ಬೀದರ.23.ಜುಲೈ.25:- ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ (SPREE) 2025 ಕಾರ್ಮಿಕರ ರಾಜ್ಯ ವಿಮಾ ನಿಗಮವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದಿಸಿದ ಒಂದು ವಿಶೇಷ ಉಪಕ್ರಮವಾಗಿದೆ, ದಿನಾಂಕ 1 ನೇ ಜುಲೈನಿಂದ 31 ಡಿಸೆಂಬರ್ 2025 ರಿಂದ ಸಕ್ರಿಯವಾಗಿದ್ದು, ಗುತ್ತಿಗೆ ಹಾಗೂ ತಾತ್ಕಾಲಿಕ ಕಾರ್ಮಿಕರು ಸೇರಿದಂತೆ ಇಎಸ್‍ಇ ಅಡಿಯಲ್ಲಿ ಇನ್ನೂ ನೋಂದಾವಣೆಯಾಗದ ಉದ್ಯೋಗದಾತರು ಮತ್ತು ಉದ್ಯೋಗಿಗಳ ಯಾವುದೇ ಪರಿಶೀಲನೆ ಅಥವಾ ಹಿಂದಿನ ಅವಧಿಯ ಯಾವುದೇ ಬಾಕಿಯ ಬೇಡಿಕೆ ಇಲ್ಲದೇ ನೋಂದಾಯಿಸಲು ಒಂದು ಬಾರಿಯ ಅವಕಾಶವನ್ನು ಕಲ್ಪಿಸಲಾಗಿದೆ.
(SPREE) 2025 ರ ಅಡಿಯಲ್ಲಿ ಉದ್ಯೋಗದಾತರು ತಮ್ಮ ಘಟಕಗಳು ಮತ್ತು ಉದ್ಯೋಗಿಗಳನ್ನು ಇಎಸ್‍ಐಸಿ ಪೋರ್ಟಲ್, ಶ್ರಮ್ ಸುವಿಧಾ ಮತ್ತು ಎಂಸಿಎ (ESIC Portal, Shram Suvidhaa, MCA) ಪೆÇೀರ್ಟಲ್ ಮೂಲಕ ಡಿಜಿಟಲ್ ನೋಂದಾಯಿಸಿಕೊಳ್ಳಬಹುದು. ತಾವು ಘೋಷಿಸಿದ ದಿನಾಂಕದಿಂದ ನೋಂದಣಿಯನ್ನು ನಡೆಸಲಾಗಿದೆ, ನೋಂದಣಿಯ ಪೂರ್ವ ಅವಧಿಗೆ ಯಾವುದೇ ವಂತಿಗೆ ಮತ್ತು ಸೌಲಭ್ಯವನ್ನು ಹೊಂದಿದೆ ಅನ್ವಯಿಸುವುದಿಲ್ಲ, ನೋಂದಣಿಯ ಪೂರ್ವ ಅವಧಿ ಯಾವುದೇ ದಾಖಲೆಗಳ ಪರಿಶೀಲನೆ ಅಥವಾ ಬೇಡಿಕೆ ಇರುವುದಿಲ್ಲ.
ಈ ಯೋಜನೆಯು ಸ್ವಯಂ ಪ್ರೇರಿತವಾದ ಅನುಸರಣೆಯನ್ನು ಪೆÇ್ರೀತ್ಸಾಹಿಸಿ, ಹಿಂದಿನ ಅವಧಿಗೆ ದಂಡ ವಿಧಿಸಬೇಕಾದ ಭಯವನ್ನು ಹೋಗಲಾಡಿಸಿ . ನೋಂದಾವಣಿಯ ಲಕ್ಷಣವನ್ನು ಸರಳೀಕರಿಸಲಾಗಿದೆ. SPREE 2025 ನ್ನು ಅನುಮೋದಿಸುವ ಮೊದಲು ನಿಗಧಿತ ಅವಧಿಯಲ್ಲಿ ನೋಂದಾವಣೆ ಮಾಡಲಾಗಿತ್ತು ಕಾನೂನು ಕ್ರಮ ಹಾಗೂ ಹಿಂದಿನ ಅವಧಿಯ ಬಾಕಿ ಬೇಡಿಕೆ ಕಾರಣವಾಗುತ್ತಿತ್ತು. SPREE 2025 ಈ ಅಡೆತಡೆಗಳನ್ನು ನಿವಾರಿಸಿ ನೋಂದಾವಣೆಯಿಂದ ಬಿಟ್ಟುಹೋದ ಘಟಕಗಳು ಮತ್ತು ಕಾರ್ಮಿಕರನ್ನು ಇಎಸ್‍ಐ ವ್ಯಾಪ್ತಿಯೊಳಗೆ ಸಾಮಾಜಿಕವಾಗಿ ಸೇರಿಸಿ ಭದ್ರತೆಯನ್ನು ಖಚಿತಪಡಿಸುತ್ತದೆ.
SPಖಇಇ 2025 ರ ಪ್ರಾರಂಭವು ಕಾರ್ಮಿಕರ ರಾಜ್ಯ ವಿಮಾ ನಿಗಮದ ಒಂದು ಪ್ರಗತಿಪರ ಹೆಜ್ಜೆಯಾಗಿದ್ದು, ಸರಳ ಮತ್ತು ಹಿಂದಿನ ಅವಧಿಯ ಬಾಕಿಯ ಬೇಡಿಕೆಯಿಲ್ಲ ನೋಂದಾವಣೆಯಾಗಿ ಸುಲಭವಾಗಿ ಸಾಮಾಜಿಕ ಭದ್ರತೆಗೆ ಒಳಪಡುವ ಯೋಜನೆಯಾಗಿದೆ. ಈ ಯೋಜನೆಯು ಉದ್ಯೋಗದಾತರು ಕೇವಲ ತಮ್ಮ ಕಾರ್ಯಪಡೆಯ ಕ್ರಮಬದ್ಧಗೊಳಿಸುವಿಕೆ ಪೆÇ್ರೀತ್ಸಾಹಿಸುವುದಲ್ಲದೆ, ಇನ್ನೂ ಹೆಚ್ಚಿನ ಕಾರ್ಮಿಕರನ್ನು ವಿಶೇಷವಾಗಿ ಗುತ್ತಿಗೆ ವಲಯದ ಕಾರ್ಮಿಕರು ಇಎಸ್‍ಐ ಕಾಯ್ದೆಯಡಿಯಲ್ಲಿ ದೊರೆಯುವ ಅಗತ್ಯ ಆರೋಗ್ಯ ರಕ್ಷಣೆ ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಪಡೆಯುವುದನ್ನು ಉತ್ತೇಜಿಸುತ್ತದೆ.
ಇದರೊಂದಿಗೆ ಇಎಸ್‍ಐಸಿಯು ಅಗತ್ಯ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯನ್ನು ತಲುಪಿಸುವ ತನ್ನ ಬದ್ಧತೆಯನ್ನು ಉಳಿಸಿಕೊಂಡು ಭಾರತ ಕಾರ್ಮಿಕ ಕಲ್ಯಾಣ ಕೇಂದ್ರಿತ ದೃಷ್ಟಿಕೋನಕ್ಕೆ ಅನುಗುಣವಾಗಿ ಎಂದು ಕಾರ್ಮಿಕರ ರಾಜ್ಯ ವಿಮಾ ನಿಗಮದ ಶಾಖಾ ಕಚೇರಿ ಬೀದರನ ಶಾಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


