್ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳಲ್ಲಿ ಕಳೆದ 2003ರಿಂದಲೂ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಯುಜಿಸಿ ನಿಯಮಾವಳಿಗಳ ಪ್ರಕಾರ ಉಪನ್ಯಾಸಕರ ಹುದ್ದೆಗೆ ನಿಗದಿಪಡಿಸಿದ ವಿದ್ಯಾರ್ಹತೆ ಆಧಾರದ ಮೇಲೆ 2012ರಿಂದಲೂ ಸೇವಾ ಅನುಭವ ಹಾಗೂ ಎನ್‌ಇಟಿ, ಎಸ್‌ಎಲ್‌ಇಟಿ, ಪಿಎಚ್‌ಡಿ, ಎಂಫಿಲ್ ವಿದ್ಯಾರ್ಹತೆಗಳಿಗೆ ಆದ್ಯತಾ ಅಂಕಗಳ ಮಾನದಂಡಗಳನ್ನು ಅನುಸರಿಸಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ.

2022ರಲ್ಲಿ ಅತಿಥಿ ಉಪನ್ಯಾಸಕರಿಗೆ ಗರಿಷ್ಠ ಗಂಟೆಗಳ ಕಾರ್ಯಭಾರವನ್ನು ಹೆಚ್ಚಿಸಿತ್ತಲ್ಲದೇ ಗೌರವಧನದಲ್ಲಿ ಏರಿಕೆ ಮಾಡಿ ಆದೇಶ ಹೊರಡಿಸಿತ್ತು.

ಇದೇ ಆದೇಶದಲ್ಲಿಯೇ ಯುಜಿಸಿ ನಿಗದಿಪಡಿಸಿದ್ದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ನಿಗದಿತ ವಿದ್ಯಾರ್ಹತೆ ಹೊಂದಲು 3 ವರ್ಷಗಳ ಕಾಲಾವಧಿ ನೀಡಲಾಗಿತ್ತು. ಅಲ್ಲದೇ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಿತ್ತು.

ಈ ಮಧ್ಯೆ ಅತಿಥಿ ಉಪನ್ಯಾಸಕರ ಆಯ್ಕೆಗೆ ನೀಡಲಾಗುತ್ತಿದ್ದ 100 ಅಂಕಗಳ ಮಾನದಂಡಗಳ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು, ಯುಜಿಸಿ ವಿದ್ಯಾರ್ಹತೆಯ ಅನ್ವಯ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಯು (ಸಂಖ್ಯೆ 23600/2023) ದಾಖಲಾಗಿತ್ತು. ಈ ಅರ್ಜಿಗೆ ಸಂಬಂಧಿಸಿದಂತೆ 2024ರ ಸೆ.5ರಂದು ನ್ಯಾಯಾಲಯವು ತೀರ್ಪು ನೀಡಿತ್ತು.

ಈ ತೀರ್ಪಿನ ಕುರಿತು ರಾಜ್ಯ ಸರಕಾರವು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅಪೀಲು (ಸಂಖ್ಯೆ 1578/2024) ಸಲ್ಲಿಸಿತ್ತು. ಆದರೆ ಹೈಕೋರ್ಟ್ 2025ರ ಅಕ್ಟೋಬ‌ರ್ 8ರಂದು ಈ ರಿಟ್ ಅಪೀಲನ್ನು ವಜಾಗೊಳಿಸಿತ್ತು. ಅಲ್ಲದೇ 2024ರ ಸೆ.5ರಂದು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು. ಈ ನಿರ್ದೇಶನದ ಪ್ರಕಾರ 2025-26ನೇ ಸಾಲಿನಲ್ಲಿ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನಷ್ಟೇ ಸೇವಾ ಅನುಭವ ಆಧಾರದ ಮೇಲೆ ಆನ್‌ಲೈನ್ ಕೌನ್ಸೆಲಿಂಗ್‌ ಮೂಲಕ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಂಡಿತ್ತು.

ಹೀಗಾಗಿ ಕಳೆದ ಹಲವಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದ ಯುಜಿಸಿ ವಿದ್ಯಾರ್ಹತೆ ಹೊಂದಿರದ ಸುಮಾರು 3,853ಕ್ಕೂ ಹೆಚ್ಚಿನ ಸಂಖ್ಯೆಯ ಅತಿಥಿ ಉಪನ್ಯಾಸಕರು ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಇಂತಹ ಅತಿಥಿ ಉಪನ್ಯಾಸಕರಿಗೆ ಜೀವನ ನಿರ್ವಹಣೆಯು ದುಸ್ತರವಾಗಲಿದೆ ಎಂದು ಹಲವರು ಸರಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದರು. ಈ ಮನವಿಗಳನ್ನು ಪುರಸ್ಕರಿಸಿರುವ ಸರಕಾರವು ಯುಜಿಸಿ ನಿಗದಿಪಡಿಸಿದ್ದ ವಿದ್ಯಾರ್ಹತೆ ಹೊಂದಿರುವ ಸ್ನಾತಕೋತ್ತರ ಪದವೀಧರರನ್ನು ಅತಿಥಿ ಉಪನ್ಯಾಸಕ ಹುದ್ದೆಯಿಂದ ದೂರವುಳಿಯುವಂತೆ ಮಾಡಿದೆ.

ಈ ತೀರ್ಪಿನ ಕುರಿತು ರಾಜ್ಯ ಸರಕಾರವು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅಪೀಲು (ಸಂಖ್ಯೆ 1578/2024) ಸಲ್ಲಿಸಿತ್ತು. ಆದರೆ ಹೈಕೋರ್ಟ್ 2025ರ ಅಕ್ಟೋಬ‌ರ್ 8ರಂದು ಈ ರಿಟ್ ಅಪೀಲನ್ನು ವಜಾಗೊಳಿಸಿತ್ತು. ಅಲ್ಲದೇ 2024ರ ಸೆ.5ರಂದು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು. ಈ ನಿರ್ದೇಶನದ ಪ್ರಕಾರ 2025-26ನೇ ಸಾಲಿನಲ್ಲಿ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನಷ್ಟೇ ಸೇವಾ ಅನುಭವ ಆಧಾರದ ಮೇಲೆ ಆನ್‌ಲೈನ್ ಕೌನ್ಸೆಲಿಂಗ್‌ ಮೂಲಕ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಂಡಿತ್ತು.

ಹೀಗಾಗಿ ಕಳೆದ ಹಲವಾರು ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದ ಯುಜಿಸಿ ವಿದ್ಯಾರ್ಹತೆ ಹೊಂದಿರದ ಸುಮಾರು 3,863ಕ್ಕೂ ಹೆಚ್ಚಿನ ಸಂಖ್ಯೆಯ ಅತಿಥಿ ಉಪನ್ಯಾಸಕರು ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿದಿದ್ದರು. ಇಂತಹ ಅತಿಥಿ ಉಪನ್ಯಾಸಕರಿಗೆ ಜೀವನ ನಿರ್ವಹಣೆಯು ದುಸ್ತರವಾಗಲಿದೆ ಎಂದು ಹಲವರು ಸರಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದರು. ಈ ಮನವಿಗಳನ್ನು ಪುರಸ್ಕರಿಸಿರುವ ಸರಕಾರವು ಯುಜಿಸಿ ನಿಗದಿಪಡಿಸಿದ್ದ ವಿದ್ಯಾರ್ಹತೆ ಹೊಂದಿರುವ ಸ್ನಾತಕೋತ್ತರ ಪದವೀಧರರನ್ನು ಅತಿಥಿ ಉಪನ್ಯಾಸಕ ಹುದ್ದೆಯಿಂದ ದೂರವುಳಿಯುವಂತೆ ಮಾಡಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology